Site icon Vistara News

IPL 2023: ಡೆಲ್ಲಿ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಧೋನಿ

Delhi Capitals vs Chennai Super Kings

#image_title

ನವದೆಹಲಿ: ಯಾವುದೇ ಚಿಂತೆ ಇಲ್ಲದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪ್ಲೇ ಆಫ್​ ದೃಷ್ಟಿಯಿಂದ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಚೆನ್ನೈ ಸೂಪರ್​ ಕಿಂಗ್ಸ್ ಟಾಸ್ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ​ಉಭಯ ತಂಡಗಳ ಈ ಹಣಾಹಣಿ ಫಿರೋಜ್​ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಏರ್ಪಟ್ಟಿದೆ.

ಪಂಜಾಬ್​ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ತನ್ನ ಅಂತಿಮ ಪಂದ್ಯದಲ್ಲಿ ತವನರಿನ ಅಭಿಮಾನಿಗಳ ಮುಂದೆ ಗೆದ್ದು ಈ ಆವೃತ್ತಿಯನ್ನು ಮುಗಿಸುವ ಯೋಜನೆಯಲ್ಲಿದೆ. ಪಂಜಾಬ್​ಗೆ ಸೋಲುಣಿಸುವ ಮೂಲಕ ಧವನ್​ ಪಡೆಯ ಪ್ಲೇ ಆಫ್​ ಕನಸಿಗೆ ಕೊಳ್ಳಿ ಇಟ್ಟ ಡೆಲ್ಲಿ, ಇದೀಗ ಚೆನ್ನೈಗೂ ಆಘಾತವಿಕ್ಕಿತೇ ಎಂಬುದು ಈ ಪಂದ್ಯದ ಕುತೂಹಲವಾಗಿದೆ. ಆದರೆ ಧೋನಿ ಪಡೆಯನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಧೋನಿ ಅವರು ಮಹತ್ವದ ಪಂದ್ಯದಲ್ಲಿ ಡಿಫರೆಂಡ್​ ತಂತ್ರಗಾರಿಕೆ ಮೂಲಕ ಎದುರಾಳಿ ತಂಡಗಳ ಸೊಕ್ಕಡಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.

ಚೆನ್ನೈ ಮತ್ತು ಡೆಲ್ಲಿ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ತಂಡ 18 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಡೆಲ್ಲಿ 10 ಪಂದ್ಯಗಳನ್ನು ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ ಮುಂದಿದೆ.

ಇದನ್ನೂ ಓದಿ IPL Records: ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಟಾಪ್​ 5 ಆಟಗಾರರು

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಅಕ್ಷರ್ ಪಟೇಲ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ದೀಪಕ್ ಚಾಹರ್, ಮಥೀಶಾ ಪತಿರಾನಾ, ತುಷಾರ್ ದೇಶ್​ಪಾಂಡೆ, ಮಹೇಶ್ ತೀಕ್ಷಣ.

Exit mobile version