Site icon Vistara News

Dinesh Karthik : ಆರ್​​ಸಿಬಿ ಬ್ಯಾಟಿಂಗ್ ಕೋಚ್​, ಮಾರ್ಗದರ್ಶಕರಾಗಿ ದಿನೇಶ್​ ಕಾರ್ತಿಕ್ ನೇಮಕ

Dinesh Karthik

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ (IPL 2025) ಬ್ಯಾಟಿಂಗ್ ಕೋಚ್ ಮತ್ತು ತಂಡದ ಮಾರ್ಗದರ್ಶಕರಾಗಿ ನೇಮಕ ಮಾಡಿದೆ. ಐಪಿಎಲ್ ಫ್ರಾಂಚೈಸಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಈ ಘೋಷಣೆಯನ್ನು ಪ್ರಕಟಿಸಿದೆ.

ನಮ್ಮ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ಹೊಸ ಅವತಾರದಲ್ಲಿ ಆರ್​​​ಸಿಬಿಗೆ ಸ್ವಾಗತಿಸುತ್ತೇವೆ. ಆರ್​ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಡಿಕೆ ಕಾರ್ಯನಿರ್ವಹಿಸಲಿದ್ದಾರೆ. ನೀವು ಕಾರ್ತಿಕ್ ಅವರನ್ನು ಕ್ರಿಕೆಟ್​ನಿಂದ ಹೊರತೆಗೆಯಬಹುದು ಆದರೆ ಕ್ರಿಕೆಟ್ ಅನ್ನು ಅವರಿಂದ ಹೊರತೆಗೆಯಲು ಸಾಧ್ಯವಿಲ್ಲ! 12 ಮ್ಯಾನ್​ ಆರ್ಮಿ. ಅವರಿಗಾಗಿ ಪ್ರೀತಿಯನ್ನು ಸ್ಪುರಿಸಿ ಎಂದು ಬರೆದುಕೊಂಡಿದೆ.

ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಭವ

ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿರುವ ಕಾರ್ತಿಕ್, ಮೈದಾನದ ಎಲ್ಲೆಡೆ ಚೆಂಡು ಕಳುಹಿಸಿ ಸ್ಕೋರ್ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ನಂತರ, ಕೀಪರ್- ಬ್ಯಾಟರ್​ ಐಪಿಎಲ್ 2022 ಕ್ಕೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಐಪಿಎಲ್ ವೃತ್ತಿಜೀವನದಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿರುವ ಕಾರ್ತಿಕ್, ಆರ್ಸಿಬಿ ಪರ 53 ಇನಿಂಗ್ಸ್​ಗಳಲ್ಲಿ 162.96 ಸ್ಟ್ರೈಕ್​ ರೇಟ್​​ನಲ್ಲಿ ಮೂರು ಅರ್ಧಶತಕಗಳು ಸೇರಿದಂತೆ 937 ರನ್ ಗಳಿಸಿದ್ದಾರೆ.

ಅವರು ಇತ್ತೀಚೆಗೆ ಐಪಿಎಲ್ 2024 ರಲ್ಲಿ ಅದ್ಭುತ ಯಶಸ್ಸನ್ನು ಅನುಭವಿಸಿದ್ದಾರೆ. 36.22 ಸರಾಸರಿ ಮತ್ತು 187.36 ಸ್ಟ್ರೈಕ್ ರೇಟ್​​ನಲ್ಲಿ 326 ರನ್ ಗಳಿಸಿದ್ದಾರೆ. ಆದಾಗ್ಯೂ, ನಾವು ಮೆಗಾ ಹರಾಜು ಬರುತ್ತಿರುವುದನ್ನು ಪರಿಗಣಿಸಿ, ಕಾರ್ತಿಕ್ ಐಪಿಎಲ್​​ನಿಂದ ಹೊರಕ್ಕೆ ನಡೆದರು.

ಇದನ್ನೂ ಓದಿ: Jasprit Bumrah : ಜಸ್​ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್​​ನ ಅತ್ಯುತ್ತಮ ಬೌಲರ್​ ಎಂದು ಹೊಗಳಿದ ಮೈಕಲ್ ವಾನ್

ಕಾರ್ತಿಕ್ ಮೂರು ಸ್ವರೂಪಗಳಲ್ಲಿ 180 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಅವರು ಏಕೈಕ ಟೆಸ್ಟ್ ಶತಕ ಮತ್ತು 17 ಅರ್ಧಶತಕಗಳೊಂದಿಗೆ 3463 ರನ್ ಗಳಿಸಿದ್ದಾರೆ. ಕಾರ್ತಿಕ್ 172 ಔಟ್​ಗಳನ್ನು ಸಹ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಸ್ಪಂಪ್​​ಗಳ ಹಿಂದೆ ಹಾಗೂ ಕೆಲವು ಔಟ್​ಫೀಲ್ಡ್​ ಕ್ಯಾಚ್​ಗಳು. 2022ರ ಟಿ20 ವಿಶ್ವಕಪ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ಆಡಿದ್ದರು.

20007 ವಿಶ್ವ ಕಪ್ ವಿಜೇತ

2007 ರ ಟಿ 20 ವಿಶ್ವಕಪ್ ವಿಜೇತ ತಾರೆ ಕಾರ್ತಿಕ್​ ಐಪಿಎಲ್​ನಲ್ಲಿ ಭರ್ಜರಿ ಅನುಭವ ಹೊಂದಿದ್ದಾರೆ. 257 ಪಂದ್ಯಗಳನ್ನು ಆಡಿದ ಅವರು 26.32 ಸರಾಸರಿಯಲ್ಲಿ 4,842 ರನ್ ಗಳಿಸಿದ್ದಾರೆ. ಕಾರ್ತಿಕ್ ತಮ್ಮ ಐಪಿಎಲ್ ಪ್ರಯಾಣವನ್ನು ಡೆಲ್ಲಿ ಡೇರ್ ಡೆವಿಲ್ಸ್ (ಈಗ ಕ್ಯಾಪಿಟಲ್ಸ್) ನೊಂದಿಗೆ ಪ್ರಾರಂಭಿಸಿದ್ದರು. ಆರ್ ಸಿಬಿ ಹೊರತುಪಡಿಸಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಪ್ರತಿನಿಧಿಸಿದರು.

ಬ್ಯಾಟಿಂಗ್ ಕೋಚ್ ಮತ್ತು ಬ್ಯಾಟಿಂಗ್ ಮೆಂಟರ್ ಆಗಿ ನೇಮಕಗೊಂಡ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, ವೃತ್ತಿಪರ ಮಟ್ಟದಲ್ಲಿ ಕೋಚಿಂಗ್ ನನಗೆ ನಂಬಲಾಗದಷ್ಟು ರೋಮಾಂಚನಕಾರಿಯಾಗಿದೆ. ಇದು ನನ್ನ ಜೀವನದ ಹೊಸ ಅಧ್ಯಾಯ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಒಬ್ಬ ಆಟಗಾರನಾಗಿ ನನ್ನ ಅನುಭವಗಳನ್ನು ತಂಡದ ಅಭಿವೃದ್ಧಿಗೆ ಕೊಡುಯಾಗಿ ನೀಡುತ್ತೇನೆ. ಹೆಚ್ಚುವರಿ ಮೌಲ್ಯವನ್ನು ತರುತ್ತೇನೆ ಎಮದು ಹೇಳಿದ್ದಾರೆ.

ಕ್ರಿಕೆಟ್ ಯಶಸ್ಸು ಕೇವಲ ತಾಂತ್ರಿಕ ಪ್ರಾವೀಣ್ಯತೆಯ ಮೇಲೆ ಮಾತ್ರವಲ್ಲ, ಬುದ್ಧಿವಂತಿಕೆ ಮತ್ತು ಸಂಯಮದ ಮೇಲೂ ಅವಲಂಬಿತವಾಗಿದೆ ಎಂದು ನಾನು ನಂಬುತ್ತೇನೆ. ನಮ್ಮ ಬ್ಯಾಟಿಂಗ್ ಗುಂಪಿಗೆ ತರಬೇತಿ ನೀಡಲು ಮತ್ತು ಮಾರ್ಗದರ್ಶನ ನೀಡಲು ನಾನು ಉತ್ಸುಕನಾಗಿದ್ದೇನೆ. ಆಟಗಾರರ ವಿಧಾನವನ್ನು ಪರಿಷ್ಕರಿಸಲು ಮಾತ್ರವಲ್ಲದೆ ಒತ್ತಡದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯ ಅರಿವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತೇನೆ. ನಾನು ಆರ್ಸಿಬಿಯೊಂದಿಗೆ ನನ್ನ ಒಡನಾಟವನ್ನು ಮುಂದುವರಿಸುವುದು ಖುಷಿಯ ವಿಚಾರ ಎಂದು ಅವರು ಹೇಳಿದರು.

ಆರ್​ಸಿಬಿ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಹೊಂದಿದೆ. ಆದರೆ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಫ್ರಾಂಚೈಸಿ ನಾಯಕ ಮತ್ತು ತರಬೇತುದಾರರ ಹಲವಾರು ಸಂಯೋಜನೆಗಳನ್ನು ಪ್ರಯತ್ನಿಸಿದೆ ಮತ್ತು ಪರೀಕ್ಷಿಸಿದೆ. ಆದರೆ ಏನೂ ಕೆಲಸ ಮಾಡಿಲ್ಲ. ಆದರೆ 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಗೂ 2016ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಫೈನಲ್​​ನಲ್ಲಿ ಆರ್​ಸಿಬಿ ಸೋತಿದೆ

Exit mobile version