Site icon Vistara News

IPL 2023 : ತಂಡದ ಸೋಲಿಗೆ ಕೋಚ್​ಗಳೂ ಕಾರಣ, ಪಾಂಟಿಂಗ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸೆಹ್ವಾಗ್​

Coaches are also the reason for the team's defeat, Sehwag expressed displeasure against Ponting

#image_title

ನವ ದೆಹಲಿ: ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಡೇವಿಡ್​ ವಾರ್ನರ್​ ನೇತೃತ್ವದಲ್ಲಿ ಆಡಿರುವ ತಂಡ ಇದುವರೆಗಿನ ಐದೂ ಹಣಾಹಣಿಗಳಲ್ಲಿ ಸೋತು ನಿರಾಸೆ ಎದುರಿಸಿದೆ. ಹೀಗಾಗಿ ತಂಡದ ಬಗ್ಗೆ ವಿಪರೀತ ಟೀಕೆಗಳು ಕೇಳಿ ಬರುತ್ತಿವೆ. ಅಂತೆಯೇ ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್​ ವೀರೇಂದ್ರ ಸೆಹ್ವಾಗ್​ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಕೋಚ್​ ರಿಕಿ ಪಾಂಟಿಂಗ್ ವಿರುದ್ಧ ಅಸಮಾಧಾನ ತೋರಿದ್ದಾರೆ.

ರಿಕಿ ಪಾಂಟಿಂಗ್ ಈ ಹಿಂದಿನ ಆವೃತ್ತಿಗಳಲ್ಲಿ ತಂಡವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಆದರೆ, ಹಾಲಿ ಆವೃತ್ತಿಯಲ್ಲಿನ ಹಿನ್ನಡೆಯ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅತ್ಯುತ್ತಮ ಪ್ರದರ್ಶನ ನೀಡುತ್ತಿಲ್ಲ. ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಇಳಿದಿದೆ. ತಂಡವೊಂದು ಉತ್ತಮ ಪ್ರದರ್ಶನ ನೀಡಿದ ವೇಳೆ ಕೋಚ್​ಗಳು ಅದರ ಕ್ರೆಡಿಟ್​ ತೆಗೆದುಕೊಳ್ಳುತ್ತಾರೆ. ಅಂತೆಯೇ ತಂಡವೊಂದು ಕಳಪೆ ಪ್ರದರ್ಶನ ನೀಡಿದಾಗೂ ಅವರ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾಗುತ್ತದೆ. ಹಿಂದೆಯೇ ಹಲವು ಬಾರಿ ಹೇಳಿದ್ದೆ. ರಿಕ ಪಾಂಟಿಂಗ್​ ಉತ್ತಮ ಕೋಚ್​. ಅವರು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದಾರೆ. ಪ್ರತಿ ಬಾರಿಯೂ ಪ್ಲೇ ಆಫ್​ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವೆಲ್ಲದರ ಶ್ರೆಯಸ್ಸು ಪಡೆದುಕೊಂಡಿರುವ ಪಾಂಟಿಂಗ್ ಈಗ ಸೋಲಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.

ವಾಸ್ತವದಲ್ಲಿ ಗೆಲುವಿನ ಶ್ರೇಯಸ್ಸು ಹಾಗೂ ಸೋಲಿನ ಹೊಣೆಗಾರಿಕೆ ಹೊತ್ತುಕೊಳ್ಳುವುದಕ್ಕೆ ಅದು ಟೀಮ್​ ಇಂಡಿಯಾ ಅಲ್ಲ. ಐಪಿಎಲ್​ನಲ್ಲಿ ತಂಡದ ಗೆಲುವಿನ ಹಿಂದೆ ಕೋಚ್​ಗಳ ಪಾತ್ರ ಏನೂ ಇಲ್ಲ. ಆಟಗಾರರನ್ನು ನಿರ್ವಹಣೆ ಮಾಡುವುದೇ ದೊಡ್ಡ ಹೊಣೆಗಾರಿಕೆ ಹಾಗೂ ಅವರಿಗೆ ಉತ್ತೇಜನ ನೀಡುವುದೇ ಅವರ ಕೆಲಸ. ಆದರೆ, ತಂಡವೊಂದು ಉತ್ತಮ ಪ್ರದರ್ಶನ ನೀಡಿದ ವೇಳೆ ಮಾತ್ರ ನಮಗೆ ಕೋಚ್​ಗಳು ಚೆನ್ನಾಗಿದ್ದಾರೆ ಎಂದು ಅನಿಸುವುದು. ಆದರೆ ಡೆಲ್ಲಿ ಈ ಬಾರಿ ಅಂಥ ಭಾಗ್ಯ ಇಲ್ಲ ಎಂದು ಹೇಳಿದರು.

ಇದೇ ವೇಳೆ ಸೆಹ್ವಾಗ್​ ಡೆಲ್ಲಿ ತಂಡಕ್ಕೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಹಾಗೂ ತಮ್ಮ ಅದೃಷ್ಟವನ್ನು ಬೆನ್ನಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ 23 ರನ್​ಗಳಿಂದ ಸೋತ ಬಳಿಕ ಸೆಹ್ವಾಗ್ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಆರ್​ಸಿಬಿ ಮತ್ತು ಡೆಲ್ಲಿ ನಡುವಿನ ಪಂದ್ಯದ ಫಲಿತಾಂಶ ಹೀಗಿತ್ತು

ಆರ್​ಸಿಬಿ ಬೌಲರ್​ಗಳ ಬಿಗಿ ದಾಳಿಗೆ ರನ್ ಗಳಿಸಲು ತಿಣುಕಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ 23 ರನ್ ಗಳ ಸೋಲು ಕಂಡಿದೆ. ಆರ್​ಸಿಬಿ ಈ ಗೆಲುವಿನಿಂದ ಮತ್ತೆ ಗೆಲುವಿನ ಹಾದಿಗೆ ಮರಳಿತು. ಡೆಲ್ಲಿ ಸತತ 5 ಸೋಲು ಕಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 151 ರನ್​ ಗಳಿಸಲಷ್ಟೇ ಶಕ್ತವಾಯಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ಪೃಥ್ವಿ ಶಾ(0), ಮಿಚೆಲ್​ ಮಾರ್ಷ್​(0), ಯಶ್​ ಧುಲ್​(1), ಡೇವಿಡ್​ ವಾರ್ನರ್​(19) ಅವರನ್ನು ಕಳೆದುಕೊಂಡು ಸೋಲನ್ನು ಖಚಿತಪಡಿಸಿತು. ತಂಡದ ಮೊತ್ತ 50 ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್​ ಉದುರಿತು. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕನ್ನಡಿಗ ವೈಶಾಕ್​ ವಿಜಯ್​ಕುಮಾರ್​ ಅವರು ಕೇವಲ 20 ರನ್​ ಬಿಟ್ಟು ಕೊಟ್ಟು ಮೂರು ವಿಕೆಟ್​ ಕಿತ್ತರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಜತೆಗೆ ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯಗೊಳಿಸಿದರು.

Exit mobile version