Site icon Vistara News

IND vs PAK: ಭಾರತ-ಪಾಕ್​ ಪಂದ್ಯಕ್ಕೆ ಕಂಚಿನ ಕಂಠದ ಕಾಮೆಂಟರಿ ಕಿಂಗ್​ ಅಲಭ್ಯ

Harsha Bhogle

ಅಹಮದಾಬಾದ್​: ಭಾರತೀಯ ಕ್ರಿಕೆಟ್ ಕಾಮೆಂಟರಿಯಲ್ಲಿ ಹರ್ಷ ಭೋಗ್ಲೆ(Harsha Bhogle) ಚಿರಪರಿಚಿತ ಹೆಸರು. ಕಂಚಿನ ಕಂಠದ ಮೂಲಕ ವಿಶ್ಲೇಷಣೆ ಮಾಡುವ ಚಾಕಚಕ್ಯತೆ, ಭಾಷೆಯ ಮೇಲಿನ ಹಿಡಿತ ಅತ್ಯದ್ಭುತ. ಆದರೆ ಈ ಧ್ವನಿಯನ್ನು ಹೈವೋಲ್ಟೇಜ್​ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವೆ ಅಕ್ಟೋಬರ್​ 14ರಂದು ನಡೆಯುವ ಪಂದ್ಯದಲ್ಲಿ ಕೇಳುವ ಸೌಭಾಗ್ಯ ಸಿಗದು. ಹರ್ಷ ಭೋಗ್ಲೆ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಈ ಪಂದ್ಯದ ಕಾಮೆಂಟಿಗೆ ಅಲಭ್ಯರಾಗಿದ್ದಾರೆ. ಸ್ವತಃ ಅವರೇ ಈ ವಿಚಾರವನ್ನು ತಿಳಿಸಿದ್ದಾರೆ.

ಮೂಲತಃ ಹೈದರಾಬಾದ್ ನವರಾದ ಹರ್ಷ ಭೋಗ್ಲೆ ತನ್ನ 19ನೇ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿ ಆರಂಭಿಸಿದ್ದರು. ಅಂದು ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಷ ಆ ಬಳಿಕ ಟಿವಿ ವೀಕ್ಷಕ ವಿವರಣೆಯಲ್ಲಿ ದೊಡ್ಡ ಹೆಸರು ಮಾಡಿದರು. ಆಸ್ಟ್ರೇಲಿಯನ್ ಕ್ರಿಕೆಟ್ ಬ್ರಾಡ್ ಕಾಸ್ಟಿಂಗ್ ನಿಂದ ಕರೆ ಪಡೆದ ಮೊದಲ ಭಾರತೀಯ ಕಾಮೆಂಟೇಟರ್ ಎನ್ನುವ ಹೆಗ್ಗಳಿಕೆಯೂ ಅವರದ್ದಾಗಿದೆ. ಹರ್ಷ ಅವರು ಉತ್ತಮ ಧ್ವನಿ, ವಿಶ್ಲೇಷಣೆ ಮಾಡುವ ರೀತಿ, ಭಾಷೆಯ ಮೇಲಿನ ಹಿಡಿತ ಎಂತವರನ್ನು ಕ್ರಿಕೆಟ್​ ಲೋಕಕ್ಕೆ ಸಳೆಯುವಂತೆ ಮಾಡುತ್ತದೆ. ಅಲ್ಲದೆ ಅವರ ಧ್ವನಿಯನ್ನು ಕೇಳುವಾಗ ಕಣ್ಣ ಮುಂದೆಯೇ ಪಂದ್ಯ ನಡೆಯುವಂತೆ ಭಾಸವಾಗುತ್ತದೆ.

ಇದನ್ನೂ ಓದಿ Team India: 40 ವರ್ಷ ಸೇವೆ ಸಲ್ಲಿಸಿದ ಅಟೆಂಡರ್​ಗೆ ಸ್ಮರಣೀಯ ಉಡುಗೊರೆ ನೀಡಿದ ಟೀಮ್​ ಇಂಡಿಯಾ

ನಿರಾಸೆ ಮೂಡಿದೆ

62 ವರ್ಷದ ಹರ್ಷ ಭೋಗ್ಲೆ ಅವರು ಟ್ವೀಟರ್​ನಲ್ಲಿ ತಮ್ಮ ಅಲಭ್ಯತೆಯನ್ನು ತಿಳಿಸಿದ್ದು, “ಅಕ್ಟೋಬರ್ 19ರಂದು ಪುಣೆಯಲ್ಲಿ ನಡೆಯುವ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯಕ್ಕೆ ಕಾಮೆಂಟೇಟರ್ಸ್ ಬಾಕ್ಸ್‌ಗೆ ಮರಳುವ ವಿಶ್ವಾಸವಿದೆ. ನನ್ನ ನೆಚ್ಚಿನ ಭಾರತ ಮತ್ತು ಪಾಕ್​ ಪಂದ್ಯದಲ್ಲಿ ಈ ಬಾರಿ ಕಾಮೆಂಟ್ರಿ ಮಾಡಲು ಸಾಧ್ಯವಾಗದೇ ಇರುವುದು ನಿಜಕ್ಕೂ ಬೇಸರ ತಂದಿದೆ. ಅಲ್ಲದೆ ನಿರಾಸೆಯೂ ಮೂಡಿದೆ. ನನಗೆ ಡೆಂಗ್ಯೂ ಜ್ವರ ಭಾದಿಸಿದ್ದು ದೀರ್ಘ ಕಾಲ ಕಾಮೆಂಟ್ರಿ ನಡೆಸಲು ಅಸಾಧ್ಯ ಆದರೆ ಪಂದ್ಯವನ್ನು ಮನೆಯಲ್ಲೇ ಕೂತು ಆನಂದಿಸುವೆ” ಎಂದರು.

“ನನ್ನ ಸಹೋದ್ಯೋಗಿಗಳು ಮತ್ತು ಪ್ರಸಾರ ಸಿಬ್ಬಂದಿಗಳು ನನ್ನ ಆರೋಗ್ಯ ಚೇತರಿಕೆಗೆ ಹಾರೈಸಿಸಿದ್ದಾರೆ. ಅವರಿಗೆ ಅವರಿಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ” ಎಂದು ಹರ್ಷ ಭೋಗ್ಲೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಇಂಡೋ-ಪಾಕ್​ ಕದನ ಅಕ್ಟೋಬರ್​ 14ರಂದು ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. 

Exit mobile version