Site icon Vistara News

Pakistan Cricket Team : ಮೈದಾನದಲ್ಲೇ ನಮಾಜ್ ಮಾಡಿದ ರಿಜ್ವಾನ್ ಮೇಲೆ ಬಿತ್ತು ಕೇಸು

Mohammed Rizwan

ಅಕ್ಟೋಬರ್ 6ರಂದು ಹೈದರಾಬಾದ್​ನಲ್ಲಿ ನಡೆದ ಪಾಕಿಸ್ತಾನ (Pakistan Cricket Team) ಮತ್ತು ನೆದರ್ಲೆಡ್ಸ್​​ ನಡುವಿನ ಪಂದ್ಯದ ವೇಳೆ ಮೊಹಮ್ಮದ್ ರಿಜ್ವಾನ್ ಅವರು ಮೈದಾನದಲ್ಲೇ ನಮಾಜ್ ಮಾಡಿ ತೊಂದರೆ ಎದುರಿಸುವಂತಾಗಿದೆ. ಪಾಕಿಸ್ತಾನದ ವಿಕೆಟ್ ಕೀಪರ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ದೂರು ನೀಡಿದ್ದಾರೆ. ಧಾರ್ಮಿಕ ಆಚರಣೆಗಳ ಮೂಲಕ ರಿಜ್ವಾನ್ ಕ್ರೀಡಾ ಮನೋಭಾವಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಜಿಂದಾಲ್ ತಮ್ಮ ದೂರಿನಲ್ಲಿ ಬರೆದುಕೊಂಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ವಿನೀತ್ ಜಿಂದಾಲ್ ಈ ಹಿಂದೆ ಪಾಕಿಸ್ತಾನದ ನಿರೂಪಕ ಮತ್ತು ವೀಕ್ಷಕ ವಿವರಣೆಗಾರ್ತಿ ಝೈನಬ್ ಅಬ್ಬಾಸ್ ವಿರುದ್ಧ ದೂರು ದಾಖಲಿಸಿದ್ದರು, ಅವರ ಹಿಂದೂ ಹಾಗೂ ಭಾರತ ವಿರೋಧಿ ಹೇಳಿಕೆಗಳನ್ನು ಆಕ್ಷೇಪಿಸಿ ದೂರು ನೀಡಿದ್ದರು. ಹೀಗಾಗ ಝೈನಾಬ್​ ಹೆದರಿ ಭಾರತದಿಂದ ವಾಪಸ್​ ಹೋಗಿದ್ದರು.

2021 ರ ಟಿ 20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧದ ವಿಶ್ವ ಕಪ್​ ಪಂದ್ಯದ ವೇಳೆ ಮೊಹಮ್ಮದ್ ರಿಜ್ವಾನ್ ಪಂದ್ಯದ ಮಧ್ಯದಲ್ಲಿ ನಮಾಜ್ ಮಾಡಿದ್ದರು. ಆ ವಿಶ್ವ ಕಪ್ ದುಬೈನದಲ್ಲಿ ನಡೆದಿದ್ದ ಕಾರಣ ಹೆಚ್ಚು ವಿವಾದಕ್ಕೆ ಒಳಗಾಗಿರಲಿಲ್ಲ. ಆದರೀಗ ಭಾರತದಲ್ಲಿ ನಡೆಯುತ್ತಿರುವ ಕಾರಣ ಸಮಸ್ಯೆ ಎದುರಾಗಿದೆ.

ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ನಂತರ ಅಕ್ಟೋಬರ್ 11 ರಂದು ಗಾಜಾವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಕ್ಕಾಗಿ ರಿಜ್ವಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಐಸಿಸಿ ನಿರ್ಧರಿಸಿದೆ. ಮೈದಾನದ ಹೊರಗೆ ಮಾಡುವ ಕೆಲಸಕ್ಕಾಗಿ ಕ್ರಿಕೆಟಿನಗ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತಮ್ಮ ಅಧಿಕಾರದಲ್ಲಿಲ್ಲ ಎಂದು ಐಸಿಸಿ ಹೇಳಿದೆ. ಯಾವುದೇ ಕ್ರಮ ತೆಗೆದುಕೊಳ್ಳಬೇಕಾದರೆ ಅದು ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಮತ್ತು ಸ್ವತಃ ರಿಜ್ವಾನ್ ಅವರಿಗೆ ಬಿಟ್ಟದ್ದು ಎಂದು ಐಸಿಸಿ ಹೇಳಿದೆ.

ರಿಜ್ವಾನ್​ಗೆ ತಿರುಗೇಟು ನೀಡಿದ ಕನೇರಿಯಾ

ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ತಂಡದ ವಿಶ್ವ ಕಪ್​ ಪಂದ್ಯದ (ICC World Cup 2023) ಗೆಲುವನ್ನು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ದದಲ್ಲಿ ಪ್ರಾಣ ಕಳೆದುಕೊಂಡವರಿಗೆ ಅರ್ಪಿಸಿದ ಪಾಕಿಸ್ತಾನದ ಸ್ಟಾರ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಹೇಳಿಕೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ತಿರುಗೇಟು ನೀಡಿದ್ದಾರೆ. ಮುಂದಿನ ಬಾರಿ ಗೆಲುವನ್ನು ಮಾನವೀಯತೆಗೆ ಸಮರ್ಪಿಸಬೇಕು ಎಂದು ಕನೇರಿಯಾ ಹೇಳುವ ಮೂಲಕ ಅವರಿಗೆ ಪರೋಕ್ಷ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸುದ್ದಿಗಳನ್ನು ಓದಿ
Babar Azam: ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿದ ಪಾಕ್​ ನಾಯಕ ಬಾಬರ್​ ಅಜಂ
Team India: ಬಾಂಗ್ಲಾ ಸವಾಲು ಎದುರಿಸಲು ಪುಣೆ ತಲುಪಿದ ಟೀಮ್​ ಇಂಡಿಯಾ
ENG vs AFG: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಭೂಕಂಪ ಸಂತ್ರಸ್ತರಿಗೆ ಅರ್ಪಿಸಿದ ಮುಜೀಬ್

“ಮುಂದಿನ ಬಾರಿ, ನಿಮ್ಮ ಗೆಲುವನ್ನು ಮಾನವೀಯತೆಗೆ ಅರ್ಪಿಸಿ. ಸರ್ವಶಕ್ತನು ಎಂದಿಗೂ ಕ್ರೌರ್ಯವನ್ನು ಬೆಂಬಲಿಸುವುದಿಲ್ಲ. #IndvsPak” ಎಂದು ದಾನಿಶ್ ಕನೇರಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೂಲ ಪೋಸ್ಟ್ ಬಗ್ಗೆ ಹೇಳುವುದಾದರೆ, ಏಕದಿನ ವಿಶ್ವಕಪ್ 2023 ರ ಎಂಟನೇ ಪಂದ್ಯದಲ್ಲಿ ಪಾಕಿಸ್ತಾನವು ಶ್ರೀಲಂಕಾ ವಿರುದ್ಧ ಭಾರಿ ಗೆಲುವು ದಾಖಲಿಸಿದೆ. 345 ರನ್​ಗಳ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಅವರ ಅದ್ಭುತ ಶತಕಗಳು ನೆರವಾದವರು. ಹೀಗಾಗಿ ಪಾಕಿಸ್ತಾನ 6 ವಿಕೆಟ್​ಗಳಿಂದ ಜಯ ಸಾಧಿಸಿತ್ತು.

ಗೆಲುವಿನ ನಂತರ, ರಿಜ್ವಾನ್ ತಮ್ಮ ಎಕ್ಸ್ ಖಾತೆಯಲ್ಲಿ, “ಇದು ಗಾಜಾದಲ್ಲಿನ ನಮ್ಮ ಸಹೋದರ ಸಹೋದರಿಯರಿಗಾಗಿ. ಗೆಲುವಿಗೆ ಕೊಡುಗೆ ನೀಡಲು ಸಂತೋಷವಾಗಿದೆ. ಇದನ್ನು ಸುಲಭಗೊಳಿಸಿದ ಕೀರ್ತಿ ಇಡೀ ತಂಡಕ್ಕೆ, ವಿಶೇಷವಾಗಿ ಅಬ್ದುಲ್ಲಾ ಶಫೀಕ್ ಮತ್ತು ಹಸನ್ ಅಲಿಗೆ ಅಭಿನಂದನೆಗಳು. ಅದ್ಭುತ ಆತಿಥ್ಯ ಮತ್ತು ಬೆಂಬಲಕ್ಕಾಗಿ ಹೈದರಾಬಾದ್ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದರು.

ಒಂದೇ ಪಂದ್ಯದಲ್ಲಿ ಸೋತಿರುವ ಪಾಕ್​

ಏಕದಿನ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ತಂಡವು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದೆ/ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ಮೊದಲ ಎರಡು ಪಂದ್ಯಗಳಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಮಣಿಸಿತ್ತು. ಆದಾಗ್ಯೂ, ಅವರು ವಿಶ್ವಕಪ್ನ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಿ ಹೀನಾಯ ಸೋಲಿಗೆ ಒಳಗಾಗಿತ್ತು.

ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನದ ಅಗ್ರ ಕ್ರಮಾಂಕದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮ ಜೊತೆಯಾಟವನ್ನು ನಿರ್ಮಿಸಿದರು. ಆದಾಗ್ಯೂ, ಅವರು ಔಟಾದ ನಂತರ, ಮಧ್ಯಮ ಕ್ರಮಾಂಕವು ಲಾಭ ಪಡೆಯಲು ವಿಫಲವಾಯಿತು, ಏಕೆಂದರೆ ಅವರು ಕೇವಲ 191 ರನ್​​ಗಳಿಗೆ ಆಲೌಟ್ ಆದರು.

ಸಣ್ಣ ಮೊತ್ತವನ್ನು ರಕ್ಷಿಸುವ ಗುರಿಯನ್ನು ಹೊಂದಿದ್ದ ಪಾಕ್​​ ತಂಡದ ಬೌಲಿಂಗ್ ದಾಳಿಯು ರೋಹಿತ್ ಶರ್ಮಾ ಅವರ ಪ್ರಾಬಲ್ಯಕ್ಕೆ ಅಪ್ಪಚ್ಚಿಯಾಯಿತು. ಶಾಹೀನ್ ಅಫ್ರಿದಿ 2 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆದಾಗ್ಯೂ, ಭಾರತವು ಏಳು ವಿಕೆಟ್​ಗಳಿಂದ ಪಂದ್ಯವನ್ನು ಗೆದ್ದಿತು.

Exit mobile version