ಭೋಪಾಲ್: ಇಲ್ಲಿನ ಅಂಕುರ್ ಮೈದಾನ ವಿಶೇಷ ಕ್ರಿಕೆಟ್ ಪಂದ್ಯಕ್ಕೆ (Cricket Match) ಸಾಕ್ಷಿಯಾಗಿದೆ. “ಮಹರ್ಷಿ ಕಪ್” ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯದ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ(Cricket Viral Video).
ಈ ಪಂದ್ಯ ವೀಕ್ಷಿಸಲು ಅಲ್ಪ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪಂದ್ಯದ ಪ್ರತಿ ಎಸೆತಕ್ಕೂ ವೀಕ್ಷಕ ವಿವರಣೆಯನ್ನು ಸಂಸ್ಕೃತದಲ್ಲಿ ನೀಡಲಾಗುತ್ತಿತ್ತು. ಈ ವಿಡಿಯೊ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಮತ್ತು ಹೆಚ್ಚು ಜನರು ಈ ಭಾಷೆಯನ್ನು ಕಲಿಯಬೇಕೆಂಬ ಉದ್ದೇಶದಿಂದ ಪಂದ್ಯದ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಮಾಡಲಾಯಿತು ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
ಈ ಹಿಂದೆ ಕೂಡ ಇದೇ ಮಾದರಿಯ ಕ್ರಿಕೆಟ್ ಪಂದ್ಯ ಇಲ್ಲಿ ನಡೆದಿತ್ತು. ಈ ವೇಳೆ ಆಟಗಾರರು, ಅಂಪೈರ್ಗಳು ಎಲ್ಲರೂ ಧೋತಿ ಮತ್ತು ಕುರ್ತಾ ಧರಿಸಿ ಕ್ರಿಕೆಟ್ ಆಡಿ ಸುದ್ದಿಯಾಗಿದ್ದರು. ಜತೆಗೆ ಈ ಪಂದ್ಯದ ಕಾಮೆಂಟರಿ ಕೂಡ ಸಂಸ್ಕೃತದಲ್ಲಿ ಮಾಡಲಾಗಿತ್ತು.
ಇದನ್ನೂ ಓದಿ | Viral Video | ‘ಕಮರ್ ತೇರಿ ಲೆಫ್ಟ್, ರೈಟ್’ ಎನ್ನುತ್ತ ಕುಣಿದ ಬಾಲಕಿಗೆ ಎಲ್ಲರೂ ಫಿದಾ!