Site icon Vistara News

World Cup 2023: ಸೂಪರ್‌ಸ್ಟಾರ್‌ ರಜನಿಕಾಂತ್‌ಗೆ ವಿಶ್ವ ಕಪ್​ ಗೋಲ್ಡನ್​ ಟಿಕೆಟ್​

ICC World Cup Rajnikanth Presented With Golden Ticket

ಬೆಂಗಳೂರು: ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ವಿಶ್ವಕಪ್​(ICC World Cup 2023) ನಡೆಯುತ್ತಿದೆ. ಈ ಮಹತ್ವದ ಟೂರ್ನಿ ಅಕ್ಟೋಬರ್​ 5ರಿಂದ ಆರಂಭವಾಗಿ ನವೆಂಬರ್​ 19ರ ತನಕ ನಡೆಯಲಿದೆ. ಈ ಟೂರ್ನಿಗೆ ವಿಶೇಷ ಅತಿಥಿಯಾಗಿ ರಜನಿಕಾಂತ್‌ ಅವರಿಗೆ ಬಿಸಿಸಿಐ ಗೋಲ್ಡನ್​ ಟಿಕೆಟ್​ ನೀಡಿ ಆಹ್ವಾನಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​​ ಶಾ ಅವರು ಚೆನ್ನೈನಲ್ಲಿರುವ ರಜನಿ ಮನೆಗೆ ತೆರಳಿ ಈ ಗೋಲ್ಡನ್ ಟಿಕೆಟ್ ನೀಡಿದ್ದಾರೆ. ರಜನಿಕಾಂತ್ ಅವರು ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 169 ಚಿತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಭ್‌ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಜಯ್ ಶಾ ಈ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ. ಈ ಗೋಲ್ಡನ್ ಟಿಕೆಟ್ ಪಡೆದ ಸೆಲೆಬ್ರಿಟಿಗಳು ವಿಐಪಿ ಲಾಂಜ್‌ನಲ್ಲಿ ಸಂಪೂರ್ಣ ಉಚಿತವಾಗಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದು. ರಜನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿದ ನಂತರ, ಬಿಸಿಸಿಐ ಮತ್ತು ಜಯ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ʻʻಬಿಸಿಸಿಐ ಗೌರವ ಕಾರ್ಯದರ್ಶಿ ಜಯ್​​ ಶಾ  ಅವರು ರಜನಿಕಾಂತ್‌ ಅವರಿಗೆ ಗೋಲ್ಡನ್ ಟಿಕೆಟ್ ನೀಡಿದರು. ನಟ ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಲಕ್ಷಾಂತರ ಜನರ ಹೃದಯದಲ್ಲಿ ಛಾಪು ಮೂಡಿಸಿದ್ದಾರೆ. ODI ವಿಶ್ವಕಪ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ICC World Cup 2023: ಭಾರತ ಬಿಟ್ಟು ವಿಶ್ವಕಪ್​ ಗೆಲ್ಲುವ ತಂಡ ಹೆಸರಿಸಿದ ಗಂಭೀರ್​

ಶಾರುಖ್‌ ಖಾನ್ ಪ್ರಚಾರ ರಾಯಭಾರಿ

ಬಾಲಿವುಡ್​ನ(Bollywood) ಸ್ಟಾರ್​ ಹಾಗೂ ಹಿರಿಯ ನಟ ಶಾರುಖ್‌ ಖಾನ್(Shah Rukh Khan) ಅವರು ಏಕದಿನ ವಿಶ್ವಕಪ್ ಟೂರ್ನಿಯ ಪ್ರಚಾರ ಅಂಬಾಸಿಡರ್‌ ಆದ್ದಾರೆ. ಈಗಾಗಲೇ ಅವರ ಧ್ವನಿಯಲ್ಲಿ ಎಲ್ಲ 10 ಜೆರ್ಸಿ, ತಂಡಗಳ ಸೋಲು ಗೆಲುವು ಸಂಭ್ರಮದ ಕ್ಷಣ ಮತ್ತು ಅಭಿಮಾನಿಗಳ ಸಂಭ್ರಮಾಚರಣೆ, ಕುತೂಹಲ, ಕಪಿಲ್​ದೇವ್​ ಅವರು ಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದ ದೃಶ್ಯ, 2011ರ ವಿಶ್ವಕಪ್​ನಲ್ಲಿ ಸಚಿನ್​ ಬ್ಯಾಟಿಂಗ್ ನೋಟ​, ಸಚಿನ್​ ಅವರ ಅಭಿಮಾನಿ ಭಾರತದ ಧ್ವಜವನ್ನು ಬೀಸುತ್ತಾ ಸಚಿನ್​ಗೆ ಚಿಯರ್​ ಅಪ್ ಮಾಡುತ್ತಿರುವುದು, ವಿರಾಟ್​ ಕೊಹ್ಲಿಯ ಫಿಲ್ಡಿಂಗ್​ ಹೀಗೆ ಹಲವು ದೃಶ್ಯಗಳನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ.

ಒಟ್ಟು 48 ಪಂದ್ಯಗಳು

ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Exit mobile version