IPL2022: Delhi capitals ತಂಡದಲ್ಲಿ ಮತ್ತೊಂದು ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಕೊರೋನಾ (Covid-19) ಸೋಂಕಿನಿಂದ ಐಪಿಎಲ್ ಟೂರ್ನಿಗೆ ಯಾವುದೇ ಅಡಚಣೆ ಉಂಟಾಗದಂತೆ ಬಿಸಿಸಿಐ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು. ಆದರೆ, ದಿಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೂರು ಕೋವಿಡ್ ಕೇಸ್ ಪತ್ತೆಯಾಗಿರುವುದು ಭಯದ ವಾತಾವರಣ ಸೃಷ್ಟಿಸಿದೆ.
ಕೆಲವು ದಿನಗಳ ಹಿಂದೆ ಡಿ.ಸಿ. ತಂಡದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾರ್ಟ್ ಕೋವಿಡ್ ಸೋಂಕು ಕಡಿದ್ದು ಅವರನ್ನು ಪ್ರತ್ಯೇಕ ಇರಿಸಲಾಗಿತ್ತು. ಆದರೆ, ಈಗ ರ‍್ಯಾಪಿಡ್ ಪರೀಕ್ಷೆಯಲ್ಲಿ ಮತ್ತೋರ್ವ ಸದಸ್ಯ ಹಾಗೂ ಓರ್ವ ಆಟಗಾರ ಸೋಂಕಿಗೆ ಒಳಗಾಗಿದ್ದು ಪತ್ತೆಯಾಗಿದೆ. ಬಿಸಿಸಿಐ ಮುನ್ನೆಚ್ಚರಿಕಾ ಕ್ರಮವಾಗಿ ದಿಲ್ಲಿ ಕ್ಯಾಪಿಟಲ್ಸ್‌ನ (DC) ಎಲ್ಲಾ ಆಟಗಾರರಿಗೂ ಪರೀಕ್ಷೆ ಮಾಡಿಸುವಂತೆ ಸೂಚಿಸಿದೆ. ಕೋವಿಡ್ ರಿಪೋರ್ಟ್ ಬರುವವರೆಗೂ ತಂಡದ ಆಟಗಾರರು ಹಾಗೂ ಇತರೆ ಸದಸ್ಯರು ಕ್ವಾರಂಟೈನ್ ಆಗಲಿದ್ದಾರೆ.
DC ತಂಡ ಏಪ್ರಿಲ್ 20 ರಂದು ನಡೆಯಲಿರುವ ಪಂಜಾಬ್ ವಿರುದ್ಧದ ಪಂದ್ಯಕ್ಕಾಗಿ ಇಂದು ಪುಣೆಗೆ ಪ್ರಯಾಣಿಸಬೇಕಿತ್ತು. ಆದರೆ, ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ದಿಲ್ಲಿ ತಂಡದ ಪ್ರಯಾಣ ರದ್ದು ಮಾಡಲಾಗಿದೆ. ಆದರೆ, ಈ ವರೆಗೆ ಬಿಸಿಸಿಐ ಐಪಿಎಲ್ ಪಂದ್ಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ಐಪಿಲ್ ಪಂದ್ಯಗಳ ಮೇಲೆ ಪರಿಣಾಮವಾಗಬಹುದೇ? ಬಿಸಿಸಿಐ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದು ಪ್ರಶ್ನಾರ್ಥಕವಾಗಿದೆ.