Site icon Vistara News

ಮಾಜಿ ಕ್ರಿಕೆಟಿಗನನ್ನು ವರಿಸಲಿದ್ದಾರೆ ಕ್ರಿಕೆಟ್‌ ತಾರೆ ವೇದಾ ಕೃಷ್ಣಮೂರ್ತಿ; ಸೆಪ್ಟೆಂಬರ್‌ 18ರಂದು ನಿಶ್ಚಿತಾರ್ಥ

ವೇದಾ ಕೃಷ್ಣಮೂರ್ತಿ

ಬೆಂಗಳೂರು : ಭಾರತ ಮಹಿಳೆಯರ ತಂಡದ ಸದಸ್ಯೆ, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಕ್ರಿಕೆಟ್‌ ಕೋಚ್‌ ಅರ್ಜುನ್‌ ಹೊಯ್ಸಳ ಅವರನ್ನು ವಿವಾಹವಾಗಲಿದ್ದು, ಈ ಜೋಡಿಯ ಮದುವೆ ನಿಶ್ಚಿತಾರ್ಥ ಸೆಪ್ಟೆಂಬರ್‌ ೧೮ರಂದು ಬೆಂಗಳೂರಿನಲ್ಲಿ ನಡೆಯಲಿದೆ. ವೇದಾ ಮತ್ತು ಅರ್ಜುನ್‌ ಹೊಯ್ಸಳ ಅವರು ತಮ್ಮ ಪ್ರೇಮ ನಿವೇದನೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಚಿತ್ರಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಪುತ್ರಿಯ ಮದುವೆ ವಿಚಾರವನ್ನು ಅವರ ತಂದೆ ಕೃಷ್ಣಮೂರ್ತಿ ಅವರು ಖಚಿತಪಡಿಸಿದ್ದಾರೆ.

ಚಿಕ್ಕಮಗಳೂರಿನ ಕಡೂರು ಮೂಲದ ವೇದಾ ಕೃಷ್ಣಮೂರ್ತಿ ಅವರು ಭಾರತ ತಂಡ ಪರ ೪೮ ಏಕ ದಿನ ಪಂದ್ಯಗಳಲ್ಲಿ ೮೨೯ ರನ್‌ ಹಾಗೂ ೭೬ ಟಿ೨೦ ಪಂದ್ಯಗಳನ್ನು ೮೭೫ ರನ್‌ ಬಾರಿಸಿದ್ದಾರೆ. ಬಲಗೈ ಬ್ಯಾಟರ್‌ ಹಾಗೂ ಉತ್ತಮ ಫೀಲ್ಡರ್‌ ಆಗಿರುವ ಅವರು ಭಾರತ ತಂಡದ ನಂಬಿಕಸ್ತ ಆಟಗಾರ್ತಿ.

ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅರ್ಜುನ್‌ ಅವರು ೨೦೧೬ರಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕರ್ನಾಟಕ ತಂಡದ ಪರ ಟಿ೨೦ ಪಂದ್ಯಗಳನ್ನು ಆಡಿರುವ ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನ ೨೦೧೯ರ ಆವೃತ್ತಿಯಲ್ಲಿ ಶಿವಮೊಗ್ಗ ಲಯನ್ಸ್‌ ತಂಡದ ಸದಸ್ಯರಾಗಿದ್ದರು. ಇದೀಗ ಅವರು ಕ್ರಿಕೆಟ್‌ ಸ್ಟ್ರೆಂಥ್‌ ಆಂಡ್‌ ಕಂಡೀಷನ್ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version