ಅಬುದಾಬಿ : ಚುಟುಕು ಮಾದರಿಯ ಕ್ರಿಕೆಟ್ ಲೀಗ್ಗಳು ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸಿಕೊಳ್ಳುತ್ತಿವೆ. ಅದು ಕ್ರೋಡೀಕರಣ ಮಾಡುತ್ತಿರುವಹಣ ಹಾಗೂ ಜನಬೆಂಬಲವೇ ಈ ಪ್ರಗತಿಗೆ ಕಾರಣ. ದುಡ್ಡು ಇರುವಲ್ಲಿ ಅಕ್ರಮವೂ ಜಾಸ್ತಿ ಎಂಬ ಮಾತಿದೆ. ಐಪಿಎಲ್ ಸೇರಿದಂತೆ ಇನ್ನಲವು ಕ್ರಿಕೆಟ್ ಲೀಗ್ಗಳೇ ಅದಕ್ಕೆ ಸೂಕ್ತ ಉದಾಹರಣೆ. ಅಂತೆಯೇ ಇದೀಗ ಜಾಗತಿಕವಾಗಿ ಜನಪ್ರಿಯತೆ ಗಳಿಸಿಕೊಂಡಿರುವ ಅಬುಧಾಬಿ ಟಿ10 ಲೀಗ್ನಲ್ಲೂ (Abu Dhabi T10 League) ಮೋಸದಾಟ ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಬುಕ್ಕಿಗಳು ಹಾಗೂ ಸ್ಪಾಟ್ ಪಿಕ್ಸರ್ಗಳ ಬೀಸಿದ ಬಲೆಗೆ ಆಟಗಾರರು ಬಿದ್ದಿದ್ದಾರೆ ಎಂಬುದೇ ಹೊಸ ದೂರುಗಳು ಸಾರಾಂಶ.
ನವೆಂಬರ್ 23ರಿಂದ ಆರಂಭಗೊಂಡು ಡಿಸೆಂಬರ್ 4ರವರೆಗೆ ಈ ಅಬುಧಾಬಿ ಕ್ರಿಕೆಟ್ ಲೀಗ್ ನಡೆದಿತ್ತು. ಈ ಲೀಗ್ ತಲಾ 10 ಓವರ್ಗಳ ಪಂದ್ಯವಾಗಿದ್ದು, ಟಿ20 ಮಾದರಿಯಲ್ಲೇ ಜನಪ್ರಿಯತೆ ಗಳಿಸಿಕೊಂಡಿದೆ. ಆದರೀಗ ಅಲ್ಲೂ ಮೋಸ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಆರು ದೂರುಗಳು ದಾಖಲಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ದೂರುಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಐಸಿಸಿಐ ಭಷ್ಟಾಚಾರ ನಿಗ್ರಹ ವಿಭಾಗದ ಪ್ರಕಾರು ಡಜನ್ಗಿಂತಲೂ ಅಧಿಕ ದೂರುಗಳು ಅಬುಧಾಬಿ ಕ್ರಿಕೆಟ್ ಲೀಗ್ ಬಗ್ಗೆ ದಾಖಲಾಗಿವೆ. ಅದರಲ್ಲಿ ಆರು ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದೆ. ಒಟ್ಟಾರೆಯಾಗಿ ಅಬುಧಾಬಿ ಕ್ರಿಕೆಟ್ ಲೀಗ್ನಲ್ಲಿ 148 ಕೋಟಿ ರೂಪಾಯಿ ಬೆಟ್ಟಿಂಗ್ ನಡೆದಿದೆ ಎಂದು ಸಮಿತಿ ತಿಳಿಸಿದೆ.
ಸ್ಟಾರ್ ಕ್ರಿಕೆಟರ್ಗಳಾದ ಮೊಯೀನ್ ಅಲಿ, ಅದಿಲ್ ರಶೀದ್, ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್, ಆಂಡ್ರೆ ರಸೆಲ್ ಭಾರತದ ಕ್ರಿಕೆಟರ್ಗಳಾದ ಎಸ್ ಶ್ರೀಶಾಂತ್, ಸುರೇಶ್ ರೈನಾ ಹಾಗೂ ಸ್ಟುವರ್ಟ್ ಬಿನ್ನಿ ಕೂಡ ಈ ಟೂರ್ನಿಯಲ್ಲಿ ಆಡಿದ್ದರು.
ಪ್ರಸ್ತುತ ಬಂದಿರುವ ಆರೋಪಗಳ ಪ್ರಕಾರ ಒಟ್ಟಾರೆ ಟೂರ್ನಿಗೆ ಬೆಟ್ಟಿಂಗ್ ಕಂಪನಿಗಳೇ ಪ್ರಾಯೋಜಕತ್ವ ನೀಡಿದೆ. ಜತೆಗೆ ಫ್ರಾಂಚೈಸಿಗಳನ್ನೂ ಬೆಟ್ಟಿಂಗ್ ಕಂಪನಿಗಳೇ ಖರೀದಿಸಿದೆ. ಆಡುವ 11 ರ ಬಳಗವನ್ನೂ ಫ್ರಾಂಚೈಸಿ ಮಾಲೀಕರೇ ನಿರ್ಧರಿಸುತ್ತಿದ್ದೆರು ಹಾಗೂ ಕೊನೇ ಕ್ಷಣದಲ್ಲಿ ಆಟಗಾರರನ್ನು ಸೇರಿಸುವ ಹಾಗೂ ಕೈ ಬಿಡುವ ನಿರ್ಧಾರಗಳನ್ನೂ ಅವರೇ ಕೈಗೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಟೂರ್ನಿ ಮೋಸದಾಟದ ಸ್ವರ್ಗದಂತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ | Betting Case | ಬೆಟ್ಟಿಂಗ್ ಕೇಸ್‌ನಲ್ಲಿ ವಸೂಲಿ ಮಾಡಿದ್ರಾ ಸದಾಶಿವನಗರ ಪೊಲೀಸ್ ಕಾನ್ಸ್‌ಟೇಬಲ್?