ರಾಜ್ಕೋಟ್: ಭಾರತ(IND vs ENG) ಪರ ಪದಾರ್ಪಣೆ ಪಂದ್ಯವಾಡಿದ ಯುವ ವಿಕೆಟ್ ಕೀಪರ್ ಕಮ್ ಬ್ಯಾಟರ್ ಧ್ರುವ್ ಜುರೆಲ್(Dhruv Jurel) ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಸಿಕ್ಸರ್ ಮೂಲಕ ಸುದ್ದಿಯಾಗಿದ್ದಾರೆ. ಗಂಟೆಗೆ 146 ಕಿ.ಮೀ. ವೇಗದಲ್ಲಿ ಬಂದ ಚೆಂಡನ್ನು ಸೊಗಸಾಗಿ ಸಿಕ್ಸರ್ಗೆ ಬಡಿದಟ್ಟಿದ ವಿಡಿಯೊ ವೈರಲ್(viral video) ಆಗಿದೆ.
Dhruv Jurel on debut against a 146kmph delivery. 🔥pic.twitter.com/cw1elR4h0V
— Mufaddal Vohra (@mufaddal_vohra) February 16, 2024
ಮಾರ್ಕ್ ವುಡ್(Mark Wood) ಅವರು ಎಸೆದ ಈ ಅತಿ ವೇಗದ ಎಸೆತವನ್ನು ಜುರೆಲ್ ಅಪ್ಪರ್ ಕಟ್ ಮೂಲಕ ಲೀಲಾಜಾಲವಾಗಿ ಸಿಕ್ಸರ್ ಬಾರಿಸಿದರು. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿಯಂತೆ ಬ್ಯಾಟ್ ಬೀಸಿದ ಜುರೇಲ್ ಅಶ್ವಿನ್ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್ವೊಂದನ್ನು ಕಟ್ಟಿದರು. ಈ ಜೋಡಿ 8 ವಿಕೆಟ್ಗೆ ಅತ್ಯಮೂಲ್ಯ 77 ರನ್ ಒಟ್ಟುಗೂಡಿಸಿದರು. ಇವರ ಈ ಬ್ಯಾಟಿಂಗ್ ಸಾಹಸದಿಂದ ತಂಡ 450ರ ಸನಿಹದ ಮೊತ್ತ ದಾಖಲಿಸಿತು. . 104 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಬಾರಿಸಿದರು. ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಕಾರ್ಗಿಲ್ ಯೋಧನ ಪುತ್ರ
ಉತ್ತರ ಪ್ರದೇಶದಲ್ಲಿ ಜನಿಸಿದ ಧ್ರುವ್ ಜುರೆಲ್ ಯಾವುದೇ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಕಠಿಣ ಪರಿಶ್ರಮದ ಮೂಲಕವೇ ಬೆಳೆದು ಬಂದು ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್ ಬದುಕಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ತಂದೆ ನೀಮ್ ಸಿಂಗ್ ಜುರೆಲ್ ಕಾರ್ಗಿಲ್ ಯೋಧ.
ಇದನ್ನೂ ಓದಿ IND vs ENG: 500 ವಿಕೆಟ್ಗಳ ಸರದಾರನಾದ ಆರ್. ಅಶ್ವಿನ್; ಈ ಸಾಧನೆ ಮಾಡಿದ 2ನೇ ಭಾರತೀಯ
ಬಾತ್ ರೂಮ್ ಲಾಕ್ ಮಾಡಿ ಕುಳಿತ್ತಿದ್ದ ಜುರೆಲ್
ಧ್ರುವ್ ಜುರೆಲ್ ಅವರ ಕ್ರಿಕೆಟ್ ಕಥೆ ತುಂಬಾ ಸ್ಫೂರ್ತಿದಾಯಕವಾಗಿದೆ. ಬಡತನದ ಹಿನ್ನೆಲೆಯಿಂದ ಬಂದ ಧ್ರುವ್ ಜುರೆಲ್ ತಾವು ಪಟ್ಟ್ ಕಷ್ಟದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ, “ನಾನು ಆರ್ಮಿ ಸ್ಕೂಲ್‌ನಲ್ಲಿ ಓದುತ್ತಿದ್ದೆ. ರಜಾದಿನಗಳಲ್ಲಿ ನಾನು ಆಗ್ರಾದ ಏಕಲವ್ಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಶಿಬಿರಕ್ಕೆ ಸೇರುಲು ಮುಂದಾದೆ. ತಂದೆ ತಿಳಿಯದಂತೆ ಫಾರ್ಮ್ ಕೂಡ ಭರ್ತಿ ಮಾಡಿದೆ. ಈ ವಿಚಾರ ತಂದೆಗೆ ತಿಳಿದಾಗ ಅವರು ನನ್ನನ್ನು ಗದರಿಸಿದ್ದರು. ಆದರೆ, 800 ರೂ. ಸಾಲ ಮಾಡಿ ನನಗೆ ಬ್ಯಾಟ್ ಖರೀದಿಸಿ ಕೊಟ್ಟರು. ಇದೇ ವೇಳೆ ನಾನು ಕ್ರಿಕೆಟ್ ಕಿಟ್ಗಾಗಿ ಬೇಡಿಕೆ ಇಟ್ಟೆ. ಇದರ ಬೆಲೆ ಸುಮಾರು 7 ರಿಂದ 8 ಸಾವಿರ ಆಗಿತ್ತು. ಇಷ್ಟು ಹಣ ತನ್ನ ತಂದೆಯ ಬಳಿ ಇಲ್ಲದಾಗ ಅವರು ಅಸಾಧ್ಯ ಎಂದರು. ನಾನು ಬಾತ್ ರೂಮ್ನಲ್ಲಿ ಲಾಕ್ ಮಾಡಿ ಹೊರ ಬರುವುದಿಲ್ಲ ಎಂದು ಹಠಮಾಡಿ ಕುಳಿತಾಗ ತಾಯಿ ತನ್ನ ಚಿನ್ನದ ಸರವನ್ನು ಮಾರಿ ಕ್ರಿಕೆಟ್ ಕಿಟ್ ಕೊಡಿಸಿದರು” ಎಂದು ಜುರೆಲ್ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದರು.
ತಂದೆಯೇ ಹೀರೊ
ಬುಧವಾರ ಬಿಸಿಸಿಐ ನಡೆಸಿದ ವಿಶೇಚ ಸಂದರ್ಶನದಲ್ಲಿಯೂ ಧ್ರುವ್ ಜುರೆಲ್ ಅವರು ನನಗೆ ತಂದೆಯೇ ಹೀರೊ ಎಂದು ಹೇಳಿದ್ದರು. ನನ್ನ ಕ್ರಿಕೆಟ್ ಪದಾರ್ಪಣೆಯನ್ನು ಅವರಿಗೆ ಅರ್ಪಿಸುವುದಾಗಿ ಹೇಳಿದ್ದರು. ಸಿಕ್ಕ ಅವಕಾಶವನ್ನು ಎಡರೂ ಕೈಗಳಿಂದ ಬಾಚಿ ಉತ್ತಮ ಪ್ರದರ್ಶನ ತೋರಿದರೆ ಭಾರತ ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಆಗುವ ಎಲ್ಲ ಸುವರ್ಣಾವಕಾಶ ಜುರೆಲ್ ಮುಂದಿದೆ.