Site icon Vistara News

Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

Fantasy Gaming

ಬೆಂಗಳೂರು: ಅದೃಷ್ಟ ಯಾವಾಗ ಬಾಗಿಲು ಬಡಿದು ಮನೆಯೊಳಗೆ ನುಗ್ಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅದು ಅನಿರೀಕ್ಷಿತ, ಅಚ್ಚರಿ ಮತ್ತು ಅಪರೂಪ. ಇಂಥದ್ದೇ ಒಬ್ಬ ಅದೃಷ್ಟ ಶಾಲಿಯ ಪರಿಚಯವನ್ನು ನಿಮಗೆ ಮಾಡಿಸಬೇಕಾಗಿದೆ. ಅವರೇ ಬಿಹಾರದ ದೀಪು ಓಜಾ. ಭಾನುವಾರ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್​ನಲ್ಲಿ (Fantasy Gaming) ಐಪಿಎಲ್ ಫ್ಯಾಂಟಸಿ ಗೇಮಿಂಗ್ (Fantasy Gaming) ಆಡುವ ಮೂಲಕ ಬಿಹಾರದ ಅರ್ರಾ ಜಿಲ್ಲೆಯ ಕೊಹ್ಡಾ ಗ್ರಾಮದ ಈತ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾನೆ. ಅವರು ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಅದೃಷ್ಟಶಾಲಿ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಓಜಾ 8 ನೇ ತರಗತಿಯಲ್ಲಿ ಫೇಲ್​, ಹಾಗೂ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾನೆ. ಕ್ರಿಕೆಟ್​ನ ಗಂಧ ಗಾಳಿ ಗೊತ್ತಿಲ್ಲ.

ಕ್ರಿಕೆಟ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂಬುದಾಗಿ ಓಜಾ ಹೇಳಿದ್ದಾನೆ. ನನಗೆ ಬೇರೆ ಕೆಲಸವಿಲ್ಲದ ಕಾರಣ ಆಕಸ್ಮಿಕವಾಗಿ ತಂಡವನ್ನು ಆಯ್ಕೆ ಮಾಡಿದೆ ಎಂದಿದ್ದಾನೆ. “ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ. ಹೀಗಾಗಿ ತಂಡವನ್ನು ರಚಿಸಿದೆ. ಇದು ಕೆಕೆಆರ್ ಮತ್ತು ಆರ್​​ಸಿಬಿ ನಡುವಿನ ಪಂದ್ಯ ಎಂದು ಎಂದು ಓಜಾ ಹೇಳಿದ್ದಾನೆ.

ಇದನ್ನೂ ಓದಿ: Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

ಸಿಕ್ಕಿರುವ ದುಡ್ಡನ್ನು ಏನು ಮಾಡಬೇಕೆಂದು ಆತ ಇನ್ನೂ ನಿರ್ಧರಿಸಿಲ್ಲವಂತೆ. ಅಂದ ಹಾಗೆ ಫ್ಯಾಂಟಿಸಿ ಗೇಮ್​ಗಳು ಲೀಗ್​ ಕ್ರಿಕೆಟ್​ ಬೆಳವಣಿಗೆ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕ್ರಿಕೆಟ್​ ನೋಡುವ ಜತೆಗೆ ಆಟ ಆರಂಭಕ್ಕೆ ಮೊದಲು ತಂಡಗಳನ್ನು ರಚಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಾರೆ. ಫ್ಯಾಂಟಸಿ ಗೇಮ್​ಗಳು ಒಂದರ್ಥದಲ್ಲಿ ಬದಲಾದ ಜಗತ್ತಿನಲ್ಲಿ ಹೊಸ ಸ್ಪರ್ಧಾ ವೇದಿಕೆಯಾಗಿದೆ. ಆದರೆ, ಅಪಾಯಕಾರಿಯೂ ಹೌದು. ಆ್ಯಪ್​​ಗಳಲ್ಲಿ ಆಡುವಾಗ ಅದಕ್ಕಾಗಿ ನಿರ್ದಿಷ್ಟ ಮೊತ್ತವನ್ನು ಕಷ್ಟಬೇಕಾಗುತ್ತದೆ. ಒಂದರ್ಥದಲ್ಲಿ ಕಾನೂನುಬದ್ಧ ಜೂಜು. ಹಣದಾಸೆಗೆ ಬೀಳುವ ಕೆಲವರು ಇದೇ ವೇದಿಕೆಗಳ ಮೂಲಕ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಆಗಿವೆ. ಮದ್ಯಪಾನದ ರೀತಿಯಲ್ಲಿಯೇ ಫ್ಯಾಂಟಸಿ ಗೇಮ್​ಗಳ ಜಾಹೀರಾತು ನೀಡುವಾಗ ಮುಂದಾಗುವ ಅಪಾಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

Rohit Sharma : ಇಶಾನ್​ ಕಿಶನ್ ಜತೆ ಮಗುವಿನಂತೆ ಕ್ರಿಕೆಟ್​ ಆಡಿದ ರೋಹಿತ್​ ಶರ್ಮಾ

ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals ) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಬಹುನಿರೀಕ್ಷಿತ ಐಪಿಎಲ್​ 2024ರ (IPL 2024) ಮುಖಾಮುಖಿಗೆ ಸಿದ್ಧತೆ ನಡೆಸುವ ವೇಳೆ ರೋಹಿತ್ ಶರ್ಮಾ (Rohit Sharma) ಅವರ ಬ್ಯಾಟಿಂಗ್​ ನೆಟ್ಟಿಗರ ಗಮನ ಸೆಳೆದಿದೆ. ಅವರ ಇಶಾನ್ ಕಿಶನ್​ಗೆ ವಿಕೆಟ್​ಕೀಪಿಂಗ್​ ಅಭ್ಯಾಸ ಮಾಡಲು ಮಕ್ಕಳಂತೆ ಬ್ಯಾಟ್ ಹಿಡಿದು ಬೀಸಿದ ಪ್ರಸಂಗ ನಡೆಯಿತು. ಏಪ್ರಿಲ್ 22 ರ ಸೋಮವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮುಖಾಮುಖಿಗೆ ಮುಂಚಿತವಾಗಿ ಇವರಿಬ್ಬರು ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಅದು ಸಣ್ಣ ಮಕ್ಕಳು ಆಡುವಂತೆ ಕಂಡು ಬಂತು.

ಮುಂಬೈ ಇಂಡಿಯನ್ಸ್ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರ ವಿಕೆಟ್ ಕೀಪಿಂಗ್ ಕೌಶಲವನ್ನು ಹೆಚ್ಚಿಸಲು ಬ್ಯಾಟ್​ನಿಂದ ಸಣ್ಣ ಸಣ್ಣ ಹೊಡೆತಗಳನ್ನು ಹೊಡೆಯುತ್ತಿದ್ದರು. ಅದನ್ನು ಇಶಾನ್​ ಹಿಡಿಯುತ್ತಿದ್ದರು. ಈ ಅಭ್ಯಾಸದಿಂದ ಇಬ್ಬರಿಗೂ ಸಾಕಷ್ಟು ಲಾಭವಾಗುತ್ತದೆ.

ಇಶಾನ್ ರೋಹಿತ್ ಕಡೆಗೆ ಚೆಂಡುಗಳನ್ನು ಎಸೆದಾಗ ಇಬ್ಬರು ಆಟಗಾರರ ನಡುವಿನ ಸ್ನೇಹವು ಸ್ಪಷ್ಟವಾಯಿತು. ರೋಹಿತ್ ಶರ್ಮಾ ಕಿಶನ್​​ಗೆ ಕಡಿಮೆ ಅಂತರ ಕ್ಯಾಚ್​ಗಳನ್ನು ನೀಡುವಲ್ಲಿ ಅತಿ ಹೆಚ್ಚು ಉತ್ಸಾ ಹ ತೋರಿದ್ದರು. ಹಿರಿಯ ಆಟಗಾರರು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ನಿದರ್ಶನಗಳು ಮುಂಬೈ ಇಂಡಿಯನ್ಸ್ ನಂಥ ತಂಡಗಳಲ್ಲಿ ಮಾತ್ರ ಕಾಣಿಸುತ್ತದೆ. ಉಳಿದಂತೆ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿ ಇಂಥದ್ದಕ್ಕೆಲ್ಲ ನೆರವಾಗುತ್ತಾರೆ.

Exit mobile version