ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ನಿನ್ನೆ(ನ.5 ಭಾನುವಾರ) 35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೇ ದಿನ ಅವರು ಶತಕ ಬಾರಿಸಿ ಮಿಂಚಿದ್ದರು. ಈ ಸಾಧನೆ ಮಾಡುವ ಮೂಲಕ ಜನ್ಮದಿನದಂದೇ(Century On Their Birthday) ಶತಕ ಬಾರಿಸಿದ ವಿಶ್ವದ 7ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಕಾಂಬ್ಳಿ ಮೊದಲಿಗ
ಹುಟ್ಟುಹಬ್ಬದಂದೇ ಶತಕ ಬಾರಿಸಿದ ಮೊದಲ ಆಟಗಾರ ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. ಕಾಂಬ್ಳಿ ಅವರು 1993ರಲ್ಲಿ ಇಂಗ್ಲೆಂಡ್ ವಿರುದ್ಧ ಜೈಪುರದಲ್ಲಿ ನಡೆದದ ಪಂದ್ಯದಲ್ಲಿ ಅಜೇಯ 100 ರನ್ ಬಾರಿಸಿದ್ದರು. ಆಗ ಅವರಿಗೆ 21 ವರ್ಷದ ಜನ್ಮದಿನದ ಸಂಭ್ರಮವಾಗಿತ್ತು.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಹುಟ್ಟುಹಬ್ಬದಂದೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಅವರು 1998ರಲ್ಲಿ ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ವಿರುದ್ಧದ ಪಂದ್ಯದಲ್ಲಿ 134 ರನ್ ಬಾರಿಸಿದ್ದರು. ಆಗ ಅವರಿಗೆ 25 ವರ್ಷ.
ಶ್ರೀಲಂಕಾದ ಮಾಜಿ ಡ್ಯಾಶಿಂಗ್ ಬ್ಯಾಟರ್ ಸನತ್ ಜಯಸೂರ್ಯ ಅವರು ತಮ್ಮ 39 ವರ್ಷದ ಹುಟ್ಟುಹಬ್ಬದಂದೇ ಶತಕ ಬಾರಿಸಿದ ಸಾಧನೆ ಮಾಡಿದ್ದರು. 2008ರಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಅವರು 130 ರನ್ ಬಾರಿಸಿದ್ದರು. ಈ ಪಂದ್ಯ ರಾಚಿಯಲ್ಲಿ ನಡೆದಿತ್ತು.
ನ್ಯೂಜಿಲ್ಯಾಂಡ್ ಕ್ರಿಕೆಟ್ ಕಂಡ ಸವ್ಯಸಾಚಿ ಆಟಗಾರ ರಾಸ್ ಟೇಲರ್ ಅವರು 27ನೇ ಜನ್ಮದಿನದಂದು ಶತಕ ಬಾರಿಸಿ ಸಂಭ್ರಮಿಸಿದ್ದರು. 2011ರಲ್ಲಿ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದ್ದರು. ಅವರು ಅಜೇಯ 131 ರನ್ ಬಾರಿಸಿದ್ದರು.
ಇದನ್ನೂ ಓದಿ Virat kohli: ಬರ್ತ್ಡೇಯಂದೇ ಶತಕ ಬಾರಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ನ್ಯೂಜಿಲ್ಯಾಂಡ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಟಾಮ್ ಲ್ಯಾಥಂ ಅವರು 2022ರಲ್ಲಿ ಹ್ಯಾಮಿಲ್ಟನ್ನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 140 ರನ್ ಬಾರಿಸುವ ಮೂಲಕ ಜನ್ಮದಿನದಂದೇ ಶತಕ ಬಾರಿಸಿದ ಸಾಧನೆ ತೋತಿದ್ದರು. ಆಗ ಅವರಿಗೆ 30ನೇ ವರ್ಷದ ಜನ್ಮದಿನದ ಸಂಭ್ರಮವಾಗಿತ್ತು.
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರು ಇದೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ 32ನೇ ವರ್ಷದ ಜನ್ಮದಿನದಂದೇ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಾಕಿಸಿಸ್ಥಾನ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಅವರು 121 ರನ್ ಬಾರಿಸಿದ್ದರು.
ಇದನ್ನೂ ಓದಿ Virat Kohli: ‘ನಾನೇಕೆ ಕೊಹ್ಲಿಗೆ ಅಭಿನಂದಿಸಲಿ’; ಲಂಕಾ ನಾಯಕನ ದರ್ಪದ ಮಾತು
ವಿರಾಟ್ ಕೊಹ್ಲಿ ಅವರು ಮಾರ್ಷ್ ಬಳಿಕ ಜನ್ಮದಿನಂದೇ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತನ್ನ 35ನೇ ಹುಟ್ಟುಹಬ್ಬದಂದೇ ಅಜೇಯ 101 ರನ್ ಬಾರಿಸಿ ಈ ಸಾಧನೆ ಮಾಡಿದರು. ಅಲ್ಲದೆ ಈ ಶತಕಹೊಂದಿಗೆ ಸಚಿನ್ ಅವರ ಸಾರ್ವಕಾಲಿಕ ಏಕದಿನದ 49ನೇ ಶತಕವನ್ನು ಸರಿದೂಗಿಸಿದರು.