ನವದೆಹಲಿ: ಅಕ್ಟೋಬರ್ 5ರಿಂದ ನಡೆಯಲಿರುವ ಐಸಿಸಿ ವರ್ಲ್ಡ್ ಕಪ್ (ICC World Cup 2023) ಪಂದ್ಯಾವಳಿಗೆ ಎಲ್ಲ ಸಿದ್ದತೆಯಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಪೈಕಿ ಬಹುತೇಕ ಕ್ರಿಕೆಟ್ ತಂಡಗಳು ಭಾರತಕ್ಕೆ ಬಂದಿಳಿದಿದ್ದು, ಈಗಾಗಲೇ ಅಭ್ಯಾಸ ಗೇಮ್ ಕೂಡ ಶುರುವಾಗಿವೆ. ಈ ಮಧ್ಯೆ, ಐಸಿಸಿ, ವರ್ಲ್ಡ್ ಕಪ್ ವೀಕ್ಷಕ ವಿವರಣಾಕಾರರ ಪಟ್ಟಿಯನ್ನು (Commentary Panel) ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ (Ricky Ponting), ಭಾರತ ತಂಡದ ಮಾಜಿ ಹೆಡ್ ಕೋಚ್ ರವ ಶಾಸ್ತ್ರಿ (Ravi Shashtri), ಸುನೀಲ್ ಗವಾಸ್ಕರ್ (Sunil Gavaskar), ಇಂಗ್ಲೆಂಡ್ ದಿಗ್ಗಜ ನಾಸೀರ್ ಹುಸೇನ್ (Nasser Hussain) ಹಾಗೂ ಮಹಿಳಾ ಕ್ರಿಕೆಟಗಾರ್ತಿ ಲಿಸಾ ಸ್ಥಾಲೇಕರ್, ಅಂಜುಮ್ ಚೋಪ್ರಾ ಸೇರಿದಂತೆ 26 ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ ರಿಲೀಸ್ ಮಾಡಿದೆ.
ಯಾರೆಲ್ಲ ಇದ್ದಾರೆ ವೀಕ್ಷಕ ವಿವರಣಾಕಾರರು?
ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ)
ಇಯಾನ್ ಮಾರ್ಗನ್(ಇಂಗ್ಲೆಂಡ್)
ಶೇನ್ ವಾಟ್ಸನ್(ಆಸ್ಟ್ರೇಲಿಯಾ)
ಲಿಸಾ ಲಿಸಾ ಸ್ಥಾಲೇಕರ್ (ಆಸ್ಟ್ರೇಲಿಯಾ)
ರಮೀಜ್ ರಾಜಾ (ಪಾಕಿಸ್ತಾನ)
ರವಿ ಶಾಸ್ತ್ರಿ(ಭಾರತ)
ಆರೋನ್ ಫಿಂಚ್(ಆಸ್ಟ್ರೇಲಿಯಾ)
ಸುನಿಲ್ ಗವಾಸ್ಕಾರ್(ಭಾರತ)
ಮ್ಯಾಥ್ಯೂ ಹೆಡನ್(ಆಸ್ಟ್ರೇಲಿಯಾ)
ಇಯಾನ್ ಸ್ಮಿತ್(ನ್ಯೂಜಿಲೆಂಡ್)
ಇಯಾನ್ ಬಿಶಪ್(ವೆಸ್ಟ್ ಇಂಡೀಸ್)
ವಕಾರ್ ಯೂನಿಸ್(ಪಾಕಿಸ್ತಾನ)
ಶಾನ್ ಪೊಲ್ಲಾಕ್(ದಕ್ಷಿಣ ಆಫ್ರಿಕಾ)
ಅಂಜುಮ್ ಚೋಪ್ರಾ(ಭಾರತ)
ಮೈಕೆಲ್ ಅಥರ್ಟನ್(ಇಂಗ್ಲೆಂಡ್)
ಸಿಮೋನ್ ಡೌಲ್(ನ್ಯೂಜಿಲೆಂಡ್)
ಮಂಪುಮೆಲೆಲೋ ಮಂಬಂಗ್ವಾ(ಜಿಂಬಾಬ್ವೆ)
ಸಂಜಯ್ ಮಾಂಜ್ರೆಕರ್(ಭಾರತ)
ಕೇಟಿ ಮಾರ್ಟಿನ್(ನ್ಯೂಜಿಲೆಂಡ್)
ದಿನೇಶ್ ಕಾರ್ತಿಕ್(ಭಾರತ)
ಡಿರ್ಕ್ ನ್ಯಾನ್ನೇಸ್(ಆಸ್ಟ್ರೇಲಿಯಾ, ನೆದರ್ಲೆಂಡ್)
ಸ್ಯಾಮೆಯುಲ್ ಬದ್ರೀ(ವೆಸ್ಟ್ ಇಂಡೀಸ್)
ಅಥಾರ್ ಅಲಿಖಾನ್(ಬಾಂಗ್ಲಾದೇಶ)
ರಸಲ್ ಅರ್ನಾಲ್ಡ್(ಶ್ರೀಲಂಕಾ)
ಇಯಾನ್ ವಾರ್ಡ್(ಇಂಗ್ಲೆಂಡ್)
Some of the most recognisable voices in the game will call the #CWC23 in India 🎙https://t.co/FBuIziElPa
— ICC (@ICC) September 29, 2023
ಅಕ್ಷರ್ ಪಟೇಲ್ ಬದಲಿಗೆ ಆರ್ ಅಶ್ವಿನ್ ಭಾರತ ತಂಡಕ್ಕೆ ಆಯ್ಕೆ
ಏಕದಿನ ವಿಶ್ವಕಪ್ ಕ್ರಿಕೆಟ್ (ICC World Cup 2023) ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಟೀಮ್ (Indian Cricket Team) ಘೋಷಣೆ ಮಾಡಿದ್ದು, ಕೊನೆಯ ಗಳಿಗೆಯಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ಜಾಗ ಪಡೆದಿದ್ದಾರೆ. ಈ ಮೊದಲೇ 15 ಆಟಗಾರರ ತಂಡವನ್ನು ಬಿಸಿಸಿಐ ಘೋಷಣೆ ಮಾಡಿತ್ತು. ಆಗ ಆರ್ ಅಶ್ವಿನ್ ಅವರನ್ನು ಪರಿಗಣಿಸಿರಲಿಲ್ಲ. ಆದರೆ, ತಂಡದ ಆಟಗಾರರನ್ನು ಘೋಷಿಸಲು ಸೆಪ್ಟೆಂಬರ್ 28 ಕೊನೆಯ ದಿನವಾಗಿತ್ತು. ಈ ಹಂತದಲ್ಲಿ ಬಿಸಿಸಿಐ ತಂಡದಲ್ಲಿ ಮಾರ್ಪಾಡು ಮಾಡಿ, ಗಾಯಾಳು ಅಕ್ಷರ್ ಪಟೇಲ್ಗೆ (Axar Patel) ಬದಲಿಯಾಗಿ ಆರ್ ಅಶ್ವಿನ್ ಅವರಿಗೆ ಮಣೆ ಹಾಕಿದೆ.
ನಿನ್ನೆಯಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾದ ವಿರುದ್ಧ ಮೂರು ದಿನಗಳ ಏಕದಿನ ಪಂದ್ಯದಲ್ಲಿ ಅಶ್ವಿನ್ ಅವರು ಇಂದೋರ್ನಲ್ಲಿ ನಡೆದ ಪಂದ್ಯದಲ್ಲಿ 41ರನ್ ನೀಡಿ 3 ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದರು. ಅಲ್ಲದೇ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಸರಣಿಯಲ್ಲಿ ಒಟ್ಟು ನಾಲ್ಕು ವಿಕೆಟ್ ಪಡೆದ ಅಶ್ವಿನ್ ಅವರ ಆಟವು ತಂಡ ಆಯ್ಕೆಗಾರರ ಗಮನ ಸೆಳೆದ ಹಿನ್ನಲೆಯಲ್ಲಿ ಅವರಿಗೆ ಭಾರತೀಯ 15 ಸದಸ್ಯರ ಟೀಮ್ನಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ICC World Cup 2023: ವಿಶ್ವಕಪ್ ಪಂದ್ಯಾವಳಿ ನಡೆಯುವ ಭಾರತದ ಪ್ರತಿ ಮೈದಾನದಲ್ಲೂ ಜಿಯೋ ಡೌನ್ ಲೋಡ್ ವೇಗ ಆನಂದಿಸಿ
ಅಕ್ಟೋಬರ್ 8ರಿಂದ ಭಾರತ ಅಭಿಯಾನ ಶುರು
ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಮೂಲಕ ಭಾರತದ ವಿಶ್ವಕಪ ಅಭಿಯಾನ ಶುರುವಾಗಲಿದೆ. ಚೆನ್ನೈನಲ್ಲಿ ಪಿಚ್ಗಳು ನಿಧಾನ ಮತ್ತು ಸ್ಪಿನ್ ಸಹಾಯಕವಾಗಿವೆ. ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ಗಾಗಿ ಸ್ಟೇಡಿಯಂನಲ್ಲಿ ಕೆಲವು ಪಂದ್ಯಗಳನ್ನು ಆಡಿರುವ ಅಶ್ವಿನ್ ಹೆಚ್ಚು ಪರಿಣಾಮಕಾರಿಯಾಗಬಲ್ಲರು. ಇದು ನಾಯಕ ರೋಹಿತ್ ಶರ್ಮಾಗೆ ಅನುಕೂಲಕರವಾಗಿ ಪರಿಣಮಿಸಲಿದೆ. ತಂಡದ ಏಕೈಕ ಸ್ಪೆಷಲಿಸ್ಟ್ ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ 115 ಒಡಿಐಗಳಿಂದ 155 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರ ಅನುಭವವು ತಂಡಕ್ಕೆ ಹೆಚ್ಚಿನ ನೆರವು ನೀಡಬಹುದು ಎಂದು ಆಯ್ಕೆಯಾಗರು ಭಾವಿಸಿದ್ದಾರೆ.