Site icon Vistara News

Election Results 2024: ಪಶ್ಚಿಮ ಬಂಗಾಳದಲ್ಲಿ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್​ಗೂ ಜಯಭೇರಿ

Election Results 2024

Election Results 2024: BJP’s Dilip Ghosh looks to lose to Kirti Azad; TMC candidate gets over 7 lakh votes in Bardhaman–Durgapur

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ(West Bengal) ಯೂಸುಫ್ ಪಠಾಣ್ ಮಾತ್ರವಲ್ಲದೆ ಮತ್ತೋರ್ವ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್(Kirti Azad) ಕೂಡ ಟಿಎಂಸಿ(TMC) ಪರ ಗೆಲುವು ಕಂಡಿದ್ದಾರೆ. ಬರ್ಧಮಾನ್-ದುರ್ಗಾಪುರ ಕ್ಷೇತ್ರದಲ್ಲಿ ಕಣಕ್ಕಿಳಿದ್ದ ಅವರು ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್(Dilip Ghosh) ಅವರನ್ನು ಸೋಲಿಸುವಲ್ಲಿ(Election Results 2024) ಯಶಸ್ವಿಯಾಗಿದ್ದಾರೆ.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಟಿಎಂಸಿ ಅಭ್ಯರ್ಥಿ ಕೀರ್ತಿ ಆಜಾದ್ 7,20,667 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ 5,82,686 ಮತಗಳನ್ನು ಪಡೆದರು. ಈ ಮೂಲಕ 1,37,981 ಮತಗಳ ಅಂತರದಿಂದ ಆಜಾದ್​ ಗೆಲುವು ಸಾಧಿಸಿದರು. ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷವನ್ನು ಪ್ರತಿನಿಧಿಸಿದ್ದರು. ನವೆಂಬರ್ 2021ರಲ್ಲಿ ಟಿಎಂಸಿ ಪಕ್ಷವನ್ನು ಸೇರಿದರು. ಇದೀಗ ಲೋಕ ಸಮರ ಗೆದ್ದು ಬೀಗಿದ್ದಾರೆ.

85 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ ಪಠಾಣ್


ಯೂಸುಫ್ ಪಠಾಣ್(Yusuf Pathan) ಅವರು ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಟಿಎಂಸಿ(TMC) ಪಕ್ಷದಿಂದ ಸ್ಪರ್ಧಿಸಿದ್ದ ಯೂಸುಫ್, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ 5 ಬಾರಿಯ ಸಂಸದರಾಗಿದ್ದ ಅಧೀರ್ ರಂಜನ್ ಚೌಧರಿ(Adhir Chowdhury)ಯನ್ನು ಮಣಿಸಿದ್ದಾರೆ. ಯೂಸುಫ್ ಪಠಾಣ್ 5,18,066 ಮತಗಳನ್ನು ಪಡೆದರೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ರಂಜನ್ ಚೌಧರಿ 4,32,340 ಮತಗಳನ್ನು ಮಾತ್ರ ಪಡೆದರು. ಈ ಮೂಲಕ ಯೂಸುಫ್ ಪಠಾಣ್ 85,726 ಮತಗಳ ಅಂತರದಿಂದ ಗೆದ್ದು ಬೀಗಿದರು.

ಇದನ್ನೂ ಓದಿ AP Election Results 2024: ಆಂಧ್ರದಲ್ಲಿ ಮತ್ತೊಮ್ಮೆ ಟಿಡಿಪಿ ಮ್ಯಾಜಿಕ್‌; ಆಡಳಿತ ವಿರೋಧಿ ಅಲೆಗೆ ಕೊಚ್ಚಿಹೋದ ಜಗನ್ ಮೋಹನ್ ರೆಡ್ಡಿ

ಗೆಲುವಿನ ಬಳಿಕ ಮಾತನಾಡಿದ ಯೂಸುಫ್, ನನಗೆ ಸಂತೋಷವಾಗಿದೆ, ಇದು ನನ್ನ ಬೆಂಬಲಿಗರ ಮತ್ತು ಕಾರ್ಯಕರ್ತರ ಗೆಲುವು. ಇದಕ್ಕಾಗಿ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಜತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ನಾನು ಮೊದಲು ಕ್ರೀಡಾ ಅಕಾಡೆಮಿ ಮಾಡುತ್ತೇನೆ, ಇದರಿಂದ ಯುವ ಪ್ರತಿಭೆಗಳು ವೃತ್ತಿಜೀವನ ಕಟ್ಟಿಕೊಳ್ಳಬಹುದು. ಕೈಗಾರಿಕೆಗಳಿಗೂ ಕೆಲಸ ಕೊಡಿಸುತ್ತೇನೆ. ನಾನು ಇಲ್ಲಿಯೇ ವಾಸಿಸುತ್ತೇನೆ ಮತ್ತು ನನ್ನ ಕ್ಷೇತ್ರದ ಜನರ ಸೇವೆಗಾಗಿ ಸದಾ ಸಿದ್ಧನಿರುತ್ತೇನೆ” ಎಂದು ಪಠಾಣ್​ ಹೇಳಿದರು.

400 ಸೀಟ್‌ ಗಳಿಸುವ ಎನ್‌ಡಿಎ ಕನಸು ನುಚ್ಚು ನೂರಾದದ್ದು ಹೇಗೆ?


ಉತ್ತರ ಪ್ರದೇಶದ ಜಾತಿ ಸಮೀಕರಣ

ಬಿಜೆಪಿ ಈ ಬಾರಿ ಉತ್ತರ ಪ್ರದೇಶದಲ್ಲಿ ಭಾರಿ ಹೊಡೆತ ತಿಂದಿದೆ. ಕಳೆದ ಸಲಕ್ಕಿಂತ 30ಕ್ಕೂ ಅಧಿಕ ಸ್ಥಾನಗಳನ್ನು ಕಳೆದುಕೊಂಡಿದೆ. ಇದಕ್ಕೆ ಈ ರಾಜ್ಯದ ಜಾತಿ ರಾಜಕೀಯವನ್ನು ಬಿಜೆಪಿ ಕಡೆಗಣಿಸಿದ್ದೇ ಕಾರಣ ಎನ್ನಲಾಗುತ್ತಿದೆ. ರಾಮ ಮಂದಿರದ ಅಲೆ ಏರಿ ಬಂದ ಬಿಜೆಪಿ, ಹಿಂದುತ್ವದ ಮೂಲಕ ಗೆಲ್ಲಬಹುದು ಎಂದುಕೊಂಡಿತು. ಆದರೆ ಇಲ್ಲಿ ಹಿಂದುತ್ವ ರಾಜಕಾರಣಕ್ಕಿಂತಲೂ ಜಾತಿ ರಾಜಕಾರಣದ ಸಮೀಕರಣವೇ ಹೆಚ್ಚು ಕೆಲಸ ಮಾಡಿದೆ. ಈ ಸಲ ದಲಿತ ಮತಗಳು ಸಾಮೂಹಿಕವಾಗಿ ಎಸ್‌ಪಿ ಸೇರಿದಂತೆ ಇಂಡಿಯಾ ಬ್ಲಾಕ್‌ನತ್ತ ತಿರುಗಿದೆ ಎನ್ನಲಾಗುತ್ತಿದೆ. ಹಾಗೆಯೇ ಮುಸ್ಲಿಂ ಮತಗಳೂ ಸಾಂಪ್ರದಾಯಿಕವಾಗಿ ಎಸ್‌ಪಿ ಹಾಗೂ ಬಿಎಸ್‌ಪಿಯ ಪಾಲಾದವು. ಇದು ಬಿಜೆಪಿಗೆ ನಷ್ಟ ಉಂಟುಮಾಡಿದೆ.

Exit mobile version