ಮುಂಬಯಿ: ಟೀಮ್ ಇಂಡಿಯಾ (Team India) ಆಲ್‌ರೌಂಡರ್ ಮತ್ತು ಮುಂಬೈ ಇಂಡಿಯನ್ಸ್ (Mumbai Indians) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರು ದೀರ್ಘಕಾಲದ ಗಾಯಾಳುತನದ ಸಮಸ್ಯೆಯಿಂದ ಗುಣಮುಖರಾಗಿದ್ದು, ಫಿಟ್ ಆಗಿ ಮುಂಬಯಿಯಲ್ಲಿ ಇಂದು ನಡೆದ ಡಿವೈ ಪಾಟೀಲ್ ಟಿ20 ಕಪ್ 2024 (DY Patil T20 Cup 2024) ಪಂದ್ಯದಲ್ಲಿ ಭಾಗವಹಿಸಿದರು.
ಕಳೆದ ವರ್ಷ ನವೆಂಬರ್‌ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಅವರ ಪಾದದ ಅಸ್ಥಿರಜ್ಜು ಹರಿದಿತ್ತು. ಇದಾದ ಬಳಿಕ ಹಾರ್ದಿಕ್ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದರು. ಆಲ್‌ರೌಂಡರ್‌ನ ಚೇತರಿಕೆಗಾಗಿ 18 ವಾರಗಳ ಚಿಕಿತ್ಸೆಯನ್ನು NCA ಮತ್ತು BCCI ಸಿದ್ಧಪಡಿಸಿತ್ತು.
30 ವರ್ಷ ವಯಸ್ಸಿನ ಪಾಂಡ್ಯ ಗುಣಮುಖರಾಗಿ ಡಿವೈ ಪಾಟೀಲ್ T20 ಕಪ್ 2024ರಲ್ಲಿ ರಿಲಯನ್ಸ್ 1 ತಂಡದ ನಾಯಕನಾಗಿ ಪಾಲ್ಗೊಂಡರು. ಇದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ವಿರುದ್ಧ ಆಡಿತು.
ಇದರ ಜೊತೆಗೆ, ಬರೋಡಾದ ಕಿರಣ್ ಮೋರೆ ಅಕಾಡೆಮಿಯಲ್ಲಿ ತಮ್ಮ ಸಹೋದರ ಕೃನಾಲ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಇಶಾನ್ ಕಿಶನ್ ಅವರೊಂದಿಗೆ IPL 2024ಗಾಗಿ ತರಬೇತಿಯನ್ನು ಸಹ ಪಾಂಡ್ಯ ಪ್ರಾರಂಭಿಸಿದ್ದಾರೆ. ಮುಂಬರುವ ಐಪಿಎಲ್ ಸೀಸನ್‌ಗೆ ಸಿದ್ಧವಾಗಲು ಹಾರ್ದಿಕ್ ತಮ್ಮ ಫಿಟ್ನೆಸ್ ಮತ್ತು ಫಾರ್ಮ್ ಅನ್ನು ಪರೀಕ್ಷಿಸುವ ಸಲುವಾಗಿ ಇಂದು ಮೈದಾನಕ್ಕಿಳಿದರು.
ಹೆಚ್ಚಿನ ಐಪಿಎಲ್ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಸಿದ್ಧತೆಗಳನ್ನು ಮಾಡಲು ಈ ಪಂದ್ಯಾವಳಿಯನ್ನು ಒಂದು ಅವಕಾಶವಾಗಿ ಬಳಸುತ್ತಾರೆ. ಈ ಎಲ್ಲಾ ಪಂದ್ಯಗಳು ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ವಿಶ್ವವಿದ್ಯಾನಿಲಯ ಮೈದಾನದಲ್ಲಿ ನಡೆಯಲಿವೆ. 16 ತಂಡಗಳು ಇವೆ.
ಇನ್ನೊಂದು ಬೆಳವಣಿಗೆಯಲ್ಲಿ, ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಭಾರತ- ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಕಾಮೆಂಟರಿ ಬಾಕ್ಸ್‌ನಲ್ಲಿ ಇರುವುದಿಲ್ಲ. ಏಕೆಂದರೆ ಅವರು ವಿಕೆಟ್‌ಕೀಪರ್ ಕಂ ಬ್ಯಾಟರ್ ಆಗಿ ಟಿ20 ಪಂದ್ಯಾವಳಿಯಲ್ಲಿ ಡಿವೈ ಪಾಟೀಲ್ ಬಿ ಪರ ಆಡಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿರುವ ದಿನೇಶ್, ಹಿಂದಿನ ಐಪಿಎಲ್ ಆವೃತ್ತಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 168.29ರ ಅತ್ಯಂತ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 138 ರನ್ ಗಳಿಸಿದರು.
ಇದನ್ನೂ ಓದಿ: Sarfaraz Khan : ಹಾರ್ದಿಕ್ ಪಾಂಡ್ಯ ದಾಖಲೆ ಸರಿಗಟ್ಟಿದ ಸರ್ಫರಾಜ್ ಖಾನ್