ಬರ್ಮಿಂಗ್‌ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್‌ನ ಸ್ಪರ್ಧೆಯ ಮೊದಲ ದಿನವಾದ ಶುಕ್ರವಾರ ಮಣಿಕಾ ಬಾತ್ರಾ ನೇತೃತ್ವದ ಭಾರತ ಮಹಿಳೆಯ ಟೇಬಲ್ ಟೆನಿಸ್ ತಂಡ ಪ್ರಥಮ ಸುತ್ತಿನ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ೩-೦ ಜಯ ದಾಖಲಿಸಿ ಶುಭಾರಂಭ ಮಾಡಿದೆ. ಭಾರತ ಮಹಿಳೆಯರ ತಂಡವು ಗೋಲ್ಡ್ ಕೋಸ್ಟ್ ಆವೃತ್ತಿಯ ಬಂಗಾರದ ಪದಕ ವಿಜೇತ ತಂಡವಾಗಿದ್ದು, ಮೊದಲ ಸುತ್ತಿನ ಗೆಲುವಿನೊಂದಿಗೆ ಮತ್ತೊಮ್ಮೆ ಪದಕದ ಭರವಸೆಯನ್ನು ನೀಡಿದೆ.
#Cheer4India🇮🇳 | Indian women's table tennis team wins their match against South Africa. Manika Batra and Sreeja Akula win their respective singles games.
— All India Radio News (@airnewsalerts) July 29, 2022
▪️ Reeth Tennison & Sreeja Akula win first doubles match against Lailaa Edwards and Danisha Patel of South Africa#CWG2022 pic.twitter.com/W1Z9kRSsBD
ಶ್ರೀಜಾ ಅಕುಲಾ ಹಾಗೂ ರೀತ್ ರಿಷ್ಯಾ ಅವರಿದ್ದ ಭಾರತದ ಡಬಲ್ಸ್ ತಂಡವು ದಕ್ಷಿಣ ಆಫ್ರಿಕಾದ ಜೋಡಿ ಲೈಲಾ ಎಡ್ವರ್ಡ್ ಹಾಗೂ ದನಿಷಾ ಪಟೇಲ್ ವಿರುದ್ಧ ೧1-7, 11-7, 11-5 ನೇರ ಸೆಟ್‌ಗಳ ಗೆಲುವು ದಾಖಲಿಸಿತು. ಬಳಿಕ ಮಣಿಕಾ ಬಾತ್ರಾ ಸಿಂಗಲ್ಸ್‌ನಲ್ಲಿ ಮುಷ್ಫಿಕ್ ಕಲಾಮ್ ವಿರುದ್ಧ 11-5, 11-3, 11-2 ಸೆಟ್‌ಗಳ ಭರ್ಜರಿ ಜಯ ದಾಖಲಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ 11-5, 11-3, 11-6 ಸೆಟ್‌ಗಳಿಂದ ದನಿಷಾ ಪಟೇಲ್ ವಿರುದ್ಧ ಜಯ ಸಾಧಿಸಿದರು. ಈ ಮೂಲಕ ೩-೦ ಮುನ್ನಡೆಯೊಂದಿಗೆ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡರು.
ಇದೇ ವೇಳೆ ಲಾನ್ ಬೌಲ್ ಸ್ಪರ್ಧೆಯಲ್ಲಿ ಭಾರತದ ತಾನಿಯಾ ಚೌಧರಿ ಸೋಲುಕಂಡರು. ಮಹಿಳೆಯರ ಬಿ ವಿಭಾಗದ ಸ್ಪರ್ಧೆಯಲ್ಲಿ ಅವರು ೧೦-೨೧ ಅಂಕಗಳಿಂದ ಸ್ಕಾಟ್ಲೆಂಡ್‌ನ ಡೀ ಹಾಗೆನ್‌ಗೆ ಮಣಿದರು. ಅದೇ ರೀತಿ ಪುರುಷರ ಟ್ರಿಪಲ್ ಸೆಕ್ಷನಲ್ ಎ ವಿಭಾಗದ ಪಂದ್ಯದಲ್ಲಿ ಭಾರತ ತಂಡವನ್ನು ೧೨-೩ ಅಂಕಗಳಿಂದ ಮಣಿಸಿತು.
ಇದನ್ನೂ ಓದಿ | CWG- 2022 | ಟಾಸ್ ಗೆದ್ದ ಭಾರತದ ವನಿತೆಯರಿಂದ ಬ್ಯಾಟಿಂಗ್ ಆಯ್ಕೆ