ಮುಂಬಯಿ: ಪ್ರಸ್ತುತ ನಡೆಯುತ್ತಿರುವ 2023 ರ ವಿಶ್ವಕಪ್ನ್ಲಿ ಟೀಮ್ ಇಂಡಿಯಾ ಅಸಾಧಾರಣ ಫಾರ್ಮ್ನಲ್ಲಿದೆ , ಗುಂಪು ಹಂತದಲ್ಲಿ ಒಂಬತ್ತು ಗೆಲುವುಗಳ ಪರಿಪೂರ್ಣ ದಾಖಲೆಯೊಂದಿಗೆ ಅಜೇಯವಾಗಿ ಸೆಮಿಫೈನಲ್ಗೆ ಪ್ರವೇಶ ಪಡೆದಿದೆ. ಅಗ್ರಸ್ಥಾನ ಪಡೆದುಕೊಂಡು ದಾಖಲೆ ಸಮೇತ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡಿದೆ.
ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಆಡಲಿದೆ. ಆ ಪಂದ್ಯದಲ್ಲಿ ಗೆಲ್ಲುವ ಮೂಲಕ 2019ರ ಸೆಮಿಫೈನಲ್ ಸೋಲಿಗೆ ಪ್ರತಿಕಾರ ತೀರಿಸುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕೋಚಿಂಗ್ ಸಿಬ್ಬಂದಿ ಮುಂಬೈನ ವಾಂಖೆಡೆ ಸ್ಟೇಡಿಯಂಗೆ ಭೇಟಿ ನೀಡಿ ಪಿಚ್ ಪರಿಸ್ಥಿತಿಯನ್ನು ಅವಲೋಕಿಸಿದರು. ಪಿಚ್ ಪರಿಸ್ಥಿತಿಯನ್ನು ನೋಡಿ ಪಂದ್ಯಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡುವುದು ಸಹಾಯಕ ಸಿಬ್ಬಂದಿಯ ಯೋಜನೆಯಾಗಿದೆ.
The Indian coaching staff reaches Wankhede. Rahul Dravid and others in discussion with the curator and currently looking at the pitch. #INDvNZ pic.twitter.com/6Vdb9161YM
— Karishma Singh (@karishmasingh22) November 13, 2023
ದೊಡ್ಡ ಸ್ಕೋರ್ನ ಪಂದ್ಯ ಖಾತರಿ
ಪ್ರಸ್ತುತ ವಿಶ್ವಕಪ್ನಲ್ಲಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎಲ್ಲಾ ಮೂರು ಪಂದ್ಯಗಳು ದೊಡ್ಡ ಸ್ಕೋರಿಂಗ್ ವ್ಯವಹಾರಗಳಾಗಿದ್ದವು. ಇದು ಬ್ಯಾಟರ್ಗಳಿಗೆ ಅನುಕೂಲಕರವಾದ ಪಿಚ್ ಆಘಿದೆ. ಆಗಾಗ್ಗೆ ಬೌಲರ್ಗಳಿಗೂ ನೆರವು ಕೊಟ್ಟಿತ್ತು. ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಕೇವಲ 55 ರನ್ ಗಳಿಗೆ ಆಲೌಟ್ ಮಾಡಿ 302 ರನ್ ಗಳಿಂದ ಗೆಲುವು ಸಾಧಿಸಿತ್ತು.
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಸೇರಿದಂತೆ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ಅಪ್ ಉತ್ತಮವಾಗಿ ಕಾರ್ಯನಿರ್ಹಿಸುತ್ತಿದೆ. ಅವರನ್ನು ನಿಯಂತ್ರಣದಲ್ಲಿಡಲು ಕಿವೀಸ್ ಬೌಲರ್ಗಳು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಅವರು ತಮ್ಮ ತವರು ಮೈದಾನದಲ್ಲಿ ಮೆನ್ ಇನ್ ಬ್ಲೂಗೆ ಸವಾಲನ್ನು ಹೇಗೆ ಎಸೆಯುತ್ತಾರೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ.
ಈ ಮೂರು ಕಾರಣಗಳಿಂದಾಗಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ
ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 9ನೇ ಗೆಲುವು ದಾಖಲಿಸಿದೆ. ಮೆನ್ ಇನ್ ಬ್ಲೂ ತಂಡ ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ದಾಖಲಿಸಿ ಗ್ರೂಪ್ ಹಂತವನ್ನು ಅಜೇಯವಾಗಿ ಕೊನೆಗೊಳಿಸಿದೆ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಒಂದೇ ಆವೃತ್ತಿಯಲ್ಲಿ ಸತತ 9 ಗೆಲುವುಗಳನ್ನು ದಾಖಲಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ. 2003ರ ಆವೃತ್ತಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಮೆನ್ ಇನ್ ಬ್ಲೂ ತಂಡ 8 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು.
ಇದನ್ನೂ ಓದಿ : ICC World Cup 2023: 9 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಹೀಗಿತ್ತು…
ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 2023ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಕನಸಿನ ಓಟದ ಹೊರತಾಗಿಯೂ, ನ್ಯೂಜಿಲೆಂಡ್ ವಿರುದ್ಧದ ತಂಡದ ಹಿಂದಿನ ನಾಕೌಟ್ ಪಂದ್ಯಗಳ ಫಲಿತಾಂಶಗಳನ್ನು ಪರಿಗಣಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆತಂಕ ಜೋರಾಗಿದೆ.
2019ರ ವಿಶ್ವ ಕಪ್ನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ (Ind vs Nz) ವಿರುದ್ಧ ಸೋತಿತ್ತು. ಈ ಸೋಲಿಗೆ ಪ್ರತಿಕಾರ ಹೇಳಲು ಭಾರತ ತಂಡ ಸಜ್ಜಾಗಿದೆ. ಜತೆಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಬಲಿಷ್ಠವಾಗಿದ್ದು ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಇವೆಲ್ಲದರ ನಡುವೆ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆಲ್ಲುವುದಕ್ಕೆ ಇದು ಮೂರು ಕಾರಣಗಳು ಪ್ರಮುಖ ಎನ್ನಲಾಗಿದೆ.
ಅಗ್ರ ಕ್ರಮಾಂಕದ ಬ್ಯಾಟಿಂಗ್: 2023ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಅತ್ಯುತ್ತಮm ಫಾರ್ಮ್ನಲ್ಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಶ್ರೇಯಸ್ ಮತ್ತು ಕೆಎಲ್ ರಾಹುಲ್ ಅಗ್ರ ಉತ್ಕೃಷ್ಟ ಆಟ ಪ್ರದರ್ಶಿಸುತ್ತಿದ್ದಾರೆ. ಮತ್ತೊಂದೆಡೆ, ವಾಂಖೆಡೆ ಕ್ರೀಡಾಂಗಣ ಭಾರತದ ಬ್ಯಾಟರ್ಗಳಿಗೆ ಫೇವರಿಟ್ ಎನಿಸಿಕೊಂಡಿದೆ.
ನ್ಯೂಜಿಲೆಂಡ್ ವೇಗಿಗಳು ಈ ಹಿಂದೆ ಭಾರತದ ಅಗ್ರ ಕ್ರಮಾಂಕದ ವಿರುದ್ಧ ಯಶಸ್ಸನ್ನು ಕಂಡಿದ್ದರೂ, ಹಾಲಿ ಪಂದ್ಯಾವಳಿಯಲ್ಲಿ ಆ ಬೌಲರ್ಗಳು ಎದುರಾಳಿ ಬ್ಯಾಟರ್ಗಳನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ 400 ರನ್ ಗಳಿಸಿದರೂ ಫಖರ್ ಜಮಾನ್ ಮತ್ತು ಬಾಬರ್ ಅಜಮ್ ಅವರನ್ನು ತಡೆಯಲು ಕಿವೀಸ್ ಬೌಲಿಂಗ್ಗೆ ಆಗಲಿಲ್ಲ. ರೋಹಿತ್ ಮತ್ತು ಬಳಗವು ಇನ್ನೂ ಬಲಿಷ್ಠವಾಗಿದೆ. ಸೆಮಿಫೈನಲ್ನಲ್ಇ ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸಲು ಸಮರ್ಥವಾಗಿದೆ.
ತವರಿನ ಲಾಭ: ಫಾರ್ಮ್ ಮೆನ್ ಇನ್ ಬ್ಲೂ ಪರವಾಗಿದ್ದರೂ, ತವರು ನೆಲದ ಅನುಕೂಲವೂ ಮಹತ್ವದ ಪಾತ್ರ ವಹಿಸುತ್ತದೆ. ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ 21 ಏಕದಿನ ಪಂದ್ಯಗಳನ್ನಾಡಿದ್ದು, 12 ಪಂದ್ಯಗಳನ್ನು ಗೆದ್ದಿದೆ. ಆಟಗಾರರು, ವಿಶೇಷವಾಗಿ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರು ವಾಂಖೆಡೆ ಮೈದಾನವನ್ನು ತಮ್ಮ ತವರು ಮೈದಾನವೆಂದು ಪರಿಗಣಿಸಿದ್ದಾರೆ. ಅದರ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ.
ತಪ್ಪು ಮಾಡದ ನಡೆ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ರೋಹಿತ್ ಬಳಗ ಒಂದೇ ಒಂದು ತಪ್ಪು ಹೆಜ್ಜೆ ಇಟ್ಟಿಲ್ಲ . ಸತತ 9 ಪಂದ್ಯಗಳಲ್ಲಿ ಜಯ ಗಳಿಸಿರುವ ಫಾರ್ಮ್ ಮತ್ತು ಆತ್ಮವಿಶ್ವಾಸ ಅವರ ಮೇಲಿದೆ. 2019ರ ಸೋಲಿನ ಬೇಸರವನ್ನು ಗಮನದಲ್ಲಿಟ್ಟುಕೊಂಡು, ಟೀಮ್ ಇಂಡಿಯಾ ಈ ಬಾರಿ ತವರು ಪ್ರೇಕ್ಷಕರ ಮುಂದೆ ತಿರುಗೇಟು ನೀಡಲು ಯತ್ನಿಸಲಿದೆ.
ಪಾಕಿಸ್ತಾನಕ್ಕಿಂತ ಉತ್ತಮ ನೆಟ್ ರನ್ ರೇಟ್ ಕಾರಣ ನ್ಯೂಜಿಲ್ಯಾಂಡ್ ಸೆಮಿಫೈನಲ್ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪಂದ್ಯಾವಳಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅಗ್ರ ತಂಡಗಳ ವಿರುದ್ಧ ಆ ತಂಡವು ಸೋಲನ್ನು ಅನುಭವಿಸಿದೆ. ಹೀಗಾಗಿ ಆ ತಂಡದ ವಿಶ್ವಾಸ ಹೆಚ್ಚಿಲ್ಲ.