Site icon Vistara News

Hardik Pandya : ಟೀಕಾಕಾರರ ಬಾಯ್ಮುಚ್ಚಿಸಲು ಸೋಮನಾಥ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದ ಪಾಂಡ್ಯ

Hardik Pandya

ಬೆಂಗಳೂರ: ಐಪಿಎಲ್ 2024ರ (IPL 2024) ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ (Mumbai Indians) ಕಳಪೆ ಆರಂಭವನ್ನು ಹೊಂದಿದೆ. ಐದು ಬಾರಿ ವಿಜೇತ ಫ್ರಾಂಚೈಸಿಗೆ ಸೋಲುಗಳು ನಿರೀಕ್ಷಿತ. ಯಾಕೆಂದರೆ 2013ರಿಂದ ಸುಮಾರು ಹತ್ತು ಋತುಗಳಲ್ಲಿ ತಂಡ ನಾಯಕತ್ವದ ಟೋಪಿ ಧರಿಸಿದ್ದ ರೋಹಿತ್ ಶರ್ಮಾ (Rohit Sharma) ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕನಾಗಿ ಬಂದಿದ್ದಾರೆ. ಹೀಗಾಗಿ ಗೊಂದಲ ಜೋರಾಗಿದೆ. ಅದರ ನಡುವೆ ಸೋಲುಗಳು ಸುಳಿದಾಡಿವೆ.

ನಗದು ಸಮೃದ್ಧ ಐಪಿಎಲ್​ನ ಹಲವಾರು ಋತುವಿನಲ್ಲಿ ಮುಂಬಯಿ ತಂಡ ನಿಧಾನಗತಿಯ ಆರಂಭ ಪಡೆದದ್ದು ಇದೆ. ಆದಾಗ್ಯೂ ಹೆಚ್ಚಿನ ಸಂದರ್ಭಗಳಲ್ಲಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಹಾರ್ದಿಕ್ ಮತ್ತು ಬಳಗ ಈ ಬಾರಿಯೂ ಇದೇ ರೀತಿಯ ಆರಂಭ ಹೊಂದಿತ್ತು, ಹದಿನೇಳನೇ ಆವೃತ್ತಿಯಲ್ಲಿ ಇದುವರೆಗೆ ಕಾಣಿಸಿಕೊಂಡ ಮೂರು ಮುಖಾಮುಖಿಗಳಲ್ಲಿ ಎಲ್ಲವನ್ನೂ ಸೋತಿದೆ. ಹೀಗಾಗಿ ಪಾಂಡ್ಯ ಮೇಲೆ ಅಭಿಮಾನಿಗಳ ಕೋಪ ಜಾಸ್ತಿಯಾಗಿದೆ. ಎಲ್ಲರೂ ಸೇರಿ ಅವರನ್ನು ನಿರಂತರವಾಗಿ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಬುದ್ದಿ ಕಲಿಸಲು ಹಾಗೂ ಮತ್ತೆ ಗೆಲುವಿನ ಹಳಿಗೆ ಮರಳಲು ಪಾಂಡ್ಯ ಧಾರ್ಮಿಕ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಸೋಮನಾಥ ಮಂದಿರದಲ್ಲಿ ಪೂಜೆ

ಗುಜರಾತ್​ನ ಸೋಮನಾಥದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಪಾಂಡ್ಯ ವಿಶೇಷ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ, ತಮ್ಮ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸೋತ ನಂತರ ಇಡೀ ತಂಡವು ಕೊನೆಯ ಬಾರಿಗೆ ಗುಜರಾತ್​​ಗೆ ಮರಳಿದೆ. ಗುಜರಾತ್​ನ ಭಾವನಗರದಿಂದ ಸುಮಾರು ಆರು ಗಂಟೆಗಳ ಪ್ರಯಾಣದ ದೂರದಲ್ಲಿರುವ ಪವಿತ್ರ ಹಿಂದೂ ಯಾತ್ರಾ ಸ್ಥಳಕ್ಕೆ ಭೇಟಿ ನೀಡಲು ಹಾರ್ದಿಕ್ ನಿರ್ಧರಿಸಿ ಅಲ್ಲಿ ಪೂಜೆ ಮಾಡಿದೆ. ಶಿವಲಿಂಗಕ್ಕೆ ಅಭಿಷೇಕ ಸೇರಿದಂತೆ ಹಲವಾರು ಪೂಜೆಗಳನ್ನು ಅವರು ಮಾಡಿದ್ದಾರೆ.

ಇದನ್ನೂ ಓದಿ: IPL 2024 : ಗುಜರಾತ್ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಪಂಜಾಬ್​ ಕಿಂಗ್ಸ್​​

ಅವರ ಪೂಜೆಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪಾಂಡ್ಯ ತನ್ನ ವಿರೋಧಿಗಳಿಗೆ ಪಾಠ ಕಲಿಸಲು ಆ ರೀತಿ ಮಾಡಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂದಿನ ಪಂದ್ಯ


2024 ರ ಆವೃತ್ತಿಯಲ್ಲಿ ಅನಪೇಕ್ಷಿತ ಆರಂಭದ ನಂತರ, ಮಾಜಿ ಚಾಂಪಿಯನ್​ಗಳು ಏಪ್ರಿಲ್ 07 ರ ಭಾನುವಾರ ಮಧ್ಯಾಹ್ನ ವಾಂಖೆಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸೆಣಸಲಿದ್ದಾರೆ. ಮುಂಬೈಗೆ ಇದು ಲೀಗ್ ಹಂತದ ನಾಲ್ಕನೇ ಪಂದ್ಯವಾಗಿದ್ದು, ರಿಷಭ್ ಪಂತ್ ಅವರ ಕ್ಯಾಪಿಟಲ್ಸ್ ಈ ಋತುವಿನ ಐದನೇ ಪಂದ್ಯವನ್ನು ಆಡಲಿದೆ.

ಕೆಕೆಆರ್ ವಿರುದ್ಧ 106 ರನ್​ಗಳ ಸೋಲನ್ನು ನಿವಾರಿಸಲು ಪಂತ್ ಪಡೆ ಎದುರು ನೋಡುತ್ತಿದ್ದರೆ, ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಲು ಎಲ್ಲಾ ಕಾರಣಗಳಿವೆ.

ಸಂವಹನ ಕೊರತೆ ಎಂದು ಶಾಸ್ತ್ರಿ

ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಘೋಷಿಸುವಾಗ ಮುಂಬೈ ಇಂಡಿಯನ್ಸ್ ಸ್ಪಷ್ಟತೆ ತೋರಿಸಿದ್ದರೆ ಅವರ ಬಗ್ಗೆ ಅಭಿಮಾನಿಗಳ ಅಸಮಾಧಾನ ತಪ್ಪಿಸಬಹುದಿತ್ತು ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಶಾಂತವಾಗಿರಲು ಮತ್ತು ಘನ ಪ್ರದರ್ಶನದೊಂದಿಗೆ ಬಿರುಗಾಳಿಯನ್ನು ಎದುರಿಸಲು ಶಾಸ್ತ್ರಿ ಪಾಂಡ್ಯಗೆ ಸಲಹೆ ನೀಡಿದ್ದಾರೆ. “ಇದು ಆಡುತ್ತಿರುವ ಭಾರತೀಯ ಕ್ರಿಕೆಟ್ ತಂಡವಲ್ಲ. ಇದು ಫ್ರ್ಯಾಂಚೈಸ್ ಕ್ರಿಕೆಟ್. ಅವರಿಗೆ ಡಾಲರ್ ಲೆಕ್ಕದಲ್ಲಿ ಹಣ ಪಾವತಿ ಮಾಡಿದ್ದಾರೆ. ಫ್ರಾಂಚೈಸಿ ಮಾಲೀಕರೇ ಇಲ್ಲಿ ನಿರ್ಣಾಯಕ ನಾಯಕನಾಗಿ ಅವರು ಯಾರನ್ನು ಬಯಸುತ್ತಾರೆ ಎಂಬುದು ಅವರ ಹಕ್ಕು. ಸಂವಹನದಲ್ಲಿ ಹೆಚ್ಚು ಸ್ಪಷ್ಟತೆಯೊಂದಿಗೆ ಇದನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ,” ಎಂದು ಶಾಸ್ತ್ರಿ ಹೇಳಿದ್ದಾರೆ.

Exit mobile version