ಪೋರ್ಟ್ ಆಫ್ ಸ್ಪೇನ್: ಕೆಲ ದಿನಗಳ ಹಿಂದಷ್ಟೇ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL 2023) ಸಮಯ ವ್ಯರ್ಥವನ್ನು ತಡೆಯಲು ಫುಟ್ಬಾಲ್ನಂತೆಯೇ ರೆಡ್ ಕಾರ್ಡ್ ನಿಯಮ ಜಾರಿಗೆ ತರಲಾಗಿತ್ತು. ಈ ನಿಯಮದ ಪ್ರಕಾರ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡರೆ ತಂಡಗಳಿಗೆ 5 ರನ್ ದಂಡ ಮತ್ತು ತಂಡದ ಒಬ್ಬ ಆಟಗಾರನನ್ನು ‘ಅಮಾನತು’ ಶಿಕ್ಷೆ ವಿಧಿಸುವ ನಿರ್ಧಾರ ಕೈಗೊಂಡಿತ್ತು. ಈ ಶಿಕ್ಷೆಗೆ ಮೊದಲ ಆಟಗಾರನಾಗಿ ಸುನೀಲ್ ನಾರಾಯಣ್(Sunil Narine) ಗುರಿಯಾಗಿದ್ದಾರೆ. ನಿಧಾನಗತಿಯ ಓವರ್ ನಡೆಸಿದಕ್ಕೆ ಅವರನ್ನು ಅಂಪೈರ್ ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಅಮಾನತುಗೊಳಿಸಿದ್ದಾರೆ. ಅಂಪೈರ್ ಅವರು ರೆಡ್ ಕಾರ್ಟ್ ತೋರಿಸಿದ ಫೋಟೊ ಮತ್ತು ವಿಡಿಯೊ ಎಲ್ಲಡೆ ವೈರಲ್ ಆಗಿದೆ.(viral video)
ರಡ್ ಕಾರ್ಟ್ ಪಡೆದ ಮೊದಲ ಕ್ರಿಕೆಟಿಗ
ಸೋಮವಾರ ನಡೆದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯ ವೇಳೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಅಂಪೈರ್ ರೆಡ್ ಕಾರ್ಟ್(sunil narine red card) ತೋರಿಸಿದರು. ನಿಗದಿತ ಸಮಯದೊಳಗೆ 19 ಓವರ್ಗಳನ್ನು ಪೂರ್ಣಗೊಳಿಸದ ಕಾರಣ ತಂಡಕ್ಕೆ ರೆಡ್ ಕಾರ್ಡ್ ತೋರಿಸಲಾಯಿತು. ಶಿಕ್ಷೆಯ ನಿಯಮದ ಪ್ರಕಾರ ಸುನೀಲ್ ನಾರಾಯಣ್ ಅವರು ಮೈದಾನ ತೊರೆದರು. ಕೈರಾನ್ ಪೊಲಾರ್ಡ್ ಈ ತಂಡಕ್ಕೆ ನಾಯಕನಾಗಿದ್ದಾರೆ. ಕ್ರಿಕೆಟ್ನಲ್ಲಿ ರೆಡ್ ಕಾರ್ಡ್ ಪಡೆದ ಮೊದಲ ಆಟಗಾರ ಎಂಬ ಕೆಟ್ಟ ದಾಖಲೆ ಸುನೀಲ್ ನಾರಾಯಣ್ ಹೆಸರಿಗೆ ಸೇರಿಕೊಂಡಿತು.
ಸಿಪಿಎಲ್ 2023: ಓವರ್ ರೇಟ್ ದಂಡ
1. 18ನೇ ಓವರ್ ಆರಂಭಕ್ಕೆ ಮೊದಲು ನಿಗದಿತ ಸಮಯ ಮುಗಿದಿದ್ದರೆ ಒಬ್ಬ ಆಟಗಾರ ಫೀಲ್ಡಿಂಗ್ 30 ಯಾರ್ಡ್ನೊಳಗೆ ಬರಬೇಕಾಗುತ್ತದೆ. (ಒಟ್ಟು 5 ಆಟಗಾರರು ಕಡ್ಡಾಯ).
2. 19 ನೇ ಓವರ್ ಆರಂಭದ ವೇಳೆಯೂ ಸಮಯ ಕಾಪಾಡಿಕೊಳ್ಳದಿದ್ದರೆ ಇಬ್ಬರು ಸರ್ಕಲ್ ಒಳಗೆ ಬರಬೇಕು (ಒಟ್ಟು 6 ಆಟಗಾರರು)
3. 20 ನೇ ಓವರ್ನ ಆರಂಭದಲ್ಲಿ ಇನ್ನೂ ರೇಟ್ಗಿಂತ ಹಿಂದೆ ಇದ್ದರೆ, ಫೀಲ್ಡಿಂಗ್ ತಂಡ ಒಬ್ಬ ಆಟಗಾರನನ್ನು ಹೊರಕ್ಕೆ ಕಳುಹಿಸಬೇಕಾಗುತ್ತದೆ. ಸರ್ಕಲ್ ಒಳಗೆ ಆರು ಫೀಲ್ಡರ್ಗಳು ಇರಬೇಕು.
4. ಬ್ಯಾಟಿಂಗ್ ಮಾಡುವ ತಂಡಗಳು ಸಮಯ ವ್ಯರ್ಥ ಮಾಡುವಂತಿಲ್ಲ. ಅಂಪೈರ್ಗಳಿಂದ ಮೂರು ಎಚ್ಚರಿಕೆ ಪಡೆದ ನಂತರವೂ ಆಟ ಶುರು ಮಾಡದಶೇ ಹೋದರೆ 5 ಪೆನಾಲ್ಟಿ ರನ್ ನೀಡಲಾಗುತ್ತದೆ.
19ನೇ ಓವರ್ 80 ನಿಮಿಷ 45 ಸೆಕೆಂಡುಗಳಿಗಿಂತ ಕಡಿಮೆ ಇಲ್ಲದಿದ್ದರೆ, ಒಬ್ಬ ಆಟಗಾರನನ್ನು ಮೈದಾನದಿಂದ ಹೊರಹಾಕಲಾಗುತ್ತದೆ. ಮೈದಾನದಲ್ಲಿ ನಾಯಕ ಈ ಆಟಗಾರನನ್ನು ತೆಗೆದುಹಾಕುವ ಆಯ್ಕೆಯನ್ನು ಮಾಡುತ್ತಾನೆ.
ಬೌಲಿಂಗ್ ತಂಡವು 17ನೇ ಓವರ್ 72 ನಿಮಿಷ 15 ಸೆಕೆಂಡುಗಳಲ್ಲಿ ಮುಗಿಸಬೇಕಾಗಿದೆ. ಹಾಗೆ ಮಾಡಲು ವಿಫಲವಾದರೆ ಹೆಚ್ಚುವರಿ ಫೀಲ್ಡರ್ 30 ಯಾರ್ಡ್ ಸರ್ಕಲ್ನಿಂದ ಒಳಕ್ಕೆ ಕರೆದುಕೊಂಡು ಬರಬೇಕಾಗುತ್ತದೆ. 18 ನೇಓವರ್ 76 ನಿಮಿಷ 30 ಸೆಕೆಂಡುಗಳಲ್ಲಿ ಮುಗಿಸಬೇಕು. ಆಗದೇ ಹೋದರೆ ಇಬ್ಬರು ಫೀಲ್ಡರ್ಗಳು 30 ಯಾರ್ಡ್ ವೃತ್ತದೊಳಗೆ ಬರಬೇಕಾಗುತ್ತದೆ.
ಇದನ್ನೂ ಓದಿ West Indies Cricket: ಕ್ರಿಕೆಟ್ ಜಗತ್ತನ್ನು ಆಳಿದ್ದ ವಿಂಡೀಸ್ ಈಗ ಪಾತಾಳಕ್ಕೆ ಕುಸಿಯಲು ಇದುವೇ ಪ್ರಮುಖ ಕಾರಣ
ಐಸಿಸಿ ನಿಯಮ ಹೇಗಿದೆ
ಚರ್ಚೆ ಮಾಡುತ್ತಾ ಸಮಯ ಕಳೆದು ಎದುರಾಳಿ ತಂಡದ ಏಕಾಗ್ರತೆಗೆ ಭಂಗ ತರುವ ಯಾವುದೇ ಉದ್ದೇಶಕ್ಕೆ ಐಸಿಸಿ ಪಂದ್ಯದ ಸಂಭಾವನೆ ಕಡಿತ ಮಾಡುವ ದಂಡನೆಯನ್ನು ಜಾರಿಯಲ್ಲಿಟ್ಟಿದೆ. ಆದರೆ ಲೀಗ್ ಕ್ರಿಕೆಟ್ಗಳು ಇದಕ್ಕೆ ಕ್ಯಾರೆ ಮಾಡುತಿಲ್ಲ. ಕೇಳಿದಷ್ಟು ದಂಡ ಕಟ್ಟಿ ಮತ್ತೆ ಮತ್ತೆ ಅದೇ ತಪ್ಪನ್ನು ಪುನರಾರ್ತಿಸುತ್ತಿದ್ದಾರೆ. ಇದನ್ನು ತಡೆತುವ ನಿಟ್ಟಿನಲ್ಲಿ ಕೆರಿಬಿಯನ್ ಲೀಗ್ ಈ ಕಠಿಣ ನಿಮಯವನ್ನು ಜಾರಿಗೆ ತಂದಿದ್ದು.
ಐಪಿಎಲ್ನಲ್ಲಿಯೂ ಜಾರಿ ಸಾಧ್ಯತೆ
ಮುಂದಿನ ಆವೃತ್ತಿಯ ಐಪಿಎಲ್ನಲ್ಲಿಯೂ ಈ ನಿಯಮ ಜಾರಿಗೆ ಬಂದರೂ ಅಚ್ಚರಿಯಿಲ್ಲ. ಏಕೆಂದರೆ ವಿದೇಶಿ ಲೀಗ್ನಲ್ಲಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಈ ಬಾರಿಯ 16ನೇ ಆವೃತ್ತಿಯ ಐಪಿಎಲ್ನಲ್ಲಿ ಅಳವಡಿಸಲಾಗಿತ್ತು. ಹೀಗಾಗಿ ಮುಂದಿನ ವರ್ಷ ಬಿಸಿಸಿಐ ಕೂಡ ಈ ನಿಯಮವನ್ನು ಜಾರಿಗೆ ತರಬಹುದು.