1. Amit Shah in Karavali : ಟಿಪ್ಪು ಸುಲ್ತಾನ್ ಬೇಕೋ, ರಾಣಿ ಅಬ್ಬಕ್ಕ ಬೇಕೋ, ಆಯ್ಕೆ ನಿಮ್ಮದು ಎಂದ ಗೃಹ ಸಚಿವ ಅಮಿತ್ ಶಾ
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಬೆಂಬಲಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ರಾಣಿ ಅಬ್ಬಕ್ಕಾರನ್ನು ಆದರ್ಶವಾಗಿಟ್ಟುಕೊಂಡಿರುವ ಬಿಜೆಪಿ ನಡುವೆ ಸಂಘರ್ಷ ನಡೆಯಲಿದೆ. ನಿಮಗೆ ಯಾರು ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ (Amit Shah in Karavali) ಹೇಳಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Amit shah at Karavali : ಕರಾವಳಿ, ಮಲೆನಾಡು ಫುಲ್ ಸ್ವೀಪ್‌ಗೆ ಟಾರ್ಗೆಟ್ ನೀಡಿದ ಅಮಿತ್ ಶಾ; ನಾಯಕರಿಗೆ ಸಖತ್ ಕ್ಲಾಸ್
ರಾಜ್ಯದಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಫುಲ್ ಆಕ್ಟಿವ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮತ್ತೆ ಮತ್ತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂದು ಪಣ ತೊಟ್ಟಂತೆ ಕಾಣುತ್ತಿದೆ. ಒಂದು ಕಡೆ ಹಳೆ ಮೈಸೂರಿನಲ್ಲಿ ಇನ್ನೂ ಗೆಲ್ಲದ ಕ್ಷೇತ್ರಗಳನ್ನು ಗೆಲ್ಲುವ ಕಡೆಗೆ ರಣತಂತ್ರಗಳನ್ನು ರೂಪಿಸುತ್ತಿದ್ದರೆ, ಇನ್ನೊಂದು ಕಡೆ ಈಗಾಗಲೇ ಬಲಿಷ್ಠವಾಗಿರುವ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಫುಲ್ ಸ್ವೀಪ್ ಮಾಡಬೇಕು ಎನ್ನುವ ಉದ್ದೇಶವೂ ಪಕ್ಷಕ್ಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
Amit shah in Karavali : ಅಮಿತ್ ಶಾ ಕೂಡಾ ಕಾಂತಾರ ಸಿನಿಮಾ ನೋಡಿದ್ದಾರಂತೆ! ಅವರು ಕಾಂತಾರ ಕತೆ ಹೇಳಿದ್ಯಾಕೆ?
Amit Shah in Karavali : ಅಮರಗಿರಿ ಶ್ರೀ ಭಾರತ್ ಮಾತಾ ದೇಗುಲ ಲೋಕಾರ್ಪಣೆ ಮಾಡಿದ ಅಮಿತ್ ಶಾ
3. Terrorist arrested in Bangalore : ಬೆಂಗಳೂರಲ್ಲಿ ಶಂಕಿತ ಉಗ್ರ ಸೆರೆ; ಅಲ್ ಖೈದಾ ಜತೆ ಸಂಪರ್ಕ ಹೊಂದಿದ್ದ ಟೆಕ್ಕಿ ಆರಿಫ್
ರಾಜ್ಯದ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಮತ್ತು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಶನಿವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ (Terrorist arrested in Bangalore). ಬೆಂಗಳೂರಿನ ಅವಿತು ಕುಳಿತಿದ್ದ ಉಗ್ರನನ್ನು ಆರಿಫ್ ಎಂದು ಗುರುತಿಸಲಾಗಿದೆ. ಸುದ್ದಿಯ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಮನೆ ಖಾಲಿ ಮಾಡಿ ಉ.ಪ್ರದೇಶಕ್ಕೆ ಹಾರಲು ರೆಡಿಯಾಗಿದ್ದ ಉಗ್ರನಿಗೆ ಶಾಕ್!
4. Express Highway : ಬೆಂಗಳೂರು-ಮೈಸೂರು ಹೆದ್ದಾರಿ, ವಂದೇ ಭಾರತ್ ಒಂದೇ ಫ್ರೇಮಲ್ಲಿ! ಬೊಮ್ಮಾಯಿ ವಿಡಿಯೊ ರಿಟ್ವೀಟ್ ಮಾಡಿದ ಮೋದಿ
ಮೈಸೂರನ್ನು ಬೆಂಗಳೂರಿನ ಸನಿಹಕ್ಕೇ ತಂದಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Express Highway) ಸುಂದರ ದೃಶ್ಯ ಮತ್ತು ಅದೇ ಹೊತ್ತಿಗೆ ಅಡಿಭಾಗದಲ್ಲಿ ಸಾಗುವ ವಂದೇ ಭಾರತ್ ರೈಲಿನ ಸೊಬಗನ್ನು ಏಕಕಾಲದಲ್ಲಿ ಸೆರೆ ಹಿಡಿದ ಚೆಲುವಾದ ದೃಶ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಂಚಿಕೊಂಡಿದ್ದರು. ಅದನ್ನು ರಿಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯ ಇನ್ನಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ ಅಂಕಣ: ಭಾರತದಲ್ಲೇಕೆ ಮಿಲಿಟರಿ ಆಡಳಿತ ಸಾಧ್ಯವಿಲ್ಲ ಎಂದರೆ
ಇದೀಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಗದ್ದಲವೋ ಗದ್ದಲ. ಒಬ್ಬರ ಮಾತನ್ನು ಮತ್ತೊಬ್ಬರು ಕೇಳಲಾಗದಷ್ಟು ಗಲಾಟೆ. ಸ್ವತಃ ಪ್ರಧಾನಿಯೇ ಉತ್ತರ ನೀಡುತ್ತಿದ್ದರೂ, ತಾವು ಹೇಳಿದ ವಿಷಯಗಳಲ್ಲಿ ಪ್ರಧಾನಿ ಮಾತನಾಡಿಲ್ಲ ಎಂದು ಕಿರುಚಾಡುತ್ತಲೇ ಇರುವ ಪ್ರತಿಪಕ್ಷಗಳು. ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕುರಿತು ಹಿಂಡನ್‌ಬರ್ಗ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ವರದಿಯಿಂದಾಗಿ ದೇಶದ ಷೇರು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಿದೆ. ಈ ಕುರಿತು ಪ್ರಧಾನಿ ಮಾತನಾಡಬೇಕು ಎನ್ನುವುದು ಪ್ರತಿಪಕ್ಷಗಳ ಟೀಕೆ. ಇದೆಲ್ಲ ಗಲಾಟೆ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸುದೀರ್ಘ ಭಾಷಣ ಮಾಡಿದರು. ಇಷ್ಟೆಲ್ಲ ಗದ್ದಲ, ಹಲ್ಲಾಬೋಲ್‌ಗಳ ನಡುವೆಯೂ ನಮ್ಮ ಸಂಸತ್ತಿನಲ್ಲಿ ಅನೇಕ ಉತ್ತಮ ಅಂಶಗಳು ನಡೆಯುತ್ತಿರುತ್ತವೆ. ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ.
6. Karnataka Election : ನಮ್ಮ 123 ಸೀಟು ಅತ್ಲಾಗಿರಲಿ, ನಿಮ್ಮ ಸೀಟಿನ ಕಥೆ ಹೇಳಿ; ಸಿದ್ದರಾಮಯ್ಯಗೆ ಕುಮಾರಸ್ವಾಮಿ ವ್ಯಂಗ್ಯ
ʻʻ೧೨೩.. ೧೨೩.. ಅಂತ ಹೇಳ್ಕೊಂಡು ಓಡಾಡ್ತಾರಲ್ಲಾ.. ಎಲ್ಲಿಂದ ಬರುತ್ತೇರಿ ೧೨೩ ಸೀಟು.. ನಾನು ಅಧ್ಯಕ್ಷ ಆಗಿದ್ದಾಗಲೇ ಬಂದಿದ್ದು ೫೯ ಸೀಟು.. ಜೆಡಿಎಸ್‌ಗೆ ಯಾವತ್ತಾದರೂ ೧೨೩ ಸೀಟು ಬಂದಿದ್ಯೇನ್ರೀ.. ಈಗ ಒಮ್ಮೆಗೇ ಎಲ್ಲಿಂದ ಬರುತ್ತೆ ೧೨೩ʼʼ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ನಾಯಕರನ್ನು ವ್ಯಂಗ್ಯ ಮಾಡಿದ ಬೆನ್ನಿಗೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (Karnataka Election) ಅವರು ತಿರುಗೇಟು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅವರು ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. PM Modi: ಉಕ್ರೇನ್ ವಿರುದ್ಧದ ಯುದ್ಧ ಕೊನೆಗಾಣಿಸುವಂತೆ ಪುಟಿನ್ ಮನವೊಲಿಸಲು ಪ್ರಧಾನಿ ಮೋದಿಗೆ ಸಾಧ್ಯ ಎಂದ ಅಮೆರಿಕ
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ತಡೆಯಬೇಕು ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಅಮೆರಿಕ, ಈ ಎರಡೂ ರಾಷ್ಟ್ರಗಳ ಮಧ್ಯೆಯ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ಸಾಧ್ಯ ಮಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿ(PM Modi)ಯವರಿಂದ ಸಾಧ್ಯ ಎಂಬ ಮಾತನ್ನೂ ಆಗಾಗ ಹೇಳುತ್ತಿದೆ. ಈಗ ವೈಟ್ಹೌಸ್ ವಕ್ತಾರ ಜಾನ್ ಕಿರ್ಬಿ ಅವರು ಮತ್ತೊಮ್ಮೆ ಅದೇ ಮಾತುಗಳನ್ನಾಡಿದ್ದಾರೆ. ಸುದ್ದಿಯ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
8. ವಾರದ ವ್ಯಕ್ತಿಚಿತ್ರ: ಮದ್ರಾಸ್ ಹೈಕೋರ್ಟ್ ಜಡ್ಜ್ ಗೌರಿ; ಹೋರಾಟವೇ ಇವರ ಹಾದಿ
ಜೋರು ಧ್ವನಿ, ಕಾನೂನು ಪಾಂಡಿತ್ಯ, ಸಾರ್ವಜನಿಕವಾಗಿ ನಿರರ್ಗಳವಾದ ಭಾಷಣ, ಅಲ್ಲಲ್ಲಿ ಸ್ವಲ್ಪ ವಿವಾದ, ಬಿಜೆಪಿ ಜತೆಗಿನ ನಂಟು… ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅರ್ಥಾತ್ ಎಲ್. ವಿಕ್ಟೋರಿಯಾ ಗೌರಿ ಅವರು ಫೆಬ್ರವರಿ ೭ರಂದು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ತಮಿಳುನಾಡಿನ ಜನರ ಹೊರತಾಗಿ ಬೇರೆಡೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ, ನ್ಯಾ. ವಿಕ್ಟೋರಿಯಾ ಗೌರಿ ಅವರ ಹೆಸರು ಈಗ ದೇಶದೆಲ್ಲೆಡೆ ಪಸರಿಸಿದೆ. ವ್ಯಕ್ತಿಚಿತ್ರ ಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ಟರ್ಕಿ ಭೂಕಂಪದ ಭೀಕರತೆ; ಎಲ್ಲೆಲ್ಲೂ ಶವಗಳು ಕೊಳೆತ ವಾಸನೆ, 94 ತಾಸು ತನ್ನ ಮೂತ್ರವನ್ನೇ ಕುಡಿದು ಬದುಕಿದ್ದ ಯುವಕ
ಟರ್ಕಿ-ಸಿರಿಯಾ ಭೂಕಂಪದ ಕರಾಳತೆ ತೋರಿಸುವ ಹಲವು ಫೋಟೋ-ವಿಡಿಯೊಗಳು, ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಕಳೆದ ನಾಲ್ಕು ದಿನಗಳಿಂದ ಅವಶೇಷಗಳಡಿಯಲ್ಲೇ ಸಿಲುಕಿದ್ದ 17 ವರ್ಷದ ಹುಡುಗನೊಬ್ಬನನ್ನು ಈಗ ಹೊರತೆಗೆದು ರಕ್ಷಿಸಲಾಗಿದೆ. ಈ ಹುಡುಗ ನಾಲ್ಕು ದಿನ ಹೇಗಿದ್ದ ಎಂಬುದನ್ನು ಕೇಳಿದರೆ, ನಿಜಕ್ಕೂ ಮನಸಿಗೆ ಖೇದ ಅನ್ನಿಸುತ್ತದೆ. ಹೊರಗೆ ಬಂದ ಬಳಿಕ ಮಾತನಾಡಿದ ಅವನು ‘ನಾನು ಈ ನಾಲ್ಕೂ ದಿನ ಜೀವ ಹಿಡಿದಿಟ್ಟುಕೊಳ್ಳುವ ಸಲುವಾಗಿ, ನನ್ನ ಮೂತ್ರವನ್ನೇ ನಾನು ಕುಡಿಯುತ್ತಿದ್ದೆ’ ಎಂದು ತಿಳಿಸಿದ್ದಾನೆ. ಸುದ್ದಿಯ ಇನ್ನಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
10. IND VS AUS: ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ; ಭಾರತಕ್ಕೆ ಇನಿಂಗ್ಸ್ ಹಾಗೂ 132 ರನ್ ಗೆಲುವು
ಪ್ರವಾಸಿ ಆಸ್ಟ್ರೇಲಿಯ(IND VS AUS) ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಗೆಲುವು ದಾಖಲಿದೆ. ಈ ಮೂಲಕ ಬಾಡರ್ರ್-ಗವಾಸ್ಕರ್(border gavaskar trophy) ಟೆಸ್ಟ್ ಟ್ರೋಫಿಯ ನಾಲ್ಕು ಪಂದ್ಯಗಳ ಸರಣಯಲ್ಲಿ ರೋಹಿತ್ ಶರ್ಮಾ ಪಡೆ 1-0 ಮುನ್ನಡೆ ಕಾಯ್ದುಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ಪ್ರಮುಖ ಸುದ್ದಿಗಳು
- Rashmika Mandanna: 5 ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರಾ ರಶ್ಮಿಕಾ? ಟ್ವಿಟರ್ನಲ್ಲಿ ನಟಿ ಹೇಳಿದ್ದೇನು?
- ಏನಾಗಲ್ಲ ಎಂಬ ಧೈರ್ಯದಿಂದ ಪರೋಟಾ ತಿಂದು ಮೃತಪಟ್ಟ ಕೇರಳದ ವಿದ್ಯಾರ್ಥಿನಿ!
- Valentine Week: ಪ್ಯಾನ್ ಇಂಡಿಯಾ ಸಿನಿಮಾವಾಗಿ ಮತ್ತೆ ರಿಲೀಸ್ ಆದ ʻದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆʼ: ವ್ಯಾಲೆಂಟೈನ್ಸ್ ವೀಕ್ಗೆ ಬಂಪರ್!
- Layoffs In 2023: ಹೊಸ ವರ್ಷದ 42 ದಿನದಲ್ಲಿ 1 ಲಕ್ಷ ಜನರ ನೌಕರಿಗೆ ಕತ್ತರಿ, ಆರ್ಥಿಕ ಹಿಂಜರಿಕೆಗೆ ಮೊದಲೇ ಜಾಗತಿಕ ಭೀತಿ
ಇದನ್ನೂ ಓದಿ : ವಿಸ್ತಾರ TOP 10 NEWS: ಬಿಜೆಪಿ ಸರ್ಕಾರಕ್ಕೆ ರಾಜ್ಯಪಾಲರ ಶಹಬ್ಬಾಸ್‌ಗಿರಿಯಿಂದ, ಶತಕ ದಾಖಲೆ ಬರೆದ ರೋಹಿತ್‌ವರೆಗಿನ ಪ್ರಮುಖ ಸುದ್ದಿಗಳಿವು