Site icon Vistara News

IPL 2023 : ಲಕ್ನೊ ವಿರುದ್ಧ ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್ ತಂಡದಿಂದ ಮೊದಲು ಫೀಲ್ಡಿಂಗ್​ ಆಯ್ಕೆ

Chennai Super Kings won the toss and elected to field first against Lucknow

#image_title

ಲಖನೌ: ಐಪಿಎಲ್​ 16ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆತಿಥೇಯ ಲಕ್ನೊ ಸೂಪರ್ ಜಯಂಟ್ಸ್​ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಲಕ್ನೊ ಸೂಪರ್​ ಜಯಂಟ್ಸ್​ ತಂಡ ಹಿಂದಿನ ಪಂದ್ಯದಲ್ಲಿ ಆರ್​​ಸಿಬಿ ವಿರುದ್ಧ ಸೋಲು ಕಂಡಿದ್ದರೆ, ಸಿಎಸ್​ಕೆ ವಿರುದ್ಧ ಪಂಜಾಬ್​ ತಂಡ ಥ್ರಿಲ್ಲಿಂಗ್ ವಿಜಯ ದಾಖಲಿಸಿತ್ತು.

ಲಖನೌನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ಲಖೌನ್​ನಲ್ಲಿ ಮಳೆ ಬಂದ ಕಾರಣ ಟಾಸ್ ಅರ್ಧಗಂಟೆ ತಡವಾಗಿ ಆರಂಭಗೊಂಡಿತು. ಹೀಗಾಗಿ ಪಂದ್ಯವೂ ಅರ್ಧ ಗಂಟೆಯ ಬಳಿಕ ಆರಂಭವಾಗಲಿದೆ.

ಕಾಯಂ ನಾಯಕ ಕೆ. ಎಲ್ ರಾಹುಲ್​ ಗಾಯದ ಸಮಸ್ಯೆಯಿಂದಾಗಿ ಕಣಕ್ಕೆ ಇಳಿದಿಲ್ಲ. ಹೀಗಾಗಿ ಉಪನಾಯಕ ಕೃಣಾಲ್​ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಟಾಸ್​ಗೆ ಅವರು ಬಂದರು.

ಪಿಚ್​ ಸ್ವಲ್ಪ ಕಠಿಣವಾಗಿ ತೋರುತ್ತಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್​ ಧೋನಿ ಹೇಳಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಅದುವೇ ಸೂಕ್ತ ಎಂದು ಅನಿಸುತ್ತದೆ. ನಮ್ಮ ತಂಡದ ಪರ ದೀಪಕ್​ ಚಾಹರ್​ ಫಿಟ್ ಆಗಿದ್ದಾರೆ. ಆಕಾಶ್ ಸಿಂಗ್ ಬದಲಿಗೆ ಅವರು ಕಣಕ್ಕೆ ಇಳಿಯಲಿದ್ದಾರೆ. ಉಳಿದಂತೆ ಅದೇ ತಂಡದ ಜತೆ ಆಡಲಿದ್ದೇವೆ. ಇದು ನಿಮ್ಮ ಕೊನೇ ಐಪಿಎಲ್​ ಟೂರ್ನಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಎಲ್ಲವನ್ನೂ ನಿರ್ಧಾರ ಮಾಡಿದ್ದೀರಿ. ನಾನೇನೂ ನಿರ್ಧರಿಸಿಲ್ಲ ಎಂಬುದಾಗಿ ಹೇಳಿದರು.

ಕೃಣಾಲ್​ ಪಾಂಡ್ಯ ಮಾತನಾಡಿ, ನಾವು ಟಾಸ್ ಗೆದ್ದಿದ್ದರೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಆದರೂ ನಮ್ಮ ಬ್ಯಾಟರ್​ಗಳಿಗೆ ಮುಕ್ತ ಅವಕಾಶವನ್ನು ನೀಡಿದ್ದೇವೆ. ಕೆ. ಎಲ್​ ರಾಹುಲ್ ಇಲ್ಲದಿರುವುದು ತಂಡಕ್ಕೆ ನಷ್ಟ. ನಮ್ಮ ವಿಶ್ವಾಸ ಹೆಚ್ಚಿದೆ. ಅದನ್ನೂ ಸಾಬೀತು ಮಾಡಲಿದ್ದೇವೆ, ಎಂದು ಹೇಳಿದರು.

ಟೀಮ್ಸ್:
ಲಕ್ನೋ ಸೂಪರ್ ಜಯಂಟ್ಸ್: ಕೈಲ್​ ಮೇಯರ್ಸ್, ಮನನ್ ವೊಹ್ರಾ, ಕರಣ್ ಶರ್ಮಾ, ಆಯುಷ್ ಬದೋನಿ, ಮಾರ್ಕ್​ ಸ್ಟೋಯಿನಿಸ್, ನಿಕೋಲಸ್ ಪೂರನ್, ಕೃಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ನವೀನ್-ಉಲ್-ಹಕ್, ರವಿ ಬಿಷ್ಣೋಯಿ, ಮೊಹ್ಸಿನ್ ಖಾನ್.

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್​ ಗಾಯಕ್ವಾಡ್​​ , ಡೆವೊನ್​ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ದೀಪಕ್ ಚಹರ್, ಮತೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

Exit mobile version