Site icon Vistara News

Rohit Sharma : ಐಪಿಎಲ್​ ಸೇರಿದಂತೆ ರೋಹಿತ್ ಶರ್ಮಾ ಗೆದ್ದಿರುವ ಟ್ರೋಫಿಗಳು ಎಷ್ಟು ಗೊತ್ತೇ?

Rohit sharma

ಕೊಲಂಬೊ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 8ನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 10 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದ ರೋಹಿತ್ ಶರ್ಮಾ, ಏಷ್ಯಾಕಪ್​​ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಮೂರನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಂ.ಎಸ್.ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ 36 ವರ್ಷದ ರೋಹಿತ್ ಈ ಸಾಧನೆ ಮಾಡಿದ್ದಾರೆ.

ಐಪಿಎಲ್​ನಲ್ಲಿ ನಾಯಕನಾಗಿ ದಾಖಲೆಯ ಯಶಸ್ಸಿನ ನಂತರ ರೋಹಿತ್ ಶರ್ಮಾ ಅವರನ್ನು ಡಿಸೆಂಬರ್ 6, 2021 ರಂದು ಭಾರತದ ಏಕದಿನ ನಾಯಕರಾಗಿ ನೇಮಿಸಲಾಯಿತು. ನಂತರ ಅವರು ಎಲ್ಲಾ ಸ್ವರೂಪಗಳಲ್ಲಿ ನಾಯಕತ್ವದ ಕರ್ತವ್ಯಗಳನ್ನು ವಹಿಸಿಕೊಂಡಿದ್ದರು ರೋಹಿತ್ ಶರ್ಮಾ ಇನ್ನೂ ಭಾರತವನ್ನು ಐಸಿಸಿ ಟ್ರೋಫಿ ಗೆಲುವಿನತ್ತ ಮುನ್ನಡೆಸದಿದ್ದರೂ, ಅವರ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಎಲ್ಲಾ ಸ್ವರೂಪಗಳಲ್ಲಿ ಯೋಗ್ಯ ಯಶಸ್ಸನ್ನು ಸಾಧಿಸಿದೆ.

ರೋಹಿತ್​ ಶರ್ಮಾ ಅವರ ನಾಯಕತ್ವದ ಟ್ರೋಫಿ ಸಾಧನೆಗಳು

ಟ್ರೋಫಿಗಳುಎಷ್ಟು?ವರ್ಷ
ಐಪಿಎಲ್​052013, 2015, 2017, 2019, 2020
ಚಾಂಪಿಯನ್ಸ್ ಲೀಗ್​ ಟಿ20012013
ಏಷ್ಯಾ ಕಪ್​ 022018, 2023
ನಿಧಾಸ್​ ಟ್ರೋಫಿ012018

ನಾಯಕನಾಗಿ ರೋಹಿತ್ ಶರ್ಮಾ ದಾಖಲೆ

ರೋಹಿತ್ ಈವರೆಗೆ ಹತ್ತು ಪ್ರಮುಖ ಫೈನಲ್​​ಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆರು ಬಾರಿ ಮತ್ತು ಭಾರತಕ್ಕಾಗಿ ನಾಲ್ಕು ಬಾರಿ ಆಡಿದ್ದಾರೆ. 36ರ ಹರೆಯದ ರೋಹಿತ್​ 10ರಲ್ಲಿ 9 ಫೈನಲ್ ಪಂದ್ಯಗಳನ್ನು ಗೆದ್ದಿದ್ದಾರೆ. 2023ರ ಡಬ್ಲ್ಯುಟಿಸಿ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದರು.

ಟೀಮ್​ ಇಂಡಿಯಾಗೆ ಬಹುರಾಷ್ಟ್ರೀಯ ಟ್ರೋಫಿ

ಟೀಮ್ ಇಂಡಿಯಾ ಕೊನೆಗೂ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದಿದೆ. ಈ ಮೂಲಕ ತಮ್ಮ ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್​ ಶರ್ಮಾ (Rohit Sharma) ನೇತೃತ್ವದ ಭಾರತವು ಶ್ರೀಲಂಕಾವನ್ನು 10 ವಿಕೆಟ್ ಗಳಿಂದ ಸೋಲಿಸಿ ಎಂಟನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವ ಕಪ್​ ಆರಂಭಕ್ಕೆ ಮೂರು ವಾರುಗಳು ಬಾಕಿ ಇರುವಾಗ ಈ ಖಂಡಾಂತರ (Rohit Sharma) ಟ್ರೋಫಿಯನ್ನು ಗೆಲ್ಲುವ ಮೂಲಕ ಭಾರತ ತಂಡದ ವಿಶ್ವಾಸ ಇಮ್ಮಡಿಯಾಗಿದೆ.

ಇದನ್ನೂ ಓದಿ : Mohammed Siraj : ಹೈದರಾಬಾದ್ ಹರಿಕೇನ್​ ಸಿರಾಜ್​ ಸೃಷ್ಟಿಸಿದ ದಾಖಲೆಗಳ ಪಟ್ಟಿ ಇಲ್ಲಿದೆ

ಮೊಹಮ್ಮದ್ ಸಿರಾಜ್ 21ಕ್ಕೆ 6 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ತಂಡವನ್ನು 15.2 ಓವರ್​ಗಳಲ್ಲಿ 50 ರನ್​ಗಳಿಗೆ ಭಾರತ ತಂಡ ಆಲೌಟ್ ಮಾಡಿತು. ಏಷ್ಯಾಕಪ್ ಪಂದ್ಯದಲ್ಲಿ ಸಿರಾಜ್ ಭಾರತ ಪರ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಸೃಷ್ಟಿಸಿದರು. ಶ್ರೀಲಂಕಾ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿ ಕಳಪೆ ದಾಖಲೆ ಸೃಷ್ಟಿಸಿತು.

ಇದಕ್ಕೆ ಉತ್ತರವಾಗಿ ಭಾರತವು ಕೇವಲ 6.1 ಓವರ್​ಗಳಲ್ಲಿ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರ ಆಕರ್ಷಕ ಶತಕದ ನೆರವಿನಿಂದ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯವು ಕೇವಲ 129 ಎಸೆತಗಳಲ್ಲಿ ಮುಕ್ತಾಯ ಕಂಡಿತು. 2023 ರ ಏಷ್ಯಾ ಕಪ್ ಫೈನಲ್ ಪಂದ್ಯವು ಮೂರನೇ ಅತಿ ಕಡಿಮೆ ಎಸೆತಗಳ ಏಕದಿನ ಪಂದ್ಯ ಎನಿಸಿಕೊಂಡಿತು. ಭಾರತವು ಉಳಿದಿರುವ ಎಸೆತಗಳ ಲೆಕ್ಕಚಾರದಲ್ಲಿ (263) ಸ್ವರೂಪದಲ್ಲಿ ಅತಿದೊಡ್ಡ ಗೆಲುವನ್ನು ದಾಖಲಿಸಿದೆ. 1998ರಲ್ಲಿ ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಜಯ ಸಾಧಿಸಿತ್ತು.

Exit mobile version