Site icon Vistara News

IND vs AUS : ಭಾರತ ತಂಡಕ್ಕೆ ಮತ್ತೊಂದು ಸೋಲು, ಸರಣಿಯಲ್ಲಿ 3-0 ಮುಖಭಂಗ

Team india

ಮುಂಬೈ: ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಏಕ ದಿನ ಸರಣಿಯಲ್ಲಿ (IND vs AUS) ಟೀಮ್ ಇಂಡಿಯಾ 190 ರನ್​ಗಳ ಹೀನಾಯ ಸೋಲು ಅನುಭವಿಸಿದೆ. ಹರ್ಮನ್ ಪ್ರೀತ್ ಕೌರ್ ಮತ್ತು ಬಳಗವು ಆಟದ ಎಲ್ಲಾ ಮೂರು ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿತು. ಈ ಮೂಲಕ ವುಮೆನ್ ಇನ್ ಯೆಲ್ಲೋ ತಂಡವು ಸರಣಿಯಲ್ಲಿ 3-0 ಕ್ಲೀನ್​ಸ್ವೀಪ್ ಸಾಧನೆ ಮಾಡಿತು. 339 ರನ್​ಗಳ ದಾಖಲೆಯ ಮೊತ್ತವನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡವು 190 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ ವನಿತೆಯರು ಲಿಚ್ಫೀಲ್ಡ್ ಮತ್ತು ಹೀಲಿ ಉತ್ತಮ ಆರಂಭ ಪಡೆದರು. ಇವರಿಬ್ಬರು ಮೊದಲ ವಿಕೆಟ್​ಗೆ 189 ರನ್​ಗಳನ್ನು ಸೇರಿಸಿದರು. ನಾಯಕಿ ಅಲಿಸಾ ಹೀಲಿ 82 ರನ್​ಗಳಿಗೆ ನಿರ್ಗಮಿಸಿದರು.

ಇದನ್ನೂ ಓದಿ : Virat kohli : ಮೆಸ್ಸಿಯನ್ನು ಸೋಲಿಸಿದ ವಿರಾಟ್ ಕೊಹ್ಲಿ

ಎಲಿಸ್ ಪೆರ್ರಿ ನಂತರ ಲಿಚ್​ಫೀಲ್ಡ್​ ಜತೆ ಮೂರನೇ ಕ್ರಮಾಂಕದಲ್ಲಿ ಸೇರಿಕೊಂಡರು. ಅವರು 16 ರನ್​ಗಳಿಗೆ ನಿರ್ಗಮಿಸಿದರು. ಪೆರ್ರಿ ವಿಕೆಟ್ ಪಡೆದ ನಂತರ, ಶ್ರೇಯಂಕಾ ಪಾಟೀಲ್ ಬೆತ್ ಮೂನಿ (10 ಎಸೆತಗಳಲ್ಲಿ 3 ರನ್) ಮತ್ತು ತಹ್ಲಿಯಾ ಮೆಕ್ಗ್ರಾತ್ (1 ಎಸೆತಗಳಲ್ಲಿ 0 ರನ್) ಅವರನ್ನು ಔಟ್ ಮಾಡಿದರು. ಮತ್ತೊಂದೆಡೆ, 20 ವರ್ಷದ ಲಿಚ್​ಫೀಲ್ಡ್​ ತನ್ನ ಎರಡನೇ ಏಕದಿನ ಶತಕವನ್ನು ಗಳಿಸಿದರು. ಕೊನೆಯಲ್ಲಿ 119 ರನ್ ಗಳಿಸಿ ಏಕದಿನ ಕ್ರಿಕೆಟ್​ನಲ್ಲಿ ದೀಪ್ತಿಗೆ 100ನೇ ವಿಕೆಟ್ ರೂಪದಲ್ಲಿ ಔಟ್ ಆದರು. ಆಶ್ಲೆ ಗಾರ್ಡನರ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ಕ್ರಮವಾಗಿ 30 ಮತ್ತು 23 ರನ್ ಗಳಿಸಿದರೆ, ಅಲನಾ ಕಿಂಗ್ 14 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು.

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತದ ಪರ ಸ್ಮೃತಿ ಮಂದಾನ (29 ರನ್), ಜೆಮಿಮಾ ರೋಡ್ರಿಗಸ್ (25 ರನ್), ದೀಪ್ತಿ ಶರ್ಮಾ (25 ರನ್) ಮತ್ತು ರಿಚಾ ಘೋಷ್ (19 ರನ್) ಗಮನಾರ್ಹ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ಪರ ಜಾರ್ಜಿಯಾ ವೇರ್ಹ್ಯಾಮ್ 3 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಮೇಗನ್ ಶುಟ್, ಅಲನಾ ಕಿಂಗ್, ಅನ್ನಾಬೆಲ್ ಸದರ್ಲ್ಯಾಂಡ್ ತಲಾ 2 ವಿಕೆಟ್ ಪಡೆದರು.

Exit mobile version