ಧರ್ಮಶಾಲಾ: ಭಾನುವಾರ ನಡೆದ ವಿಶ್ವಕಪ್ನ 21ನೇ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್(IND vs NZ) ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಹಾಲಿ ಆವೃತ್ತಿಯಲ್ಲಿ ಸತತ 5ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ(Rohit Sharma) ಅವರು ವಿರಾಟ್ ಕೊಹ್ಲಿ(Virat Kohli) ನೀಡಿದ ಸಲಹೆಯೊಂದನ್ನು ಕಡ್ಡಿ ಮುರಿದಂತೆ ಕಡೆಗಣಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ರೋಹಿತ್ ಅವರ ಈ ವರ್ತನೆ ಕಂಡು ಟೀಮ್ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ನ್ಯೂಜಿಲ್ಯಾಂಡ್ ಆರಂಭಿಕ ಆಘಾತ ಎದುರಿಸಿತು. 19 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆ ಬಳಿಕ ಬಂದ ಡ್ಯಾರಿಯಲ್ ಮಿಚೆಲ್ ಮತ್ತು ರಚೀನ್ ರವೀಂದ್ರ ಸೇರಿಕೊಂಡು ದೊಡ್ಡ ಇನಿಂಗ್ಸ್ ಕಟ್ಟಿದರು. ಈ ಜತೆಯಾಟವನ್ನು ಮುರಿಯಲು ವಿರಾಟ್ ಅವರು ರೋಹಿತ್ ಬಳಿ ಬಂದು ಈ ರೀತಿ ಫೀಲ್ಡಿಂಗ್ ಸೆಟ್ ಮಾಡಿದರೆ ವಿಕೆಟ್ ಪಡೆಯಬಹುದು ಎಂದು ಸಲಹೆಯೊಂದನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ನೀಡಿದ ಸಲಹೆಯನ್ನು ಸರಿಯಾಗಿ ಕೇಳಿಕೊಳ್ಳುವ ತಾಳ್ಮೆಯನ್ನೂ ತೋರದ ರೋಹಿತ್ ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೋಹಿತ್ ಅವರ ಈ ವರ್ತನೆಯಿಂದ ವಿರಾಟ್ ಅವರು ಬೇಸರಗೊಂಡದ್ದು ಕ್ಯಾಮೆರದಲ್ಲಿ ಸೆರೆಯಾಗಿದೆ. ತಾನು ನೀಡಿದ ಸಲಹೆಯನ್ನು ಪರಿಗಣಿಸದಿದ್ದರೂ ಕೇಳುವ ತಾಳ್ಮೆಯನ್ನೂ ತೋರಲಿಲ್ಲವಲ್ಲ ಎನ್ನುವ ರೀತಿಯಲ್ಲಿ ಕೊಹ್ಲಿ ಬೇಸರಗೊಂಡಂತೆ ಕಾಣಿಸಿತು. ಈ ವಿಡಿಯೊ ವೈರಲ್ ಆಗಿದೆ.
#rohitsharma not listening to #ViratKohli in between overs of #INDvsNZ sad to see this pic.twitter.com/58UMNeGA3u
— sampath { R C B♥️} (@sampathganesh11) October 22, 2023
ವಿರಾಟ್ ಕೊಹ್ಲಿಯ ಸಲಹೆಯನ್ನು ಕೇಳುತ್ತಿದ್ದರೆ ರವೀಂದ್ರ ಮತ್ತು ಡೇರಿಯಲ್ ಮಿಚೆಲ್ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಈ ಜೋಡಿ ಮೂರನೇ ವಿಕೆಟ್ಗೆ 159 ರನ್ಗಳನ್ನು ರಾಶಿ ಹಾಕಿತು. ಮಿಚೆಲ್ ಶತಕ ಬಾರಿಸಿ ಸಂಭ್ರಮಿಸಿದರೆ, ರವೀಂದ್ರ 75 ರನ್ ಗಳಿಸಿ ಅರ್ಧಶತಕ ಬಾರಿಸಿದರು. ಕೊಹ್ಲಿಯ ಸಲಹೆಯನ್ನು ಕಡೆಗಣಿಸಿದಕ್ಕೆ ನೆಟ್ಟಿಗರು ರೋಹಿತ್ ಮೇಲೆ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕನಾಗಿದ್ದರು ಕೆಲವು ಬಾರಿ ಆಟಗಾರನ ಸಲಹೆಯನ್ನು ಕೇಳಬೇಕು ಇದು ಬಿಟ್ಟು ದರ್ಪ ತೋರುವುದಲ್ಲ ಒಂದೊಮ್ಮೆ ಪಂದ್ಯ ಸೋತರೇ ನೀವೇ ಕಾರಣವಾಗುತ್ತಿದ್ದೀರಿ, ಮುಂದಿನ ಪಂದ್ಯದಲ್ಲಾದರೂ ಆಟಗಾರರ ಸಲಹೆಯನ್ನು ತಾಳ್ಮೆಯಿಂದ ಕೇಳುವಂತರಾಗಿ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ IND vs NZ: 2 ಕ್ಯಾಚ್ ಹಿಡಿದು ದಾಖಲೆ ಬರೆದ ಕಿಂಗ್ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್
ಪಂದ್ಯ ಗೆದ್ದ ಭಾರತ
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 50 ಓವರ್ಗಳಲ್ಲಿ 273 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 48 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ನ್ಯೂಜಿಲ್ಯಾಂಡ್ನ ಡ್ಯಾರೆಲ್ ಮಿಚೆಲ್ (130) ಅವರ ಶತಕದ ಸಾಧನೆ ಮಂಕಾಯಿತು.