Site icon Vistara News

ಮಲೇಷ್ಯಾ ಓಪನ್‌ ಫೈನಲ್​;​ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಚಿರಾಗ್‌-ಸಾತ್ವಿಕ್‌ ಜೋಡಿ

Chirag-Satwik

ಕೌಲಾಲಂಪುರ: ಇಲ್ಲಿ ನಡೆದ ಮಲೇಷ್ಯಾ ಓಪನ್‌ ಸೂಪರ್‌ 1000′ ಬ್ಯಾಡ್ಮಿಂಟನ್​ ಕೂಟದ(Malaysia Open) ಫೈನಲ್‌ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್​ ಜೋಡಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwik-Chirag) ಸೋಲು ಕಂಡಿದೆ.

ಭಾನುವಾರ ನಡೆದ ಪುರುಷರ ಡಬಲ್ಸ್‌ ಫೈನಲ್​ ಪಂದ್ಯದಲ್ಲಿ ಭಾರತೀಯ ಜೋಡಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೈ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ವಿರುದ್ಧ ತೀವ್ರ ಪೈಪೋಟಿ ನಡೆಸಿ 21-9, 18-21, 17-21 ಅಂತರದ ಸೋಲು ಕಂಡರು. ಸೋಲು ಕಾಣುವ ಮೂಲಕ ಬ್ಯಾಡ್ಮಿಂಟನ್​ನಲ್ಲಿ ವರ್ಷದ ಮೊದಲ ಚಿನ್ನ ಗೆಲ್ಲುವ ಭಾರತದ ನಿರೀಕ್ಷೆ ಹುಸಿಯಾಯಿತು.

ಮೊದಲ ಗೇಮ್​ನಲ್ಲಿ ಉತ್ತಮ ಆಟವಾಡಿದ​ ವಿಶ್ವ ನಂ.2 ಭಾರತೀಯ ಜೋಡಿ ದ್ವಿತೀಯ ಗೇಮ್​ನಲ್ಲಿ ಎಡವಿತು. ಅಂತಿಮ ಗೇಮ್​ನಲ್ಲಿ ಇತ್ತಂಡಗಳು ಕೂಡ ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಿತು. ಆದರೆ 4 ಅಂಕಗಳ ಹಿನ್ನಡೆಯಿಂದ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿಗೆ ಕೆಲ ದಿನಗಳ ಹಿಂದಷ್ಟೇ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ Asian Games: ಐತಿಹಾಸಿಕ ಚಿನ್ನ ಗೆದ್ದ ಚಿರಾಗ್‌-ಸಾತ್ವಿಕ್‌ ಜೋಡಿ; ಶತಕದ ಗಡಿ ದಾಟಿದ ಪದಕ ಸಂಖ್ಯೆ

ಭಾರತೀಯ ಜೋಡಿ ಫೈನಲ್​ನಲ್ಲಿ ಗೆದ್ದಿದ್ದರೆ 2ನೇ ಸಲ ಸೂಪರ್‌ 1000 ಪ್ರಶಸ್ತಿ ಗೆದ್ದ ಸಾಧನೆ ಮಾಡಿಂದತಾಗುತ್ತಿತ್ತು. ಮೊದಲ ಸೂಪರ್‌ 1000 ಪ್ರಶಸ್ತಿ ಕಳೆದ ಜೂನ್‌ನಲ್ಲಿ “ಇಂಡೋನೇಷ್ಯನ್‌ ಓಪನ್‌’ನಲ್ಲಿ ಒಲಿದಿತ್ತು. ಟೂರ್ನಿಯುದ್ದಕ್ಕೂ ಆಡಿದ್ದ ಚಿರಾಗ್‌-ಸಾತ್ವಿಕ್​ ಫೈನಲ್​ನಲ್ಲಿ ಎಡವಿದರು. ವಿಶ್ವ ನಂ.1 ಶ್ರೇಯಾಂಕಕ್ಕೆ ತಕ್ಕ ಆಡವಾಡಿದ ಚೀನ ಜೋಡಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಶನಿವಾರ ನಡೆದಿದ್ದ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌, ಕೊರಿಯಾದ ಸಿಯೊ ಸೆಯುಂಗ್‌-ಕಾಂಗ್‌ ಮಿನ್‌ ವಿರುದ್ಧ ವಿಶ್ವ ನಂ.2 ಭಾರತೀಯ ಜೋಡಿ 21-18, 22-20 ಅಂತರದ ಅಧಿಕಾರಯುತ ಗೆಲುವು ಸಾಧಿಸಿತ್ತು.

Exit mobile version