MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​ - Vistara News

ಕ್ರೀಡೆ

MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

MS Dhoni Bike Riding: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು

VISTARANEWS.COM


on

MS Dhoni Bike Riding
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಂಚಿ: ಆರ್​ಸಿಬಿ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​(CSK) ತಂಡ 17ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದಿತ್ತು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ 27 ರನ್​ಗಳ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನ ಮರು ದಿನವೇ ಧೋನಿ(MS Dhoni) ತಮ್ಮ ತವರಾದ ರಾಂಚಿಗೆ ಮರಳಿದ್ದರು. ಇದೀಗ ತವರಿನಲ್ಲಿ ಬೈಕ್​ ರೈಡಿಂಗ್​ ಮಾಡಿದ್ದಾರೆ. ಅವರು ಬೈಕ್​ನಲ್ಲಿ ಸುತ್ತಾಡಿಕೊಂಡು ವಾಪಸ್​ ಮನೆಗೆ ಬರುತ್ತಿರುವ ವಿಡಿಯೊ ವೈರಲ್​ ಆಗಿದೆ. ಸದ್ಯ ಧೋನಿ ಅವರು ಬೈಕ್​ ಓಡಿಸಿದ(MS Dhoni Bike Riding) ವಿಡಿಯೊ ವೈರಲ್(Viral Video)​ ಆಗಿದ್ದು, ಅವರ ಅಭಿಮಾನಿಗಳು ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ.

ಧೋನಿ ಬಳಿ ಇದೆ ದೊಡ್ಡ ಬೈಕ್​ ಗ್ಯಾರೇಜ್​


ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್​ಹೌಸ್​ನ ವಿಡಿಯೊ ವೈರಲ್​ ಆಗುತ್ತು.

ಇದನ್ನೂ ಓದಿ MS Dhoni Retirement: ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಚೆನ್ನೈ ಫ್ರಾಂಚೈಸಿ

ಎಂಎಸ್ ಧೋನಿ ಬೈಕ್ ಕಲೆಕ್ಷನ್

ಯಮಹಾ, ಡುಕಾಟಿ, ಕವಾಸಕಿ ಮುಂತಾದ ಪ್ರಸಿದ್ಧ ಬ್ರಾಂಡ್ ಗಳು ಧೋನಿ ಅವರ ಆಕರ್ಷಕ ಬೈಕ್ ಗಳ ಸಂಗ್ರಹದಲ್ಲಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚುವರಿಯಾಗಿ, ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್, ವಿಂಟೇಜ್ ನಾರ್ಟನ್ ಜುಬಿಲಿ 250 ಮತ್ತು ಹಲವಾರು ಗಮನಾರ್ಹ ಬೈಕುಗಳಂತಹ ವಿಶಿಷ್ಟ ಮತ್ತು ಅಪರೂಪದ ಮಾದರಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ಧೋನಿ ಹೊಸದಾಗಿ ಕಸ್ಟಮೈಸ್ ಮಾಡಿದ ಜಾವಾ 42 ಬಾಬ್ಬರ್ ಅನ್ನು ತಮ್ಮ ಬೆಳೆಯುತ್ತಿರುವ ಬೈಕುಗಳ ಸಂಗ್ರಹಕ್ಕೆ ಸೇರಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ(MS Dhoni Retirement) ಅವರ ನಿವೃತ್ತಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೀಗ ಧೋನಿ ನಿವೃತ್ತಿ ವಿಚಾರವಾಗಿ ಸಿಎಸ್​ಕೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಹತ್ವದ ಹೇಳಿಕೆ ನೀಡಿದ್ದಾರೆ.

“ಧೋನಿ ಅವರು ಸಿಎಸ್‌ಕೆ ಜತೆ ಯಾರೊಂದಿಗೂ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಕೆಲವು ಸಕ್ರಿಯ ಕ್ರಿಕೆಟಿಗರಿಂದ ಹೆಚ್ಚು ಟೀಕೆಗೆ ಒಳಗಾಗಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಧೋನಿಯ ನಿವೃತ್ತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ನಿಯಮವು ಮುಂದುವರಿದರೆ, ತಂಡದೊಂದಿಗೆ ನಿರ್ದಿಷ್ಟ ಕೆಲಸವನ್ನು ಪೂರೈಸಲು ಇದು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ನಿಯಮವನ್ನು ರದ್ದುಗೊಳಿಸಿದರೆ, ಧೋನಿ ಆಡುವುದು ಕಷ್ಟ” ಎಂದು ಹೇಳಿದ್ದಾರೆ.

ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಾಗಿತ್ತು. ಇದೀಗ ಚೆನ್ನೈ ಸೋತು ಟೂರ್ನಿಯಿಂದ ಹೊರಬಿದ್ದರೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

James Anderson: 2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ

VISTARANEWS.COM


on

James Anderson
Koo

ಲಂಡನ್​: ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಇಂದು(ಶುಕ್ರವಾರ) ಮುಕ್ತಾಯ ಕಂಡ ಟೆಸ್ಟ್​ ಪಂದ್ಯ ಅವರಿಗೆ ಕೊನೆಯ ಪಂದ್ಯವಾಯಿತು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್​ಗೂ ಗೆಲುವಿನ ವಿದಾಯ ಲಭಿಸಿತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar) ಭಾವನಾತ್ಮಕ​ ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

‘ಹೇ ಜಿಮ್ಮಿ!.. ನಿಮ್ಮ ಆ ನಂಬಲಾಗದ 22 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ. ನೀಮ್ಮ ವಿದಾಯದ ಸಂದರ್ಭದಲ್ಲಿ ನನ್ನದೊಂದು ಸಣ್ಣ ಹಾರೈಕೆ ಇದೆ. ನೀವು ಬೌಲಿಂಗ್ ಮಾಡುವುದನ್ನು ವೀಕ್ಷಿಸುವುದೇ ಒಂದು ರೀತಿಯ ಸಂತೋಷ. ಆ ನಿಮ್ಮ ಶೈಲಿ, ವೇಗ, ನಿಖರತೆ, ಸ್ವಿಂಗ್ ಮತ್ತು ಫಿಟ್ನೆಸ್ ಮುಂದಿನ ಪೀಳಿಗೆಯ ಬೌಲರ್​ಗಳಿಗೆ ಸ್ಫೂರ್ತಿ. ಮುಂದಿನ ಜೀವನವನ್ನು ಕುಟುಂಬದೊಂದಿಗೆ ಆನಂದಿಸಿ” ಎಂದು ಹಾರೈಸಿದ್ದಾರೆ.

ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು. ಅತಿ ಹೆಚ್ಚು ಎಸೆತಗಳನ್ನು ಎಸೆದ ವಿಶ್ಚ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ 44039 ಎಸೆತಗಳನ್ನು ಎಸೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 40850 ಎಸೆತಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿದಾಯ ಪಂದ್ಯದಲ್ಲಿ ಆ್ಯಂಡರ್ಸನ್​ ಒಟ್ಟು 4 ವಿಕೆಟ್​ ಕಿತ್ತು ಮಿಂಚಿದರು.

ಇದನ್ನೂ ಓದಿ Viral Video: ಆ್ಯಂಡರ್ಸನ್ ಬೌಲಿಂಗ್​ಗೆ ನೆಟ್​ ಫ್ರಾಕ್ಟೀಸ್ ಮಾಡಿ ತಂಡ ಸೇರುವ ಬಯಕೆ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ

3 ತಿಂಗಳ ಹಿಂದೆ ಆ್ಯಂಡರ್ಸನ್​ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. “ಎಲ್ಲರಿಗೂ ನಮಸ್ಕಾರ, ಈ ಬೇಸಿಗೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, ನನ್ನ ಕೊನೆಯ ಪಂದ್ಯವಾಗಿರಲಿದೆ. ಬಾಲ್ಯದಿಂದ ಇಷ್ಟಪಟ್ಟಿದ ಆಟವನ್ನು ಆಡಲು, ನನ್ನ ದೇಶವನ್ನು ಪ್ರತಿನಿಧಿಸಿದ 20 ಅದ್ಭುತ ವರ್ಷಗಳಿವು. ಇಂಗ್ಲೆಂಡ್ ತಂಡಕ್ಕಾಗಿ ಆಡುವುದನ್ನು ನಾನು ಮಿಸ್‌ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು. 

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.

 

Continue Reading

ಕ್ರೀಡೆ

Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

Champions Trophy 2025: ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ

VISTARANEWS.COM


on

Champions Trophy 2025
Koo

ಮುಂಬಯಿ: ಮುಂದಿನ ವರ್ಷ(2025ರ) ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು(Champions Trophy 2025) ಪಾಕಿಸ್ತಾನದಿಂದ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ICC) ಮೇಲೆ ಬಿಸಿಸಿಐ(BCCI) ಒತ್ತಡ ಹೇರುತ್ತಿದೆ ಎಂಬ ಮಾತುಗಳು ಈಗಾಗಲೇ ಕೇಳಿಬಂದಿವೆ. ಭಾರತ ತಂಡ(Team India) ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಟೂರ್ನಿ ಸ್ಥಳಾಂತರಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಗೊತ್ತಾಗಿದೆ. ಆದರೆ ಐಸಿಸಿ ಇದಕ್ಕೆ ಸಮ್ಮತಿ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.

ಒಂದೊಮ್ಮೆ ಟೂರ್ನಿ ಪಾಕ್​ನಲ್ಲಿಯೇ ನಡೆದು, ಭಾರತ ತಂಡ ಪಾಲ್ಗೊಳ್ಳಲಿದ್ದರೆ ಆಗ ಯಾವ ತಂಡಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಆತಿಥೇಯ ದೇಶಕ್ಕೆ ನೇರವಾಗಿ ಅರ್ಹತೆ ಸಿಗುತ್ತದೆ. ಒಟ್ಟು 8 ತಂಡಗಳು ಅರ್ಹತೆ ಪಡೆದಿದೆ.

ಲಂಕಾಗೆ ಸಿಗಲಿದೆ ಅವಕಾಶ

ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

ಇದನ್ನೂ ಓದಿ Champions Trophy 2025: ಪಾಕ್​ನಲ್ಲೇ ನಡೆಯಲಿದೆ ಚಾಂಪಿಯನ್ಸ್​ ಟ್ರೋಫಿ; ಸಾಗರೋತ್ತರ ತಟಸ್ಥ ತಾಣದಲ್ಲಿ ಭಾರತದ ಪಂದ್ಯ?

ಹಿಂದಿನ ನಿಯಮ ಹೇಗಿತ್ತು?

ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ.

ಹೊರಬೀಳುವ ಆತಂಕದಲ್ಲಿತ್ತು ಇಂಗ್ಲೆಂಡ್​!

ಕ್ರಿಕೆಟ್​ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್​ ತಂಡ ಕಳೆದ ಬಾರಿಯ ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಗೆದ್ದು 7ನೇ ಸ್ಥಾನ ಸಂಪಾದಿಸಿ ಕೊನೆಯ ಹಂತದಲ್ಲಿ ಅವಕಾಶ ಗಿಟ್ಟಿಸಿಕೊಂಡಿತ್ತು.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

Continue Reading

ಕ್ರೀಡೆ

Saina Nehwal: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದ ಸೈನಾ ನೆಹ್ವಾಲ್‌

Saina Nehwal: ನನ್ನನ್ನು ಹೆತ್ತವರು ಬ್ಯಾಡ್ಮಿಂಟನ್‌ಗೆ ಬದಲಾಗಿ ಟೆನಿಸ್‌ಗೆ ಸೇರಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತಿದೆ. ನಾನು ಬ್ಯಾಡ್ಮಿಂಟನ್​ ಬಿಟ್ಟು ಟೆನಿಸ್​ ಅಥವಾ ಕ್ರಿಕೆಟ್​ ಆಡುತ್ತಿದ್ದರೆ ನನ್ನ ಬಳಿ ಹೆಚ್ಚು ಹಣ ಮತ್ತು ಶಕ್ತಿ ಇರುತ್ತಿತ್ತು” ಎಂದು ಸೈನಾ ಹೇಳಿದ್ದಾರೆ

VISTARANEWS.COM


on

Saina Nehwal
Koo

ನವದೆಹಲಿ: ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ, ಭಾರತದ ಅನುಭವಿ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್(Saina Nehwal)​ ಅವರು ತಾನು ಬ್ಯಾಡ್ಮಿಂಟನ್​ ಆಡುವ ಬದಲು ಟೆನಿಸ್​ ಆಡುತ್ತಿದ್ದರೆ ಇನ್ನೂ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ “ಅವಳ ಕಥೆ-ನನ್ನ ಕಥೆ’ ಉಪನ್ಯಾಸ ಸರಣಿಯಲ್ಲಿ ಈ ವಿಚಾರವನ್ನು ಸೈನಾ ಹೇಳಿದರು.

“ನನ್ನನ್ನು ಹೆತ್ತವರು ಬ್ಯಾಡ್ಮಿಂಟನ್‌ಗೆ ಬದಲಾಗಿ ಟೆನಿಸ್‌ಗೆ ಸೇರಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತಿದೆ. ನಾನು ಬ್ಯಾಡ್ಮಿಂಟನ್​ ಬಿಟ್ಟು ಟೆನಿಸ್​ ಅಥವಾ ಕ್ರಿಕೆಟ್​ ಆಡುತ್ತಿದ್ದರೆ ನನ್ನ ಬಳಿ ಹೆಚ್ಚು ಹಣ ಮತ್ತು ಶಕ್ತಿ ಇರುತ್ತಿತ್ತು” ಎಂದು ಸೈನಾ ಹೇಳಿದರು.

ನಾನು ಯಾವುದಾದರೊಂದು ಟೂರ್ನಿಯಲ್ಲಿ ಸೋತರೆ ಸಾಕು ಎಲ್ಲ ಕಡೆಗಳಿಂದ ಟೀಕೆಗಳು ಬರುತ್ತದೆ. ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ. ನಾನು ಒಬ್ಬರ ಬಗ್ಗೆ ಟೀಕೆ ಮಾಡುವುದು ಸಲಭ. ಆದರೆ ಈ ಕಷ್ಟ ಏನೆಂಬುದು ಕ್ರೀಡಾಪಟುಗಳಿಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ Droupadi Murmu: ಸೈನಾ ನೆಹ್ವಾಲ್ ಜತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರಂಭಿಸಿರುವ ಅವಳ ಕಥೆ-ನನ್ನ ಕಥೆ (ಹರ್‌ ಸ್ಟೋರಿ – ಮೈ ಸ್ಟೋರಿ) ಉಪ ನ್ಯಾಸ ಸರಣಿಯ ಸೈನಾ ಈ ಮಾತುಗಳನ್ನಾಡಿದ್ದಾರೆ. ಪದ್ಮ ಪ್ರಶಸ್ತಿ ಪುರಸ್ಕೃತ‌ ಎಲ್ಲ ಮಹಿಳಾ ಸಾಧಕರು ತಮ್ಮ ಕಥೆಗಳನ್ನು ಉಪನ್ಯಾಸದ ರೂಪದಲ್ಲಿ ಹೇಳಿಕೊಳ್ಳಲಿದ್ದಾರೆ. 2 ದಿನಗಳ ಹಿಂದಷ್ಟೇ ದ್ರೌಪದಿ ಮುರ್ಮು ಜತೆ ಸೈನಾ ಬ್ಯಾಡ್ಮಿಂಟನ್​ ಆಡಿದ ವಿಡಿಯೊ ವೈರಲ್​ ಆಗಿತ್ತು.

ಇತ್ತೀಚಿನ ಕೆಲ ವರ್ಷಗಳಿಂದ ಸೈನಾ ನೆಹ್ವಾಲ್​ ಅವರು ಗಾಯದ ಸಮಸ್ಯೆಯಿಂದ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಯಾವುದೇ ಟೂರ್ನಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಕಷ್ಟಪಟ್ಟು ಮೊದಲ ಸುತ್ತು ದಾಟುವುದೇ ದೊಡ್ಡ ಸಾಧನೆಯಾಗಿದೆ.

ಹಿಂದೊಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರದ (Davangere Lok Sabha constituency) ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ (Gayatri Siddeshwar) ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂಬಂತೆ ಹೇಳಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸೈನಾ ನೆಹ್ವಾಲ್​ ವಾಗ್ದಾಳಿ ನಡೆಸಿದ್ದರು.

ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್​ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್​ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್​ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಶಿವಶಂಕರಪ್ಪ ಹೇಳಿಯನ್ನು ಖಂಡಿಸಿದ್ದರು.

Continue Reading

ಕ್ರೀಡೆ

John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

John Cena: ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಇಂದು(ಜುಲೈ 12) ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಜುಲೈ 13 ಮತ್ತು 14 ರಂದು ಎರಡು ದಿನಗಳ ಕಾಲ ವಿವಿಧ ಜನರಿಗೆ ಆರತಕ್ಷತೆ ಆಯೋಜಿಸಲಾಗಿದೆ.

VISTARANEWS.COM


on

John Cena
Koo

ಮುಂಬಯಿ: ಕಳೆದ ವಾರವಷ್ಟೇ ಡಬ್ಲ್ಯೂ ಡಬ್ಲ್ಯೂಇ(WWE) ಬಾಕ್ಸಿಂಗ್​ಗೆ ವಿದಾಯ ಹೇಳಿದ್ದ ಜಾನ್​ ಸೀನ(John Cena) ಅವರು ಮುಂಬಯಿಯಲ್ಲಿ ನಡೆಯುತ್ತಿರುವ ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊವನ್ನು ಪಿಟಿಐ ಸುದ್ದಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಜಾನ್​ ಸೀನ ಅವರಿಗೆ ಭಾರತದಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು, ಅವರನ್ನು ಕಾಣುತ್ತಿದಂತೆ ಅಭಿಮಾನಿಗಳು ಜೋರಾಗಿ ಜಾನ್​ ಸೀನ… ಜಾನ್​ ಸೀನ ಎಂದು ಕೂಗಿದ್ದಾರೆ. ಈ ವೇಳೆ ಜಾನ್​ ಸೀನ ಅಭಿಮಾನಿಗಳತ್ತ ಖುಷಿಯಲ್ಲಿ ಕೈ ಬೀಸಿದ್ದಾರೆ.

‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್​ ಧರಿಸಿ ಸೀನಾ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು. ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ನಿವೃತ್ತಿಯಾಗಲಿದ್ದಾರೆ. 2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ.

ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ ‘ರೆಸ್ಟಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ಹೆಚ್ಚು ದೊರೆಯುವುದಿಲ್ಲ. ಆತನ ನಗು ಮತ್ತು ಆಟಿಟ್ಯುಡ್ ಯಾರ ಮನಸ್ಸನ್ನಾದರೂ ಸೆಳೆಯದೆ ಇರಲು ಸಾಧ್ಯವಿಲ್ಲ!

ಇದನ್ನೂ ಓದಿ John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಇಂದು(ಜುಲೈ 12) ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಜುಲೈ 13 ಮತ್ತು 14 ರಂದು ಎರಡು ದಿನಗಳ ಕಾಲ ವಿವಿಧ ಜನರಿಗೆ ಆರತಕ್ಷತೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ರಾಜಕೀಯ, ಕೈಗಾರಿಕೆ, ಕ್ರೀಡಾ ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಕಳೆದ ವಾರ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ(Anant-Radhika sangeet ceremony) ಟೀಮ್ ಇಂಡಿಯಾದ ಹಲವು ಆಟಗಾರರು ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್​ ಧೋನಿ(MS Dhoni), ಹಾರ್ದಿಕ್​ ಪಾಂಡ್ಯ(Hardik Pandya), ಇಶಾನ್​ ಕಿಶನ್(ishan kishan) ಮತ್ತು ​ಕೃಣಾಲ್​ ಪಾಂಡ್ಯ(krunal pandya) ಸಮಾರಂಭದಲ್ಲಿ ಭಾಗಿಯಾಗಿರುವ ವಿಡಿಯೊ ವೈರಲ್​ ಆಗಿತ್ತು. ಇದೇ ವೇಳೆ ಟಿ20 ವಿಶ್ವಕಪ್​ ಗೆದ್ದ ನಾಯಕ ರೋಹಿತ್​ ಶರ್ಮ, ಉಯನಾಯಕ ಹಾರ್ದಿಕ್​ ಪಾಂಡ್ಯ ಮತ್ತು ಸೂರ್ಯಕುಮಾರ್​ ಯಾದವ್​ ಅವರನ್ನು ನೀತಾ ಅಂಬಾನಿ ವಿಶೇಷವಾಗಿ ಅಭಿನಂದಿಸಿದ್ದರು.

Continue Reading
Advertisement
Ambani Wedding
ಫ್ಯಾಷನ್10 mins ago

Ambani Wedding: ಜಾಗತಿಕ ಮಟ್ಟದಲ್ಲಿ ದಾಖಲೆ ಸೃಷ್ಟಿಸಿದ ಅಂಬಾನಿ ಫ್ಯಾಮಿಲಿಯ ರಾಯಲ್‌ ವೆಡ್ಡಿಂಗ್‌ ಫ್ಯಾಷನ್‌!

Samsung Launches 2 new foldable phones
ದೇಶ16 mins ago

Samsung Galaxy: ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡೆಬಲ್ ಫೋನ್‌ ಬಿಡುಗಡೆ; ವಿಶೇಷತೆ ಏನೇನು?

Protest by civil workers against the husband of former chairperson of Gangavati Municipal Council
ಕೊಪ್ಪಳ24 mins ago

Koppala News: ನಗರಸಭೆ ಮಾಜಿ ಅಧ್ಯಕ್ಷೆ ಪತಿಯಿಂದ ಪೌರಾಯುಕ್ತರಿಗೆ ಅಶ್ಲೀಲ ಮೆಸೇಜ್; ಪೌರ ಕಾರ್ಮಿಕರ ಪ್ರತಿಭಟನೆ

ಕರ್ನಾಟಕ29 mins ago

Cauvery Water Dispute: ತಮಿಳುನಾಡಿಗೆ ನೀರು; CWMAಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ, ಜು.14ಕ್ಕೆ ಸರ್ವಪಕ್ಷ ಸಭೆ

Murder Case
ಬೆಂಗಳೂರು34 mins ago

Murder Case : ಖಾಸಗಿ ಕ್ಷಣಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರೇಯಸಿಯ ಮಗುವನ್ನೇ ಕೊಂದ ಪಾಪಿ

Anant Radhika Wedding
ವಾಣಿಜ್ಯ35 mins ago

Anant Radhika Wedding: ಅನಂತ್‌ ಅಂಬಾನಿ ಮದುವೆ ಖರ್ಚು 5000 ಕೋಟಿ ರೂ! ಅವರ ಸಂಪತ್ತಿಗೆ ಹೋಲಿಸಿದರೆ ಇದು ಸಣ್ಣ ಮೊತ್ತ!

James Anderson
ಕ್ರೀಡೆ54 mins ago

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

Bear Attack
ವಿಜಯನಗರ1 hour ago

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

ED Raid
ಕರ್ನಾಟಕ1 hour ago

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

Emergency
ದೇಶ1 hour ago

Emergency: ತುರ್ತು ಪರಿಸ್ಥಿತಿ ಕರಾಳ ನೆನಪು; ಜೂನ್‌ 25ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌