Site icon Vistara News

IPL 2024: ಗುಜರಾತ್‌ 54/0, 130ಕ್ಕೆ ಆಲೌಟ್;‌ ಕನ್ನಡಿಗ ರಾಹುಲ್‌ ಕ್ಯಾಪ್ಟನ್ಸಿಗೆ ಉಘೇ ಎಂದ ಜನ!

IPL 2024

Captaincy masterclass from KL Rahul; Twitter reacts as LSG successfully defend another total Against GT

ಲಖನೌ: ಐಪಿಎಲ್​ 17ನೇ (IPL 2024) ಆವೃತ್ತಿಯ 21ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ (LSG) ತಂಡವು ಗುಜರಾತ್‌ ಟೈಟನ್ಸ್‌ ವಿರುದ್ಧ 33 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮಾರ್ಕಸ್​ ಸ್ಟೊಯ್ನಿಸ್​ (43 ಎಸೆತಕ್ಕೆ 58 ರನ್​) ಅರ್ಧ ಶತಕ ಹಾಗೂ ಬೌಲರ್​ಗಳಾದ ಯಶ್​ ಠಾಕೂರ್​ (3.5 ಓವರ್​, 30 ರನ್​, 5 ವಿಕೆಟ್​​) ಹಾಗೂ ಕೃಣಾಲ್ ಪಾಂಡ್ಯ (4 ಓವರ್​ 11 ರನ್​, 3 ವಿಕೆಟ್​) ಮಾರಕ ಬೌಲಿಂಗ್​ ದಾಳಿಗೆ ಶುಭಮನ್‌ ಗಿಲ್‌ ನೇತೃತ್ವದ ತಂಡವು ಸೋಲನುಭವಿಸಿದೆ. ಇದರ ಬೆನ್ನಲ್ಲೇ, ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕತ್ವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಲಕ್ನೊ ಸೂಪರ್‌ ಜೈಂಟ್ಸ್‌ ತಂಡವು ಮೊದಲು ಬ್ಯಾಟಿಂಗ್‌ ನಡೆಸಿ 20 ಓವರ್‌ಗಳಲ್ಲಿ 163 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಗುಜರಾತ್‌ ಟೈಟನ್ಸ್‌ ತಂಡವು ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 54 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಎಲ್‌ಎಸ್‌ಜಿಯ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಗುಜರಾತ್‌, 130 ರನ್‌ಗಳಿಗೆ ಆಲೌಟ್‌ ಆಯಿತು. ಹೀಗೆ, ಉತ್ತಮ ಸ್ಥಿತಿಯಲ್ಲಿದ್ದ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲು ಕೆ.ಎಲ್‌.ರಾಹುಲ್‌ ನಾಯಕತ್ವವೇ ಕಾರಣ ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

“ಕೆ.ಎಲ್.ರಾಹುಲ್‌ ಅವರು ಟಿ20 ವಿಶ್ವಕಪ್‌ನಲ್ಲಿ ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ತಯಾರಾಗುತ್ತಿದ್ದಾರೆ ಎಂದು ಭಾವಿಸಲಾಗಿದೆ. ಆದರೆ, ರಾಹುಲ್ ಅವರು ನಾಯಕತ್ವ ಸ್ಥಾನಕ್ಕೆ ಸ್ಪರ್ಧೆಯೊಡ್ಡುತ್ತಿದ್ದಾರೆ ಎಂಬುದನ್ನು ಚಾಣಾಕ್ಷತನದಿಂದ ತೋರಿಸುತ್ತಿದ್ದಾರೆ. ಕೆ.ಎಲ್.ರಾಹುಲ್‌ ಅವರ ನಾಯಕತ್ವದ ಕೌಶಲಗಳನ್ನು ಮೆಚ್ಚಲೇಬೇಕು” ಎಂಬುದಾಗಿ ಸುಜೀತ್‌ ಸುಮನ್‌ ಎಂಬುವರು ಪೋಸ್ಟ್‌ ಮಾಡಿದ್ದಾರೆ. ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅವರು ಕೂಡ ಕೆ.ಎಲ್.ರಾಹುಲ್‌ ಅವರ ನಾಯಕತ್ವವನ್ನು ಕೊಂಡಾಡಿದ್ದಾರೆ. “ಎಲ್‌ಎಸ್‌ಜಿ ಪರಿಪೂರ್ಣ ತಂಡವಾಗಿದೆ. ರಾಹುಲ್‌ ಅವರು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ.

‘ಡಿಫೆಂಡಿಂಗ್‌’ ಚಾಂಪಿಯನ್‌ ರಾಹುಲ್‌

ಐಪಿಎಲ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿ, ಸಾಧಾರಣ ಮೊತ್ತ ದಾಖಲಿಸಿದರೂ, ಆ ಮೊತ್ತವನ್ನು ಡಿಫೆಂಡ್‌ ಮಾಡುವಲ್ಲಿ ಎಲ್‌ಎಸ್‌ಜಿ ಪಾರಮ್ಯ ಸಾಧಿಸುವಲ್ಲಿ ಕೆ.ಎಲ್.ರಾಹುಲ್‌ ನಾಯಕತ್ವದ ಪಾತ್ರವು ಹೆಚ್ಚಿದೆ. ಐಪಿಎಲ್‌ನಲ್ಲಿ ಇದುವರೆಗೆ ಕೆ.ಎಲ್‌.ರಾಹುಲ್‌ ನೇತೃತ್ವದಲ್ಲಿ ಎಲ್‌ಎಸ್‌ಜಿ ತಂಡವು 18 ಬಾರಿ ಡಿಫೆಂಡ್‌ (ಮೊದಲು ಬ್ಯಾಟಿಂಗ್‌ ನಡೆಸುವುದು) ಮಾಡಿದೆ. ಇವುಗಳಲ್ಲಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 2 ಪಂದ್ಯ ಮಾತ್ರ ಸೋಲನುಭವಿಸಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಹಾಗಾಗಿ, ಕೆ.ಎಲ್.ರಾಹುಲ್‌ ಅವರು ‘ಡಿಫೆಂಡಿಂಗ್’‌ ಚಾಂಪಿಯನ್‌ ಎನಿಸಿದ್ದಾರೆ.

ಇದನ್ನೂ ಓದಿ: Jasprit Bumrah : ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಐಪಿಎಲ್​ನಲ್ಲಿ ವಿಶೇಷ ಮೈಲುಗಲ್ಲು ದಾಖಲಿಸಿದ ಬುಮ್ರಾ

Exit mobile version