ಮುಂಬಯಿ: ಕ್ರಿಕೆಟ್ ದೇವರು, ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ವಿಕೆಟ್ ಪಡೆಯುವುದೆಂದರೆ ಅದು ಯಾವುದೇ ಬೌಲರ್‌ಗೆ ‘ಡಬಲ್ ಹ್ಯಾಟ್ರಿಕ್’ ಸಾಧನೆಗೆ ಸಮನಾದ ಗೌರವ. ವಿಕೆಟ್ ಕಿತ್ತ ಬೌಲರ್ನ ಸಂಭ್ರಮವನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಹಿಂದಿ ಬಿಗ್ ಬಾಸ್ 17ರ ವಿನ್ನರ್ ಮುನಾವರ್ ಫಾರೂಕಿ(Bigg Boss Winner Munawar Faruqui) ಇದೀಗ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಕಿತ್ತು ಸುದ್ದಿಯಾಗಿದ್ದಾರೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ(Indian Street Premier League) ಫ್ರೆಂಡ್ಲಿ ಮ್ಯಾಚ್ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ವೈರಲ್(Viral Video) ಆಗಿದೆ.
ಸಚಿನ್ ತೆಂಡೂಲ್ಕರ್ ಅವರು 16 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಈ ವೇಳೆ ಬೌಲಿಂಗ್ ನಡೆಸಿದ ಮುನಾವರ್ ಫಾರೂಕಿ ಅವರು ಸಚಿನ್ ವಿಕೆಟ್ ಪಡೆದಿದ್ದಾರೆ. ಲೆಗ್ ಸೈಡ್ನತ್ತ ಬಾರಿಸಿದ ಚೆಂಡು ಟಾಪ್ ಎಡ್ಜ್ ಆಗಿ ಫೀಲ್ಡರ್ ನಮಾನ್ ಕೈ ಸೇರಿತು. ಸಚಿನ್ ವಿಕೆಟ್ ಬಿದ್ದೊಡನೆ ಮೈದಾನ ಸಂಪೂರ್ಣವಾಗಿ ಮಾನವಾಯಿತು. ಕಾಮೆಂಟ್ರಿಯಲ್ಲಿಯೂ ಇದನ್ನೇ ಉಚ್ಚರಿಸಿದರು. ಸಚಿನ್ ವಿಕೆಟ್ ಪಡೆದ ಫಾರೂಕಿ ಮುಗ್ದ ಭಾವದ ನಗುವೊಂದನ್ನು ಬೀರಿದರು.
Munawar took the wicket of Sachin#MunawarFaruqui pic.twitter.com/Wvjt350RDy
— waSu (MKJW) (@wk1437272) March 6, 2024
ರಾಬಿನ್ ಉತ್ತಪ್ಪ ಮತ್ತು ಇತರರನ್ನು ಒಳಗೊಂಡ ಮೋಜಿನ ಪಂದ್ಯದಲ್ಲಿ, ಚಾಂಪಿಯನ್ ಬ್ಯಾಟರ್ ಅನ್ನು ಬಿಗ್ ಬಾಸ್ 17 ವಿಜೇತ ಮುನ್ವರ್ ಫರೂಕಿ ವಜಾಗೊಳಿಸಿದರು. 30 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ತೆಂಡೂಲ್ಕರ್ ಫಾರುಕಿ ಎಸೆತದಲ್ಲಿ ಟಾಪ್ ಎಡ್ಜ್ ಮಾಡಿ ಕ್ಯಾಚ್ ಪಡೆದರು. “ಕ್ರೀಡಾಂಗಣದಲ್ಲಿ ಸಂಪೂರ್ಣ ಮೌನ” ಎಂದು ಕಾಮೆಂಟೇಟರ್ ಹೇಳಿದರು.
ಇದನ್ನೂ ಓದಿ Sachin Tendulkar : ವಿಶೇಷಚೇತನ ಕ್ರಿಕೆಟರ್ ಅಮೀರ್ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ
ಸ್ಟ್ಯಾಂಡಪ್ ಕಮಿಡಿಯನ್ ಆಗಿರುವ ಮುನಾವರ್ ಫಾರೂಕಿ (Munawar Faruqui) ಹಲವು ವಿದಾದಗಳಿಂದಲೂ ಸುದ್ದಿಯಾದವರು. 2 ವರ್ಷಗಳ ಹಿಂದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಲ್ಲಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತು ಡೆಲ್ಲಿಯಲ್ಲಿ ನಡೆಯಬೇಕಿದ್ದ ಅವರ ಸ್ಟ್ಯಾಂಡಪ್ ಕಮಿಡಿ ಶೋ ವನ್ನು ರದ್ದು ಮಾಡಲಾಗಿತ್ತು. ಭದ್ರತಾ ಕಾರಣಗಳಿಂದಾಗಿ ಪೊಲೀಸರು ಮುನಾವರ್ ಶೋಗೆ ಅನುಮತಿ ನಿರಾಕರಿಸಿದ್ದರು.
ಮಧ್ಯಪ್ರದೇಶದಲ್ಲಿ ನಡೆದ ಶೋ ಒಂದರಲ್ಲಿ ಮುನಾವರ್ ಫಾರೂಕಿ ಅವರು ಜೋಕ್ ಮಾಡುವ ಭರದಲ್ಲಿ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಇದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಬೆಂಗಳೂರು ಸೇರಿ 10ಕ್ಕೂ ಹೆಚ್ಚಕ್ಕೂ ಕಡೆ ಮುನಾವರ್ ಶೋಗಳು ರದ್ದಾಗಿದ್ದವು.
ಕ್ರಿಕೆಟ್ ಆಟಗಾರರಿಗೆ ಸ್ಫೂರ್ತಿ
ಸಚಿನ್ ಅವರು 24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.