Site icon Vistara News

IND vs SA 3rd T2O | ಮೂರನೇ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

IND SA

ವಿಶಾಖಪಟ್ಟಣಂ: 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ತಿರುಗೇಟು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ.

ಮೊದಲ ಎರಡು ಪಂದ್ಯದಲ್ಲಿ ಸೋತಿದ್ದ ರಿಷಭ್‌ ಪಂತ್‌ ನೇತೃತ್ವದ ಟೀಮ್‌ ಇಂಡಿಯಾ ಮಂಗಳವಾರ ಇಲ್ಲಿಯ ವೈ.ಎಸ್‌.ರಾಜಶೇಖರರೆಡ್ಡಿ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 48 ರನ್‌ಗಳಿಂದ ಗೆಲ್ಲುವ ಮೂಲಕ ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಸತತವಾಗಿ ಮೂರನೇ ಪಂದ್ಯದಲ್ಲಿಯೂ ಟಾಸ್‌ ಗೆದ್ದ ದಕ್ಷಿಣ ಆಪ್ರಿಕಾ ಈ ಹಿಂದಿನ ಎರಡು ಪಂದ್ಯಗಳಂತೆ ಮೂರನೇ ಪಂದ್ಯದಲ್ಲಿಯೂ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಂಟಿಂಗ್‌ ಆರಂಭಿಸಿರುವ ಭಾರತ ತಂಡ ಐದು ವಿಕೇಟ್‌ ಕಳೆದುಕೊಂಡು 179 ರನ್‌ಗಳ ಗುರಿ ನಿಗದಿಪಡಿಸಿತ್ತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರೀಕಾ ತಂಡ 19.1 ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ಶರಣಾಯಿತು.

Exit mobile version