Site icon Vistara News

Sexy ಪದ ಬಳಸಲು ನಾಚಿದ ಕೋಚ್‌ ರಾಹುಲ್‌ ದ್ರಾವಿಡ್‌, ಬಿಡದೇ ಬಾಯ್ಬಿಡಿಸಿದ ಪತ್ರಕರ್ತ

ರಾಹುಲ್‌ ದ್ರಾವಿಡ್‌

ದುಬೈ : ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಸಿಕ್ಕಾಪಟ್ಟೆ ಗಂಭೀರ ವ್ಯಕ್ತಿತ್ವದವರು. ಅವರು ಜೋಕ್ ಮಾಡುವುದಿಲ್ಲ ಎಂದೇ ಎಲ್ಲರೂ ನಂಬಿದ್ದಾರೆ. ಕೆಲವೊಮ್ಮೆ ಅವರೂ ಕೂಡ ಹಾಸ್ಯ ಚಟಾಕಿ ಹಾರಿಸುತ್ತಾರೆ ಎಂಬುದಕ್ಕೆ ಕೆಲವು ಸಾಕ್ಷಿಗಳಿವೆ. ಅಂಥದ್ದೇ ಪ್ರಸಂಗ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್-೪ ಪಂದ್ಯದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ನಡೆಯಿತು.

ಭಾರತ ಹಾಗೂ ಪಾಕಿಸ್ತಾನ ತಂಡಗಳ ಬೌಲಿಂಗ್‌ ಬಲದ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು. ಆ ವೇಳೆ ಅವರು ಪಾಕಿಸ್ತಾನ ಬೌಲಿಂಗ್‌ ಅತ್ಯುತ್ತಮವಾಗಿದೆ. ಆದರೆ, ಭಾರತ ಬೌಲರ್‌ಗಳೂ ಸಮರ್ಥರಿದ್ದಾರೆ. ಉತ್ತಮ ಫಲಿತಾಂಶ ತರುವ ಸಾಮರ್ಥ್ಯ ಹೊಂದಿದ್ದಾರೆ. ಈ ಎರಡೂ ಬೌಲಿಂಗ್ ಶಕ್ತಿಯ ಬಗ್ಗೆ ಒಂದ ಪದ ನೆನಪಿಗೆ ಬರುತ್ತದೆ. ಆದರೆ ಅದನ್ನು ಇಲ್ಲಿ ಹೇಳುವ ಹಾಗಿಲ್ಲ ಎಂದು ನುಡಿದು ಕುತೂಹಲ ಮೂಡಿಸಿದರು.

ಅವರ ಮಾತು ಕೇಳಿ ಪತ್ರಕರ್ತರೆಲ್ಲರೂ ಜೋರಾಗಿ ನಕ್ಕರು. ಕುತೂಹಲ ತಾಳಲಾರದ ಪತ್ರಕರ್ತರು ಏನದು ಪದ ಎಂದು ಕೇಳಿದರು. ಆಗಲೂ ಅವರ ಅದನ್ನು ಹೇಳಲು ಒಪ್ಪದೇ, S ಎಂಬ ಅಕ್ಷರಿಂದ (Sexy) ಆರಂಭವಾಗುವ ಪದವಾಗಿದೆ ಎಂದು ಹೇಳಿ ನಗೆ ಬೀರಿದರು ಈ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದ ಎಲ್ಲರೂ ಬಿದ್ದುಬಿದ್ದು ನಗಾಡಿದರು.

Exit mobile version