Site icon Vistara News

Asia Cup 2023: ಲಂಕಾದಲ್ಲಿ ಕೊರೊನಾ ಅಟ್ಟಹಾಸ; ಆಟಗಾರರಿಗೆ ಪಾಸಿಟಿವ್​, ಏಷ್ಯಾಕಪ್​ ಅನುಮಾನ

Avishka Fernando and Kusal Perera

ಕೊಲಂಬೊ: ಏಷ್ಯಾ ಕಪ್​ಗೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ಶ್ರೀಲಂಕಾದಲ್ಲಿ ಕೊರೊನಾ ಅಟ್ಟಹಾಸ ಆರಂಭವಾಗಿದೆ. ಏಷ್ಯಾಕಪ್​ನಲ್ಲಿ(Asia Cup 2023) ಸ್ಥಾನ ಪಡೆದ ಲಂಕಾದ ಒಬ್ಬರು ಆಟಗಾರರಿಗೆ ಕೊರೊನಾ ಸೊಂಕು(COVID-19) ತಗುಲಿದೆ. ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೋ (Avishka Fernando) ಮತ್ತು ವಿಕೆಟ್ ಕೀಪರ್ ಕುಸಾಲ್ ಪೆರೆರಾ (Kusal Perera) ಕೊರೊನಾ ಪಾಸಿಟಿವ್​ ಬಂದ ಆಟಗಾರರು ಎಂದು ತಿಳಿದುಬಂದಿದೆ.

ಈ ಬಾರಿಯ ಏಷ್ಯಾಕಪ್​ಗೆ ಪಾಕಿಸ್ತಾನ ಆತಿಥ್ಯವಹಿಸಿಕೊಂಡರು ಭಾರತ ತಂಡ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಹೇಳಿ ತಮ್ಮ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸಬೇಕೆಂಸು ಪಟ್ಟುಹಿಡಿದಿತ್ತು. ಈ ಕಾರಣದಿಂದ ಟೂರ್ನಿ ಹೈಬ್ರಿಡ್​ ಮಾದರಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಪಂದ್ಯಗಳು ನಡೆಯುತ್ತಿವೆ. ಆಗಸ್ಟ್​ 30ರಿಂದ ಟೂರ್ನಿ ಆರಂಭಗೊಳ್ಳಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ ನಾಲ್ಕು ಮತ್ತು ಉಳಿದ 9 ಪಂದ್ಯಗಳು ಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಮತ್ತೆ ಕೋವಿಡ್​ ಕಂಟಕ

50 ಓವರ್​ ಮಾದರಿಯಲ್ಲಿ ನಡೆಯುವ ಏಷ್ಯಾಕಪ್​ಗೆ ಏಷ್ಯಾದ ಪ್ರಮುಖ ತಂಡಗಳು ಸಿದ್ಧತೆ ನಡೆಸುತ್ತಿರುವಾಗಲೇ ಲಂಕಾದಲ್ಲಿ ಕೊರೊನಾ ಮಾರಿ ಮತ್ತೆ ತನ್ನ ಅಟ್ಟಹಾಸವನ್ನು ಆರಂಭಿಸಿರುವುದು ಎಲ್ಲ ತಂಡಗಳಿಗೂ ಆತಂಕ ಉಂಟು ಮಾಡಿದೆ. ವಿಶ್ವ ಕಪ್​ ಆಟರಂಭಕ್ಕೂ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಕೊರೊನಾ ಸೋಂಕಿಗೆ ತುತ್ತಾದರೆ ಅಭ್ಯಾಸ ನಡೆಸಲು ಸಾಧ್ಯವಾಗದೆ ತಂಡದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಚಿಂತೆ ಕಾಡಲಾರಂಭಿಸಿದೆ.

ಭಾರತಕ್ಕೆ ಮತ್ತಷ್ಟು ಚಿಂತೆ

ಭಾರತಕ್ಕೆ ಹೆಚ್ಚಿನ ಚಿಂತೆ ಕಾಡಲಾಂಬಿಸಿದೆ. ಏಕೆಂದರೆ ಭಾರತ ತನ್ನ ಪಾಲಿನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಪ್ರಯಾಣದ ವೇಳೆ ಮತ್ತು ಹೊಟೇಲ್​ ವಾಸದ ವೇಳೆ ಕೋವಿಡ್​ ಸೋಂಕು ವಕ್ಕರಿಸುವ ಭೀತಿ ರೋಹಿತ್​ ಶರ್ಮ ಪಡೆಗೆ ಕಾಡಲಾರಂಭಿಸಿದೆ. ಅದರಲ್ಲೂ ಜಸ್​ಪ್ರೀತ್​ ಬುಮ್ರಾ, ಶ್ರೇಯಸ್​ ಅಯ್ಯರ್​ ಮತ್ತು ಕೆ.ಎಲ್​ ರಾಹುಲ್​ ಅವರು ಈಗಾಗಲೇ ಗಾಯದಿಂದ ಚೇತರಿಕೆ ಕಂಡಿದ್ದಾರೆ. ಒಂದೊಮ್ಮೆ ಅವರಿಗೆ ಸೋಂಕು ತಗುಲಿದರೆ ಅವರ ಪ್ರತಿಕಾಯ ಸಾಮರ್ಥ್ಯದಲ್ಲಿ ಕುಸಿತ ಕಂಡು ಚೇತರಿಕೆಗೆ ಮತ್ತಷ್ಟು ಸಮಯ ತೆಗೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಲೂ ಬಹುದು ಹೀಗಾಗಿ ಭಾರತ ಆತಂಕದಲ್ಲೇ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಬೇಕಿದೆ.

ಇದನ್ನೂ ಓದಿ Asia Cup 2023: ಯೋ-ಯೋ ಟೆಸ್ಟ್​ ಪಾಸ್​ ಆದ ನಾಯಕ ರೋಹಿತ್​,ಹಾರ್ದಿಕ್​

ಬಯೋಬಬಲ್​ ಸಾಧ್ಯತೆ

ಕೊರೊನಾ ಕಾಲಘಟ್ಟದಲ್ಲಿ ಪಂದ್ಯಗಳನ್ನು ಬಯೋಬನಲ್​ನಲ್ಲಿ ಮಾದರಿಯಲ್ಲಿ ನಡೆಸಿದಂತೆ. ಲಂಕಾದಲ್ಲಿ ನಡೆಯುವ ಪಂದ್ಯಗಳಿಗೂ ಬಯೋಬಬಲ್​ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ. ಹೀಗಾದರೆ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯಲಿದೆ. ಸದ್ಯಕ್ಕೆ ಆಟಗಾರರಿಗೆ ಸೋಂಕು ತಗಲುವುದನ್ನು ತಪ್ಪಿಸಲು ಇದೊಂದೆ ಪರಿಹಾರವಾಗಿದೆ.

ಕಳೆದ ವರ್ಷವೂ ಉಭಯ ಆಟಗಾರರಿಗೆ ಸೋಂಕು ಬಾಧಿಸಿತ್ತು

ಫೆರ್ನಾಂಡೋ ಮತ್ತು ಪರೆರಾ ಅವರಿಗೆ ಕಳೆದ ವರ್ಷವೂ ಕೊರೊನ ಸೋಂಕು ಬಾಧಿಸಿತ್ತು. ಕಳೆದ ವರ್ಷ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮೊದಲು ಫೆರ್ನಾಂಡೋ ಸೋಂಕಿಗೆ ತುತ್ತಾಗಿದ್ದರು. ಅಚ್ಚರಿ ಎಂದರೆ ಅವರು ಬೂಸ್ಟರ್ ಡೋಸ್ ಪಡೆದ ಕೇವಲ ಎರಡು ವಾರಗಳ ಅಂತರದಲ್ಲಿ ಕೊರೊನಾ ಸೋಕಿಗೆ ತುತ್ತಾದಗಿದ್ದರು. ಇದು ಭಾರಿ ಚರ್ಚೆಗೂ ಕಾರಣವಾಗಿತ್ತು. ಪೆರೆರಾ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಕೋವಿಡ್​ ಪಾಸಿಟಿವ್​ ಬಂದು ಸರಣಿಯಿಂದ ಹೊರಗುಳಿದಿದ್ದರು. ಇದೀಗ ಏಷ್ಯಾಕಪ್​ನ ಆರಂಭಿಕ ಕೆಲ ಪಂದ್ಯಗಳಿಗೆ ಅನುಮಾನ ಎನ್ನಲಾಗಿದೆ.

Exit mobile version