Site icon Vistara News

IPL 2023: ಟಾಸ್​ ಗೆದ್ದ ಚೆನ್ನೈ ತಂಡದಿಂದ ಬ್ಯಾಟಿಂಗ್​ ಆಯ್ಕೆ

Chennai Super Kings vs Delhi Capitals

#image_title

ಚೆನ್ನೈ: ಬುಧವಾರದ ಐಪಿಎಲ್​ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ಮೊದಲು ಬೌಲಿಂಗ್​ ನಡೆಸಲಿದೆ. ಈ ಪಂದ್ಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ವಿಶೇಷ ಎಂದರೆ ಇತ್ತಂಡಗಳು ಹಾಲಿ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಎದುರಾಗುತ್ತಿವೆ.

ಡೆಲ್ಲಿ ಆರಂಭಿಕ ಹಂತದಲ್ಲಿ ಸತತ 5 ಸೋಲು ಕಂಡು ಇದೀಗ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದು ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿದೆ. ಹೀಗಾಗಿ ಚೆನ್ನೈಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಚೆನ್ನೈ ತಂಡ ಈಗಾಗಲೇ 13 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿಯೂ ಸಿಎಸ್​ಕೆ ಗೆದ್ದರೆ ಪ್ಲೇ ಆಫ್ ಟಿಕೆಟ್​ ಬಹುತೇಕ ಖಚಿತಗೊಳ್ಳಲಿದೆ. ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ಬ್ಯಾಟ್ಸ್​ಮನ್​ಗಳ ಸ್ವರ್ಗ ಎನಿಸಿದೆ.

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ದೀಪಕ್ ಚಾಹರ್, ಮಥೀಶಾ ಪತಿರಾನಾ, ತುಷಾರ್ ದೇಶ್​ಪಾಂಡೆ, ಮಹೇಶ್ ತೀಕ್ಷಣ.

ಇದನ್ನೂ ಓದಿ IPL 2023 : ದಿನೇಶ್ ಕಾರ್ತಿಕ್​ಗೆ ಅನಾರೋಗ್ಯ; ಆರ್​ಸಿಬಿ ಬ್ಯಾಟಿಂಗ್​ ಕೋಚ್​ ಮಾಹಿತಿ

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಅಕ್ಷರ್ ಪಟೇಲ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ಇತ್ತಂಡಗಳ ಬಲಾಬಲ

ಒಟ್ಟು ಆಡಿದ ಪಂದ್ಯಗಳು – 27

ಚೆನ್ನೈ ಸೂಪರ್ ಕಿಂಗ್ಸ್ ಗೆಲವು – 17

ಡೆಲ್ಲಿ ಕ್ಯಾಪಿಟಲ್ಸ್ ಗೆಲುವು- 10

Exit mobile version