Site icon Vistara News

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

MS Dhoni

ಬೆಂಗಳೂರು: ಫ್ರೆಂಚ್ ಮೂಲದ ಭಾರತೀಯ ಕಾರು ತಯಾರಕ ಕಂಪನಿ ಸಿಟ್ರೊಯೆನ್ (Citroen) ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಎಂಎಸ್ ಧೋನಿ ಭಾರತದಲ್ಲಿ ಕಂಪನಿಯ ಕಾರುಗಳ ರಾಯಭಾರಿಯಾಗಿರುವ ಕಾರಣ ಮುಂಬರುವ ಪ್ರಚಾರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಕಂಪನಿಯು ಭಾರತದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಧೋನಿ ಅವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಇನ್ನಷ್ಟು ಚೈತನ್ಯ ಪಡೆದುಕೊಳ್ಳಲಿದೆ.

ಹೊಸ ಪ್ರಕಟಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಹೇಂದ್ರ ಸಿಂಗ್ ಧೋನಿ, ” ಆಟೋಮೊಬೈಲ್ ಉತ್ಸಾಹಿಯಾಗಿರುವ ನಾನು ಹೊಸತನ ಮತ್ತು ಎಂಜಿನಿಯರಿಂಗ್ ಅದ್ಭುತಗಳಿಗೆ ಖ್ಯಾತಿ ಪಡೆದಿರುವ ಫ್ರೆಂಚ್ ಬ್ರಾಂಡ್ ಸಿಟ್ರೊಯೆನ್ ಜತೆ ಕೈಜೋಡಿಸಲು ನಾನು ಸಂತೋಷಪಡುತ್ತೇನೆ” ಎಂದು ಹೇಳಿದ್ದಾರೆ.

ಸಿಟ್ರೋಯೆನ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಶಿಶಿರ್ ಮಿಶ್ರಾ ಈ ಕುರಿತು ಮಾಹಿತಿ ನೀಡಿ ,”ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿ ಅವರೊಂದಿಗಿನ ಸಹಭಾಗಿತ್ವವು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮನ್ನು ಬಲಪಡಿಸಲಿದೆ, ಸಮರ್ಪಣೆ ನಮ್ಮ ಬ್ರಾಂಡ್​​ನ ಸಿದ್ಧಾಂತವಾಗಿದ್ದು ಧೋನಿ ಸಂಪೂರ್ಣವಾಗಿ ಹೊಂದಿಕೆಯಾಗುತ್ತಾರೆ ಎಂದು ನುಡಿದರು.

ಕಾರು ಪ್ರೇಮಿ ಧೋನಿ

ಎಂ.ಎಸ್. ಧೋನಿ ದೊಡ್ಡ ಕಾರು ಮತ್ತು ಬೈಕ್ ಪ್ರೇಮಿ. ಅವರು ತಮ್ಮ ಗ್ಯಾರೇಜ್ ನಲ್ಲಿ ಬೈಕುಗಳು ಮತ್ತು ಕಾರುಗಳ ದೊಡ್ಡ ಸಂಗ್ರಹವಿದೆ. ವಾಸ್ತವವಾಗಿ, ಅವರು ಕ್ಲಾಸಿಕ್ ಮತ್ತು ವಿಂಟೇಜ್ ಕಾರುಗಳು ಮತ್ತು ಬೈಕುಗಳ ದೊಡ್ಡ ಅಭಿಮಾನಿಯಾಗಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಕನಿಷ್ಠ 60ರಿಂದ 70 ಬೈಕುಗಳಿವೆ. ಅವರು ರಾಂಚಿಯ ತಮ್ಮ ತೋಟದ ಮನೆಯಲ್ಲಿ ಬಹುಮಹಡಿ ಗ್ಯಾರೇಜ್ ಅನ್ನು ನಿರ್ಮಿಸಿದ್ದಾರೆ. ಅಲ್ಲಿ ಅವರು ತಮ್ಮ ಎಲ್ಲಾ ಬೈಕುಗಳು ಮತ್ತು ಕಾರುಗಳನ್ನು ಇಟ್ಟಿದ್ದಾರೆ.

ಅವರು ಆಗಾಗ್ಗೆ ಈ ಬೈಕುಗಳು ಮತ್ತು ಕಾರುಗಳನ್ನು ರಸ್ತೆಯಲ್ಲಿ ಓಡಿಸುವುದನ್ನು ಕಾಣಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಆಫ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತ ನಂತರ ಅವರು ತವರಿಗೆ ಮರಳಿದ್ದಾರೆ. ಈ ವೇಳೆ ಅವರು ಆರ್ಡಿ 350 ಬೈಕ್​ನಲ್ಲಿ ಸವಾರಿ ಮಾಡಿದದ ಸುದ್ದಿ ಬಂದಿತ್ತು.

ಇದನ್ನೂ ಓದಿ: Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

ಸಿಟ್ರೊಯೆನ್ ಕಾರುಗಳು ಯಾವುವು?

ಸಿಟ್ರೋಯೆನ್ ಇಂಡಿಯಾ ಪ್ರಸ್ತುತ ಸಿ 3, ಇಸಿ 3, ಸಿ 3 ಏರ್ ಕ್ರಾಸ್ ಮತ್ತು ಫ್ಲ್ಯಾಗ್ ಶಿಪ್ ಸಿ 5 ಏರ್ ಕ್ರಾಸ್ ಎಸ್ ಯುವಿಯಂತಹ ಕಾರುಗಳನ್ನು ಹೊಂದಿದೆ. ಫ್ರೆಂಚ್ ಮೂಲಕದ ಕಂಪನಿ ತಮ್ಮ ವಾಹನಗಳಲ್ಲಿ ರೈಡಿಂಗ್ ಗುಣಮಟ್ಟದ ಮೂಲಕ ಹೆಸರುವಾಸಿಯಾಗಿದ್ದಾರೆ. ತಯಾರಕರು ಈಗ ಭಾರತದಲ್ಲಿ ತಮ್ಮ ಉತ್ಪನ್ನ ರೇಂಜ್​ಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದಾರೆ. ಸಿಟ್ರೊಯೆನ್ ನಿಂದ ಮುಂಬರುವ ಕಾರೆಂದರೆ ಬಸಾಲ್ಟ್

ತಯಾರಕರು ಅಧಿಕೃತವಾಗಿ ಹೊಸ ಮಾಡೆಲ್​ ಅನಾವರಣಗೊಳಿಸಿದ್ದಾರೆ. ಅದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಇದು ವಾಸ್ತವವಾಗಿ ಸಿ 3 ಮತ್ತು ಸಿ 3 ಏರ್ ಕ್ರಾಸ್ ನಂತೆಯೇ ಸಿಎಂಪಿ ಪ್ಲಾಟ್ ಫಾರ್ಮ್ ಮೇಲಿದೆ. ಬಸಾಲ್ಟ್ ಬಗ್ಗೆ ಸಾಕಷ್ಟು ಗಮನ ಸೆಳೆದ ಒಂದು ವಿಷಯವೆಂದರೆ ಅದರ ವಿನ್ಯಾಸ. ಸಿಟ್ರೊಯೆನ್ ಕಾರು ಅಥವಾ ಎಸ್ ಯುವಿಗೆ ಕೂಪೆ ತರಹದ ಡಿಸೈನ್ ಹೊಂದಿದೆ.

ಕೂಪೆ ಡಿಸೈನ್​ಗೆ ಹೆಚ್ಚಿದ ಬೇಡಿಕೆ

ಟಾಟಾ ಮತ್ತು ಮಹೀಂದ್ರಾದಂತಹ ಕಂಪನಿಗಳು ಕೂಪೆ-ಐಶ್ ಎಸ್ ಯುವಿ ಡಿಸೈನ್​ಗಳ ಕಾರಿನ ಬಿಡುಗಡೆಗಾಗಿಕೆಲಸ ಮಾಡುತ್ತಿದೆ. ಅದೇ ರೀತಿ ಸಿಟ್ರೊಯೆನ್​ ಕೂಡ ಆರಂಭಿಸಿದೆ. ಬಸಾಲಸ್ಟ್​​ ಮುಂಭಾಗವು ಸಿ 3 ಏರ್ ಕ್ರಾಸ್ ಮತ್ತು ಸಿಟ್ರೊಯೆನ್ ರೀತಿಯೇ ಕಾಣುತ್ತದೆ. ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಸಿಟ್ರೊಯೆನ್ ಕಾರುಗಳಲ್ಲಿ ಫೀಚರ್​ಗಳ ಕೊರತೆಯಿದೆ. ಮುಂಬರುವ ಬಸಾಲ್ಟ್ ಸಿ 3 ಏರ್ ಕ್ರಾಸ್ ಮತ್ತು ಸಿ 3 ಹ್ಯಾಚ್ ಬ್ಯಾಕ್ ಗಿಂತ ಹೆಚ್ಚಿನ ಫೀಚರ್​ಗಳನ್ನು ಕೊಡುಗೆ ಖಾತರಿ ನೀಡಿದೆ.

ಎಂಜಿನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಬಸಾಲ್ಟ್ ಅನ್ನು 1.2-ಲೀಟರ್, ಮೂರು ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರಲಿದೆ. ಇದು 110 ಪಿಎಸ್ ಮತ್ತು 205 ಎನ್ಎಂ ಪೀಕ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದೇ ಎಂಜಿನ್ ಅನ್ನು ಸಿ3 ಏರ್ ಕ್ರಾಸ್ ನಲ್ಲಿ ಅಳವಡಿಸಲಾಗಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುತ್ತದೆ.

Exit mobile version