ಮೈಸೂರು: ತಮ್ಮ ಮಗನ ಸಾವಿಗೆ ಕೋಚ್ ಕಾರಣ ಎಂಬ Kickboxing ಪಟು ನಿಖಿಲ್ ಸುರೇಶ್ ಅವರ ತಂದೆಯ ಆರೋಪವನ್ನು ಕೋಚ್ ವಿಕ್ರಮ್ ನಾಗರಾಜ್ ನಿರಾಕರಿಸಿದ್ದಾರೆ.
ನಿಖಿಲ್ ಅವರ ತಂದೆ ಸುರೇಶ್ ಅವರ ಹೇಳಿಕೆಗಳು ಸುಳ್ಳು ಎಂದು ಹೇಳುವುದಿಲ್ಲ. ಆದರೆ, ಅವರ ಆರೋಪಗಳಲ್ಲಿ ಅರ್ಧ ಸತ್ಯ ತುಂಬಿದ ಎಂದು ಅವರು ಹೇಳಿಕೆ ನೀಡಿದ್ದಾರೆ.
“”ಇಡೀ ದುರ್ಘಟನೆಯಲ್ಲಿ ಆಯೋಜಕರ ವೈಫಲ್ಯಗಳು ಎದ್ದು ಕಾಣುತ್ತಿವೆ. ನನ್ನ ಮಗನನ್ನು ಕಳೆದುಕೊಂಡಷ್ಟೇ ದುಖ ನನಗಾಗುತ್ತಿದೆ. ನಮಗೆ ಅಯೋಜಕ ನವೀನ್ ಅವರಿಂದ ಆಹ್ವಾನ ಬಂದಿತ್ತು. ನಮ್ಮ ಅಕಾಡೆಮಿಯಿಂದ 22 ಬಾಕ್ಸರ್ ಗಳು ಹೋಗಿದ್ದರು. ಅದರಲ್ಲಿ ನನ್ನ ಮಗನೂ ಇದ್ದ. ಅಲ್ಲಿ ಪ್ಯಾರಾಮೆಡಿಕಲ್ ಸೇರಿದಂತೆ ಯಾವುದೇ ತುರ್ತು ವೈದ್ಯಕೀಯ ವ್ಯವಸ್ಥೆ ಇರಲಿಲ್ಲ ಎಂಬುದು ಗೊತ್ತಾಗಿದೆ,ʼʼ ಎಂದು ವಿಕ್ರಮ್ ಅವರು ಹೇಳಿದ್ದಾರೆ.
ಒಂದೇ ಒಂದು ಕಿಕ್‌ನಿಂದ ಯಾರೂ ಸಾಯವುದಿಲ್ಲ. ಆದರೆ, ನಿಖಿಲ್ ನೆಲಕ್ಕೆ ಬಿದ್ದಾರ ಪ್ಯಾರಾ ಮೆಡಿಕಲ್ ತಂಡದ ನೆರವು ತಕ್ಷಣವೇ ಸಿಗಲಿಲ್ಲ. ನಿಖಿಲ್ ತಕ್ಷಣವೇ ಆಮ್ಲಜನಕ ನೀಡಬೇಕಾಗಿತ್ತು. ಆದರೆ, ಅಲ್ಲಿ ಕನಿಷ್ಠ ಪಕ್ಷ ಆಕ್ಸಿಜನೇಟೆಡ್ ಆಂಬ್ಯುಲೆನ್ಸ್ ಕೂಡ ಇರಲಿಲ್ಲ. ಹೀಗಾಗಿ ದುರ್ಘಟನೆ ಸಂಭವಿಸಿದೆ,ʼʼ ಎಂದು ಅವರು ಹೇಳಿದ್ದಾರೆ.
ತಲೆ ಮರೆಸಿಕೊಂಡ ಆಯೋಜಕ
ನಿಖಿಲ್ ಕುಟುಂದವರ ದುಖದಲ್ಲಿ ನಾನೂ ಭಾಗಿಯಾಗಿದ್ದೇನೆ. ನಾವೆಲ್ಲರೂ ಸಾಮೂಹಿಕ ಜವಾಬ್ದಾರಿ ಹಿಸಿಕೊಳ್ಳಬೇಕಾಗಿದೆ. ಸದ್ಯಕ್ಕೆ ಆಯೋಜಕರು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,ʼʼ ಎಂದು ಅವರು ವಿಕ್ರಮ್ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: Kickboxing Death | ಬೆಂಗಳೂರಿನಲ್ಲಿ ಒಂದೇ ಏಟಿಗೆ ರಿಂಗ್‌ನಲ್ಲೇ ಬಾಕ್ಸರ್ ಸಾವು