Site icon Vistara News

Cauvery water dispute: ಕಾವೇರಿ ವಿವಾದದ ಬಗ್ಗೆ ಧೋನಿ ಐಪಿಎಲ್​ ವೇಳೆ ಹೇಳಿದ್ದೇನು?

MS Dhoni IPL

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ಕಾವೇರಿ(Cauvery water dispute) ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಮಂಗಳವಾರ ಪ್ರತಿಭಟನೆ ಮಾಡಿತ್ತು. ಸೆ. 29ರಂದು ಸಂಪೂರ್ಣ ಕರ್ನಾಟಕ ಬಂದ್‌ ಮಾಡಲಾಗುವುದು ಎಂದು ಈಗಾಗಲೇ ಹಲವು ಸಂಘಟನೆಗಳು ಘೋಷಣೆ ಮಾಡಿದೆ. ಈ ಮಧ್ಯೆ 2018ರಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಕಾವೇರಿ ವಿಚಾರದಲ್ಲಿ ನೀಡಿದ ಹೇಳಿಯೊಂದು ಈಗ ವೈರಲ್​(viral news) ಆಗುತ್ತಿದೆ.

ಧೋನಿ ಏನು ಹೇಳಿದ್ದರು?

2018ರ ಐಪಿಎಲ್​ನಲ್ಲಿ ಕಾವೇರಿ ಹೋರಾಟದಲ್ಲಿ ತಮಿಳುನಾಡಿಗೆ ಬೆಂಬಲ ಸೂಚಿಸಿ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡುವಂತೆ ನಾಯಕ ಧೋನಿಗೆ ಒತ್ತಾಯಿಸಲಾಗಿತ್ತು. ಆದರೆ ಧೋನಿ ಉಭಯ ರಾಜ್ಯಗಳ ಜಲವಿವಾದದ ವಿಚಾರವಾಗಿ ‘ನಾನು ಇಲ್ಲಿ ಆಟ ಆಡುವುದಕ್ಕೆ ಬಂದವನು. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಕರ್ನಾಟಕ ಸೇರಿ ಯಾವುದೇ ರಾಜ್ಯದ ವಿರೋಧಿಯಾಗುವುದಿಲ್ಲ” ಎಂದು ಹೇಳುವ ಮೂಲಕ ಪ್ರಬುದ್ಧತೆ ತೋರಿದ್ದರು. ಧೋನಿ ಅವರ ಅಂದಿನ ಈ ಹೇಳಿಕೆ ಈಗ ವೈರಲ್​ ಆಗುತ್ತಿದೆ.

ಮಂಗಳವಾರ ಕೆಲ ಕಿಡಿಗೇಡಿಗಳು ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕನ್ನಡಿಗ ಕೆ.ಎಲ್​ ರಾಹುಲ್​ ಅವರ ನಕಲಿ ಟ್ವಿಟ್​ ಖಾತೆ ತೆರದು ಕರ್ನಾಟಕಕ್ಕೆ ಬೆಂಬಲ ಸೂಚಿಸಿ ಟ್ವೀಟ್​ ಒಂದನ್ನು ಮಾಡುವ ಮೂಲಕ ಅವರ ಹೆಸರನ್ನು ದುರುಪಯೋಗ ಪಡಿಸಿದ್ದರು.

ಟ್ವೀಟ್​ನಲ್ಲಿ ಏನಿದೆ?

ರಾಹುಲ್​ ಅವರ ಹೆಸರಿನ ನಕಲಿ ಖಾತೆ ಟ್ವಿಟರ್​ನಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ, ರಾಹುಲ್​ ಅವರ ಶತಕದ ಫೋಟೊವೊಂದನ್ನು ಹಂಚಿಕೊಂಡು “ಕಾವೇರಿ ಎಂದೂ ನಮ್ಮದು. ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು. ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ” ಎಂದು ಬರೆದಿದ್ದಾರೆ. ಈ ಮೂಲಕ ಅವರ ಹೆಸರನ್ನು ದುರುಯೋಗಪಡಿಸಿಕೊಂಡಿದ್ದರು.

ಇದನ್ನೂ ಓದಿ Cauvery water dispute : ಕರ್ನಾಟಕ ಬಂದ್‌ಗೆ ಬಿಜೆಪಿ-ಜೆಡಿಎಸ್‌ ಜಂಟಿ ಬೆಂಬಲ; ಕಾವೇರಲಿದೆಯೇ ಹೋರಾಟ?

ಸೆ. 29ರ ಕರ್ನಾಟಕ ಬಂದ್‌ಗೆ ವಾಟಾಳ್‌ ಟೀಮ್‌ ರೆಡಿ

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್‌ (Bangalore Bandh) ಯಶಸ್ಸಿನ ಬೆನ್ನಿಗೇ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ (Vatal Nagaraj) ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ ಸೆಪ್ಟೆಂಬರ್‌ 29ರ ಕರ್ನಾಟಕ ಬಂದ್‌ಗೆ (Karnataka Bandh) ಭರದ ಸಿದ್ಧತೆಗಳು ನಡೆಯುತ್ತಿದೆ. ಸಂಘಟಕರು ನಾನಾ ಸಂಘಟನೆಗಳ ಬೆಂಬಲವನ್ನು ಕೋರುತ್ತಿದ್ದಾರೆ. ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಆದರೆ, ಕೆಲವು ಸಂಘಟನೆಗಳು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಬಂದ್‌ ಬೆಂಬಲ ನೀಡಲು ಹಿಂದೇಟು ಹಾಕುತ್ತಿವೆ. ಈ ನಡುವೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇನಾದರೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ಈಗಲೇ ಬಂದ್‌ ಕರೆಯನ್ನು ಹಿಂದೆ ಪಡೆಯಲು ಸಿದ್ಧ ಎಂದು ವಾಟಾಳ್‌ ನಾಗರಾಜ್‌ ಘೋಷಿಸಿದ್ದಾರೆ.

ಬಿಜೆಪಿ, ಜೆಡಿಎಸ್‌ ಪಕ್ಷಗಳ ಬೆಂಬಲ

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್‌ಗೆ ಸಾಥ್‌ ನೀಡುವುದಾಗಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಘೋಷಣೆ ಮಾಡಿವೆ. ಕಾವೇರಿ ವಿಚಾರಕ್ಕಾಗಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಬುಧವಾರ ಜಂಟಿ ಪ್ರತಿಭಟನೆ ನಡೆಸಿದ ಪಕ್ಷಗಳು ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದವು. ವಾಟಾಳ್‌ ನಾಗರಾಜ್‌ ಅವರು ಬುಧವಾರ ಫಿಲಂ ಚೇಂಬರ್ ಜೊತೆ ಸಭೆ ನಡೆಸಿದರು. ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಚೇಂಬರ್‌ ಪ್ರಕಟಿಸಿತು.

Exit mobile version