ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ(Colombo Weather Forecast) ಗುರುವಾರ ಭಾರಿ ಮಳೆಯಾಗಿದೆ. ಹೀಗಾಗಿ ಏಷ್ಯಾಕ್ನ(Asia Cup 2023) ಸೂಪರ್-4 ಪಂದ್ಯಕ್ಕೂ(Asia Cup Super Four) ಮಳೆಯ ಭೀತಿ ಕಾಡಲಾರಂಭಿಸಿದೆ. ಲಂಕಾದಲ್ಲಿ ನಡೆದ ಬಹುತೇಕ ಎಲ್ಲ ಪಂದ್ಯಗಳಿಗೂ ಮಳೆ ಈಗಾಗಲೇ ಅಡ್ಡಿ ಪಡಿಸಿದೆ ಇದರಲ್ಲಿ ಭಾರತ ಮತ್ತು ಪಾಕಿಸ್ತಾನ(India vs Pakistan) ನಡುವಣ ಮೊದಲ ಪಂದ್ಯ ರದ್ದೇ ಗೊಂಡಿತ್ತು. ಈಗ ಉಭಯ ತಂಡಗಳ ನಡುವೆ ಭಾನುವಾರ ನಡೆಯುವ ಪಂದ್ಯವೂ ಮತ್ತೊಮ್ಮೆ ಮಳೆಯಿಂದ ರದ್ದಾಗುವ ಮುನ್ಸೂಚನೆಯೊಂದು ಸಿಕ್ಕಿದೆ.
ಪಂದ್ಯದ ವೇಳೆ ಮೋಡ ಕವಿದ ವಾತಾವರಣ
ಗುರುವಾರವೇ ಇಲ್ಲಿ ಮಳೆಯಾಗಿದೆ. ಮೈದಾನವನ್ನು ಸಂಪೂರ್ಣವಾಗಿ ಕವರ್ನಿಂದ ಮುಚ್ಚಲಾಗಿದೆ. ಆದರೆ ಇಂದು ಯಾವುದೇ ಪಂದ್ಯ ಇರಲಿಲ್ಲ. ಶನಿವಾರದಿಂದ ಸೂಪರ್-4 ಪಂದ್ಯಗಳು ಇಲ್ಲಿ ಆರಂಭಗೊಳ್ಳಲಿದೆ. ಶನಿವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿದೆ. ಮರುದಿನ ಇಂಡೋ-ಪಾಕ್ ಕದನ ನಡೆಯಲಿದೆ. ಆದರೆ ಈ ಪಂದ್ಯಗಳು ಸೇರಿ ಇನ್ನುಳಿದ ಪಂದ್ಯಗಳು ಸಂಪೂರ್ಣವಾಗಿ ನಡೆಯುವುದು ಕಷ್ಟಸಾಧ್ಯ ಎಂದು ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿದೆ. ಅಲ್ಲದೆ ಪಂದ್ಯ ವೇಳೆ ಮೋಡ ಕವಿದ ವಾತಾರಣ ಇರಲಿದ್ದು ಸರಿಯಾದ ಬೆಳಕಿನ ಅಭಾವ ಕೂಡ ಕಾಡಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಬ್ಯಾಡ್ ಲೈಟ್ ಎಂದು ಅಂಪಾಯರ್ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲೂ ಬಹುದು.
ಇದನ್ನೂ ಓದಿ Asia Cup 2023 : ನಮಗೆ ಲಾಸ್ ಆಗಿದೆ; ದುಡ್ಡು ಕೊಡಿ ಎಂದು ಜಯ್ ಶಾಗೆ ದುಂಬಾಲು ಬಿದ್ದಿದೆ ಪಾಕಿಸ್ತಾನ!
ಅಭಿಮಾನಿಗಳಿಗೆ ಮತ್ತೆ ನಿರಾಸೆ!
ಮುಂದಿನ 10 ದಿನಗಳ ಕಾಲವೂ ಇಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾನಾನ ಇಲಾಖೆ ಎಚ್ಚರಿಕೆಯ ಕರೆ ಗಂಟೆ ನೀಡಿದೆ. ಅದರಲ್ಲೂ ಭಾರತ ಮತ್ತು ಪಾಕ್ ಪಂದ್ಯ ನಡೆಯುವ ಭಾನುವಾರದಂದು ಶೇ.90ರಷ್ಟು ಮಳೆ ಸುರಿಯಲಿದೆ ಎಂದು ತಿಳಿಸಿದೆ. ಒಂದೊಮ್ಮೆ ಈ ಪಂದ್ಯ ಮಳೆಯಿಂದ ರದ್ದಾದರೆ ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ನಿರಾಸೆಯಾಗಲಿದ್ದಾರೆ. ಏಕೆಂದರೆ ಪಲ್ಲೆಕೆಯಲ್ಲಿ ನಡೆದ ಮೊದಲ ಲೀಗ್ ಪಂದ್ಯ ಕೇವಲ ಭಾರತದ ಇನಿಂಗ್ಸ್ ಮಾತ್ರ ನಡೆದು ರದ್ದು ಗೊಂಡಿತ್ತು.
ಕೊಲಂಬೋ ಹವಾಮಾನ ವರದಿ
ಮೀಸಲು ದಿನಕ್ಕೆ ಪಂದ್ಯ
ಪಂದ್ಯ ಮಳೆಯಿಂದ ರದ್ದುಗೊಂಡರೆ ಇದನ್ನು ಮೀಸಲು ದಿನ ನಡೆಸಲಾಗುವುದು ಎಂದು ಟೂರ್ನಿಯ ಆಯೋಜರು ತಿಳಿಸಿರುವುದಾಗಿ ‘ಲೇಟೆಸ್ಟ್ ಎಲ್ವಿ’ ಎಂಬ ವೆಬ್ಸೈಟ್ ವರದಿ ಮಾಡಿದೆ. ಮೀಸಲು ದಿನಕ್ಕೂ ಮಳೆ ಬಂದರೆ ಆಗ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಲೀಗ್ನಲ್ಲಿ ಗೆದ್ದ ರನ್ ರೇಟ್ ಆಧಾರದಲ್ಲಿ ತಂಡಗಳು ಮುಂದಿನ ಹಂತಕ್ಕೇರಲಿದೆ. ಫೈನಲ್ನಲ್ಲಿಯೂ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಜಂಟಿಯಾಗಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈಗಾಗಲೇ ಪಾಕಿಸ್ತಾನದಲ್ಲಿ ಒಂದು ಸೂಪರ್-4 ಪಂದ್ಯ ನಡೆದಿದೆ. ಇಲ್ಲಿ ಬಾಂಗ್ಲಾ ವಿರುದ್ಧ ಆತಿಥೇಯ ಪಾಕ್ 7 ವಿಕೆಟ್ನಿಂದ ಗೆಲುವು ಸಾಧಿಸಿದೆ. ಇನ್ನು 5 ಸೂಪರ್-4 ಪಂದ್ಯ ಮತ್ತು ಫೈನಲ್ ಪಂದ್ಯ ಬಾಕಿ ಉಳಿದಿದೆ.
ಇನ್ನುಳಿದ ಏಷ್ಯಾಕಪ್ ಸೂಪರ್-4 ಹಂತದ ವೇಳಾಪಟ್ಟಿ
ಸೆಪ್ಟೆಂಬರ್ 12- ಭಾರತ Vs ಶ್ರೀಲಂಕಾ (ಕೊಲಂಬೊ)
ಸೆಪ್ಟೆಂಬರ್ 14- ಪಾಕಿಸ್ತಾನ Vs ಶ್ರೀಲಂಕಾ (ಕೊಲಂಬೊ)
ಸೆಪ್ಟೆಂಬರ್ 15- ಭಾರತ Vs ಬಾಂಗ್ಲಾದೇಶ (ಕೊಲಂಬೊ)
ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)