Site icon Vistara News

IPL 2023: ಮುಂಬೈ ವಿರುದ್ಧ ಟಾಸ್‌ ಗೆದ್ದ ಚೆನ್ನೈ ಬೌಲಿಂಗ್‌ ಆಯ್ಕೆ

Mumbai Indians vs Chennai Super Kings

Mumbai Indians vs Chennai Super Kings

ಮುಂಬಯಿ: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಬೌಲಿಂಗ್‌ ಆಯ್ದುಕೊಂಡಿದೆ. ಆರ್​ಸಿಬಿ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿಯೇ ಮುಗ್ಗರಿಸಿದ ಮುಂಬೈ ಇಂಡಿಯನ್ಸ್​ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ಅತ್ತ, ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಧೋನಿ ಪಡೆ ಆತ್ಮವಿಶ್ವಾಸದಲ್ಲಿದೆ.

2013ರಿಂದೀಚೆ ತನ್ನ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳುತ್ತ ಬಂದ ದಾಖಲೆ ಹೊಂದಿರುವ ರೋಹಿತ್​ ಪಡೆ, ಆ ನಂತರದ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಕಪ್​ ಗೆದ್ದ ಇತಿಹಾಸ ಹೊಂದಿದೆ. ಹೀಗಾಗಿ ಈ ಪಂದ್ಯದಿಂದಲೇ ಗೆಲುವು ಸಾಧಿಸುವ ಯೋಜನೆ ಮುಂಬೈ ಇಂಡಿಯನ್ಸ್​ ತಂಡದ್ದಾಗಿದೆ.

ಪಿಚ್​ ರಿಪೋರ್ಟ್​

ಮುಂಬೈಯ ವಾಂಖೆಡೆ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ನಡೆದ ಐಪಿಎಲ್​ನ ಬಹುತೇಕ ಪಂದ್ಯಗಳು ಹೈಸ್ಕೋರಿಂಗ್ ಆಗಿದೆ. 2017ರಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 235 ರನ್​ ಬಾರಿಸಿತ್ತು. ಇದು ಇಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಇನ್ನು ಚೇಸಿಂಗ್​ ನಡೆಸಿದ ತಂಡಗಳೇ ಹೆಚ್ಚು ಬಾರಿ ಮೇಲುಗೈ ಸಾಧಿಸಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಬಲಾಬಲದ ಲೆಕ್ಕಾಚಾರದಲ್ಲಿ ರೋಹಿತ್​ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್​ ತಂಡ ಮುಂದಿದೆ. ಚೆನ್ನೈ ಮತ್ತು ಮುಂಬೈ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 34 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 20 ಪಂದ್ಯಗಳನ್ನು ಗೆದ್ದಿದೆ, ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ.

ಮುಂಬೈ ಇಂಡಿಯನ್ಸ್​ ಪರ ರೋಹಿತ್‌, ಇಶಾನ್‌ ಕಿಶನ್‌, ಗ್ರೀನ್‌, ಸೂರ್ಯಕುಮಾರ್‌ ಯಾದವ್​ ಬ್ಯಾಟಿಂಗ್‌ನಲ್ಲಿ ಕ್ಲಿಕ್‌ ಆಗಬೇಕಿದೆ. ಕಳೆದ ಆರ್​ಸಿಬಿದ ಪಂದ್ಯದಲ್ಲಿ ವಿರುದ್ಧ ಇವರೆಲ್ಲ ಘೋರ ವೈಫಲ್ಯ ಕಂಡಿದ್ದರು. ತಿಲಕ್‌ ವರ್ಮ ಏಕಾಂಗಿ ಹೋರಾಟ ನಡೆಸದೇ ಹೋಗಿದ್ದರೆ ತಂಡ ನೂರರ ಗಟಿ ಕೂಡ ದಾಟುವುದು ಕಷ್ಟಕರವಾಗುತ್ತಿತ್ತು. ಆದ್ದರಿಂದ ಈ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಜೋಫ್ರಾ ಆರ್ಚರ್‌, ಅರ್ಷದ್‌ ಖಾನ್‌, ಬೆಹ್ರೆಂಡಾರ್ಫ್‌ ಹಿಡಿತ ಸಾಧಿಸುವುದು ಮುಖ್ಯ.

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್​ ಕಿಂಗ್ಸ್​: ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಆರ್‌. ಹಂಗರ್ಗೇಕರ್

ಮಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್.

Exit mobile version