ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತ 175 ರನ್ ಗಳ ಮುನ್ನಡೆ ಸಾಧಿಸಿದೆ. ಹೀಗಾಗಿ ಪಂದ್ಯ ಭಾರತದ ಪರ ತಿರುಗುತ್ತಿದೆ. ಏತನ್ಮಧ್ಯೆ ಬೆನ್ಸ್ಟೋಕ್ಸ್ ಪಡೆಗೆ ಆಘಾತ ಎದುರಾಗಿದೆ. ಪ್ರಮುಖ ಸ್ಪಿನ್ನರ್ ಜ್ಯಾಕ್ ಲೀಚ್ ಅವರ ಎಡ ಮೊಣಕಾಲಿನ ಗಾಯದಿಂದಾಗಿ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್ ಗೆ ಕಠಿಣ ಹೊಡೆತ ಬಿದ್ದಿದೆ ಬೆನ್ ಸ್ಟೋಕ್ಸ್ ಅವರ ಬೌಲಿಂಗ್ ವಿಭಾಗದ ಪ್ರಮುಖ ಸ್ಪಿನ್ನರ್ ಲೀಚ್ ಆರಂಭಿಕ ದಿನದಂದು ಬೌಂಡರಿ ಉಳಿಸುವ ಪ್ರಯತ್ನದಲ್ಲಿ ಗಾಯಗೊಂಡಿದ್ದಾರೆ. ಈ ಆ ತಂಡಕ್ಕೆ ಆಘಾತಕಾರಿ ವಿಚಾರವಾಗಿದೆ.
ಇದಲ್ಲದೆ ಶುಕ್ರವಾರದ ಬೆಳಗ್ಗಿನ ಸೆಷನ್ನಲ್ಲಿ ಅವರ ಎಡ ಮೊಣಕಾಲಿನ ಸ್ಥಿತಿ ಹದಗೆಟ್ಟಿತು, ಇದರಿಂದಾಗಿ ಅವರನ್ನು ದಿನದ 87 ಓವರ್ಗಳಲ್ಲಿ ಕೇವಲ 16 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಸ್ಪಿನ್ ಬೌಲಿಂಗ್ ಕೋಚ್ ಜೀತನ್ ಪಟೇಲ್ ಪ್ರಕಾರ ಲೀಚ್ ಪಂದ್ಯದ ವೇಳೆ ಎಡ ಮೊಣಕಾಲಿಗೆ ಎರಡು ಬಾರಿ ಪೆಟ್ಟಾಗಿತ್ತು. ಇದರ ಪರಿಣಾಮವಾಗಿ, ಇದು ಸ್ಪಿನ್ನರ್ ಔಟ್ಫೀಲ್ಡ್ನಲ್ಲಿ ನಿಧಾನವಾಗಿ ಫೀಲ್ಡಿಂಗ್ ಮಾಡಿದರು. ಇಂಗ್ಲೆಂಡ್ ತಂಡ ಪರವಾಗಿ ತನ್ನ ಬೌಲಿಂಗ್ ಸ್ಪೆಲ್ ಕೋಟಾವನ್ನು ಕಡಿಮೆ ಮಾಡಬೇಕಾಯಿತು.
ಉತ್ತಮ ಬೌಲಿಂಗ್
ಕಳೆದ ರಾತ್ರಿ ಲೀಚ್ ಮೊಣಕಾಲಿಗೆ ಗಾಯವಾಗಿದೆ. ಅವರು ಸಮಸ್ಯೆ ಎದುರಿಸಿದ್ದಾರೆ. ಸಮಸ್ಯೆ ಮುಂದುವರಿದಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಔಟ್ಫೀಲ್ಡ್ನಲ್ಲಿ ಅವರು ಚೆಂಡುಗಳನ್ನು ಪಡೆಯಲು ಪ್ರಯತ್ನಿಸುವಾಗ ಸ್ವಲ್ಪ ನಿಧಾನವಾಗಿ ಕಾಣುತ್ತಿದ್ದವು. ಆದರೂ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದು ನಾನು ಭಾವಿಸಿದೆ ” ಎಂದು ಇಂಗ್ಲೆಂಡ್ನ ಸ್ಪಿನ್-ಬೌಲಿಂಗ್ ತರಬೇತುದಾರ ಜೀತನ್ ಪಟೇಲ್ ಹೇಳಿದ್ದಾರೆ.
ರೋಹಿತ್ ಕಾಲಿಗೆ ಬಿದ್ದ ವಿರಾಟ್ ಕೊಹ್ಲಿ ಅಭಿಮಾನಿ; ವಿಡಿಯೊ ವೈರಲ್
ಹೈದರಾಬಾದ್: ಭಾರತ ಹಾಗೂ ಇಂಗ್ಲೆಂಡ್(India vs England 1st Test) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮ(Rohit Sharma) ಅವರ ಕಾಲಿಗೆ ಬಿದ್ದಿದ್ದಾನೆ. ಅಚ್ಚರಿ ಎಂದರೆ ಆತ ವಿರಾಟ್ ಕೊಹ್ಲಿಯ(Virat Kohli) ಜೆರ್ಸಿ ಧರಿಸಿ ರೋಹಿತ್ ಕಾಲಿಗೆ ಬಿದ್ದದ್ದು. ಈ ವಿಡಿಯೊ ವೈರಲ್(Viral Video) ಆಗಿದೆ.
ಇದನ್ನೂ ಓದಿ : Ishan Kishan : ಇಶಾನ್ ಕಿಶನ್ ಅಶಿಸ್ತಿಗೆ ಧೋನಿ ಸಲಹೆ ಕಾರಣವೇ?
ಭಾರತ ತಂಡದ ಬ್ಯಾಟಿಂಗ್ ಇನಿಂಗ್ಸ್ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಈ ಅಭಿಮಾನಿ ಮೈದಾನಕ್ಕೆ ನೇರವಾಗಿ ನುಗ್ಗಿದ್ದಾನೆ. ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಶರ್ಮ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದಾರೆ. ಈ ಅಭಿಮಾನಿ ರೋಹಿತ್ ಪಾದಕ್ಕೆರಗಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಅಚ್ಚರಿ ಎಂದರೆ ಆತ ವಿರಾಟ್ ಕೊಹ್ಲಿಯ ಅಭಿಮಾನಿಯಂತೆ ಕಾಣುತ್ತಿದ್ದ. ಏಕೆಂದರೆ ಆತ ವಿರಾಟ್ ಕೊಹ್ಲಿಯ ಜೆರ್ಸಿಯನ್ನು ಹಾಕಿದ್ದ. ವಿರಾಟ್ ಕೊಹ್ಲಿಯ ಆಟ ನೋಡಲೆಂದೇ ಆತ ಬಂದಿದ್ದ ಎನಿಸುತ್ತದೆ. ಆದರೆ, ಕೊಹ್ಲಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ರೋಹಿತ್ ಶರ್ಮ ಅವರು ಈ ಪಂದ್ಯದಲ್ಲಿ ಮೂರು ಬೌಂಡರಿ ನೆರವಿನಿಂದ 24 ರನ್ ಬಾರಿಸಿ ಜಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು.