ಕೊಲ್ಲೂರು (ಉಡುಪಿ) : ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಕನ್ನಡಿಗ ಗುರುರಾಜ ಪೂಜಾರಿ ಅವರು ಸೋಮವಾರ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ಬೇಟಿ ನೀಡಿದ್ದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಅವರಿಗೆ ಪುಷ್ಪ ವೃಷ್ಟಿ ಮಾಡಿ ಅಭಿನಂದಿಸಿದರು.
ಗುರುರಾಜ ಪೂಜಾರಿ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟವರು. ಅಂತೆಯೇ ಅವರು ೨೦೧೮ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿಯೂ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಹೀಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಕನ್ನಡಿಗನಿಗೆ ಕೊಲ್ಲೂರಿನ ಜನತೆ ಅಕ್ಕರೆ ತೋರಿದರು.
ಗುರುರಾಜ ಅವರು ದೇವಳದ ಒಳಾಂಗಣ ಪ್ರವೇಶ ಮಾಡಿದಾಗ ಜೈಕಾರ ಕೂಗಿದರಲ್ಲದೆ, ಪುಷ್ಪ ವೃಷ್ಟಿ ಮಾಡಿ ಅಭಿನಂದಿಸಿದರು. ಬಳಿಕ ದೇಗುಲದ ವತಿಯಿಂದ ಕಾಮನ್ವೆಲ್ತ್ ವೀರನಿಗೆ ಅಭಿನಂದನೆ ಮಾಡಲಾಯಿತು.
ಗುರುರಾಜ ಪೂಜಾರಿ ಕುಂದಾಪುರ ಸಮೀಪದ ಚಿತ್ತೂರಿನ ನಿವಾಸಿ. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಅವರು ಬಾಲ್ಯದಿಂದಲೇ ಕ್ರೀಡೆಯ ಕಡೆಗೆ ಒಲವು ಹೊಂದಿದ್ದರು.
ಇದನ್ನೂ ಓದಿ | CWG-2022 | ಕಂಚು ಗೆದ್ದ ಗುರುರಾಜ ಪೂಜಾರಿ ಮನೆಯಲ್ಲಿ ಸಂಭ್ರಮ