ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ಶತಾಯುಷಿ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ನೋಡಲು ಚೆನ್ನೈಯಿಂದ ದೆಹಲಿಯವರೆಗೂ ನಡೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದರು. ಇದೀಗ ಧೋನಿಯ ಕ್ರೇಜಿ ಅಭಿಮಾನಿಯೊಬ್ಬ(Crazy MS Dhoni fan) ತನ್ನ ನೆಚ್ಚಿನ ಆಟಗಾರನ ಆಟ ನೋಡಲೆಂದೇ ಬರೋಬ್ಬರಿ 2100 ಕಿ.ಮೀ ದೂರ ಸೈಕಲ್ ತುಳಿದು ಬಂದು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.
ಹೌದು, ಬಿಹಾರ ಮೂಲದ ಧೋನಿ ಅಭಿಮಾನಿಯಾಗಿರುವ ಈತ ಡೆಲ್ಲಿಯಲ್ಲಿ ನೆಲೆಸಿದ್ದಾನೆ. ಈ ಬಾರಿ ಧೋನಿ ಐಪಿಎಲ್ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಆಟಗಾರನ ಕೊನೆಯ ಆಟವನ್ನು ಕಣ್ತುಂಬಿಕೊಳ್ಳಲು ಪ್ರತಿ ಪಂದ್ಯದಲ್ಲಿಯೂ ಕಾದು ಕುಳಿತಿರುತ್ತಾರೆ.
ಬಿಹಾರ ಮೂಲದ ಧೋನಿ ಅಭಿಮಾನಿ ಕೂಡ ಹೇಗಾದರೂ ಮಾಡಿ ಧೋನಿಯ ಆಟವನ್ನು ನೋಡಲೇಬೇಕೆಂದು ಆಸೆ ಪಟ್ಟಿದ್ದರು. ಆದರೆ, ಆರ್ಥಿಕ ಸಮಸ್ಯೆಯೂ ದೊಡ್ಡ ಸವಾಲಾಗಿ ಪರಿಣಮಿಸಿತು. ಇದೇ ವೇಳೆ ಸೈಕಲ್ ಆಯ್ಕೆ ಮಾಡಿಕೊಂಡು ದಿಲ್ಲಿಯಿಂದ 23 ದಿನಗಳಲ್ಲಿ ಚೆನ್ನೈಗೆ ತಲುಪಿದರು. ಈ ಪಯಣದ ವೇಳೆ ಅವರು ಬರೋಬ್ಬರಿ 2100 ಕಿ.ಮೀ ಸೈಕಲ್ ತುಳಿದಿದ್ದಾರೆ. ಕೊನೆಗೂ ಅವರು ಚೆನ್ನೈ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ರೋಚಕ ಜರ್ನಿಯ ಕಥೆಯನ್ನು ಈ ಅಭಿಮಾನಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ಇತ್ತೀಚೆಗೆ ಅಭಿಮಾನಿಯೊಬ್ಬ ತನ್ನ ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಮಾಡಿಕೊಂಡಿದ್ದ.
ಇದನ್ನೂ ಓದಿ MS Dhoni : ಧೋನಿಗೆ ದೇವಸ್ಥಾನ; ಸಿಎಸ್ಕೆ ತಂಡದ ಮಾಜಿ ಆಟಗಾರ ಅಭಿಮಾನದ ನುಡಿ
ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್ ಕೂಲ್, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆಗಾಗಿ ಧೋನಿ ಆಡುತ್ತಿದ್ದಾರೆ. ಅವರ ಈ ಪ್ರದರ್ಶನವನ್ನು ಪರಿಗಣಿಸಿ, ಚೆನ್ನೈಯಲ್ಲಿ ಧೋನಿಯ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.
ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೇ 18ರಂದು ನಡೆಯುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕು. ಒಂದೊಮ್ಮೆ ಚೆನ್ನೈ ಸೋತರೆ ಇದುವೇ ಧೋನಿಗೆ ವಿದಾಯ ಪಂದ್ಯವಾಗಲಿದೆ.