Site icon Vistara News

MS Dhoni: ಏರ್‌ಪೋರ್ಟ್‌ನಲ್ಲಿ ಧೋನಿಯನ್ನು ಭೇಟಿಯಾದ ಸಿಐಎಸ್‌ಎಫ್‌ ಅಧಿಕಾರಿ; ಭಾವುಕ ಪತ್ರ ವೈರಲ್

MS Dhoni And CISF Officer

CISF Officer Meets MS Dhoni At Airport; shares his experience of meeting‌

ರಾಂಚಿ: ಭಾರತ ಕ್ರಿಕೆಟ್‌ ಕಂಡ ಯಶಸ್ವಿ ಕ್ಯಾಪ್ಟನ್‌ ಎನಿಸಿರುವ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರ ಶಾಂತ ಸ್ವಭಾವ, ಅಭಿಮಾನಿಗಳ ಜತೆ ಮುಕ್ತವಾಗಿ ಬೆರೆಯುವ, ಅವರಿಗೊಂದು ಸೆಲ್ಫಿ ನೀಡಿ ಅಭಿಮಾನಿಗಳ ಖುಷಿಗೆ ಕಾರಣವಾಗುವ ಗುಣವು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಗುಣವುಳ್ಳ ಧೋನಿ ಅವರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಅಧಿಕಾರಿಯೊಬ್ಬರು ರಾಂಚಿ ಏರ್‌ಪೋರ್ಟ್‌ನಲ್ಲಿ (Ranchi Airport) ಭೇಟಿಯಾಗಿದ್ದು, ಬಳಿಕ ಭಾವುಕ ಪತ್ರ ಬರೆದಿದ್ದಾರೆ. ಆ ಪತ್ರವೀಗ ವೈರಲ್‌ ಆಗಿದೆ.

ಹೌದು, ಸಿಐಎಸ್‌ಎಫ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವ ಸತೀಶ್‌ ಪಾಂಡೆ ಅವರು ಆಗಸ್ಟ್‌ 26ರಂದು ರಾಂಚಿ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಧೋನಿ ಅವರನ್ನು ಭೇಟಿಯಾಗಿದ್ದಾರೆ. ಇದಾದ ಬಳಿಕ ಧೋನಿ ಅವರನ್ನು ಭೇಟಿಯಾದ ಕುರಿತು ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಹಾಗೆಯೇ, ಧೋನಿ ಜತೆಗಿನ ಫೋಟೊವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇನ್ನು ಧೋನಿ ಅವರ ಸರಳತೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.

ಭಾವುಕ ಪತ್ರ ವೈರಲ್

“ಆಗಸ್ಟ್‌ 26ರಂದು ಸಂಜೆ ರಾಂಚಿ ವಿಮಾನ ನಿಲ್ದಾಣದಲ್ಲಿ ಧೋನಿ ಅವರನ್ನು ಭೇಟಿಯಾದೆ. ನಾನೊಬ್ಬ ಅಭಿಯಾನಿಯಾಗಿ ಧೋನಿ ಭಾಯಿಯನ್ನು ಭೇಟಿಯಾಗಿದ್ದು ಖಂಡಿತವಾಗಿಯೂ ಖುಷಿ ತಂದಿದೆ. ಇನ್ನು ಅವರ ಸರಳ ವ್ಯಕ್ತಿತ್ವ, ಆಡಿದ ಮಾತುಗಳು, ನೀಡಿದ ಸಲಹೆಗಳು ನನ್ನನ್ನು ರೋಮಾಂಚನಗೊಳಿಸಿದವು. ಒಬ್ಬ ಸಿಐಎಸ್‌ಎಫ್‌ ಸಿಬ್ಬಂದಿಯಾಗಿ ಅವರನ್ನು ಭೇಟಿಯಾಗಿದ್ದು ಸಾರ್ಥಕ ಎನಿಸಿದೆ” ಎಂದು ಸುದೀರ್ಘ ಪತ್ರದಲ್ಲಿ ಸತೀಶ್‌ ಪಾಂಡೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಧೋನಿ ಹಾಗು ಪುತ್ರಿ ಝಿವಾ

“ನಾನು ಲಾಂಜ್‌ಗೆ ಹೋಗುತ್ತಲೇ ಆತ್ಮೀಯವಾಗಿ ಸ್ವಾಗತಿಸಿದರು. ನಾನು ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ. ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದು ಸೇರಿ ಮುಂತಾದ ಪ್ರಶ್ನೆ ಕೇಳಿದೆ. ಅದಕ್ಕೆ ಅವರು ತುಂಬ ಸರಳವಾಗಿ, ಆದರೆ ಪರಿಣಾಮಕಾರಿಯಾಗಿ ಉತ್ತರ ನೀಡಿದರು. ನಾನು ಜೀವನದ ಪ್ರತಿಯೊಂದು ಕ್ಷಣಗಳನ್ನೂ ಅನುಭವಿಸುತ್ತೇನೆ. ಏಕೆಂದರೆ ಕಳೆದುಹೋದ ಕ್ಷಣಗಳು ಎಂದಿಗೂ ಬರುವುದಿಲ್ಲ ಎಂಬುದು ಗೊತ್ತು ಎಂಬುದಾಗಿ ಧೋನಿ ಹೇಳಿದರು. ಒಟ್ಟಾರೆಯಾಗಿ ಅವರನ್ನು ಭೇಟಿಯಾಗಿದ್ದು ಸಾರ್ಥಕ ಭಾವ ಮೂಡಿಸಿದೆ” ಎಂದು ಸತೀಶ್‌ ಪಾಂಡೆ ಹೇಳಿದ್ದಾರೆ.

Exit mobile version