Site icon Vistara News

Dhruv Jurel: ಫಿಫ್ಟಿ ಬಾರಿಸಿ ತಂದೆಗೆ ಧ್ರುವ್‌ ಜುರೆಲ್ ಸೆಲ್ಯೂಟ್‌ ;‌ ಇವರ ತಂದೆ ಕಾರ್ಗಿಲ್‌ ಹೀರೊ

Dhruv Jurel

IND vs ENG: Dhruv Jurel, Son of Kargil War Veteran, Celebrates Maiden Test Fifty With a Salute

ರಾಂಚಿ: ಭಾರತ ಕ್ರಿಕೆಟ್‌ ತಂಡದ ಧ್ರುವ್‌ ಜುರೆಲ್‌ (Dhruv Jurel) ಅವರು ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ (IND vs ENG Test Match) ಅಮೋಘ 90 ರನ್‌ ಗಳಿಸುವ ಮೂಲಕ ಭಾರತ ತಂಡವು ಬೃಹತ್‌ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೇ ಮೊದಲ ಅರ್ಧಶತಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊದಲ ಅರ್ಧಶತಕ ಸಿಡಿಸಿದ ಅವರು, ತಮ್ಮ ತಂದೆಗೆ ಸೆಲ್ಯೂಟ್‌ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಂದಹಾಗೆ, ಜುರೆಲ್‌ ಅವರ ತಂದೆಯು ಕಾರ್ಗಿಲ್‌ ಯುದ್ಧದಲ್ಲಿ (Kargil War) ಹೋರಾಡಿದವರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಹೌದು, ಉತ್ತರ ಪ್ರದೇಶದ ಉದಯೋನ್ಮುಖ ಆಟಗಾರ ಧ್ರುವ್‌ ಜುರೆಲ್‌ ಅವರ ತಂದೆಯು ನೇಮ್‌ ಸಿಂಗ್‌ ಜುರೆಲ್‌ ಅವರು 1999ರಲ್ಲಿ ಪಾಕಿಸ್ತಾನದ ಜತೆ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದಾರೆ. ಭಾರತೀಯ ಸೇನೆಯಲ್ಲಿ ನೇಮ್‌ ಸಿಂಗ್‌ ಜುರೆಲ್‌ ಅವರು ಹವಾಲ್ದಾರ್‌ ಆಗಿದ್ದರು. ಈಗ ಅವರು ನಿವೃತ್ತಿಯ ಜೀವನ ಸಾಗಿಸುತ್ತಿದ್ದು, ಮಗನನ್ನೂ ಸೇನೆಗೆ ಸೇರಿಸಲು ಬಯಸಿದ್ದರು. ಆದರೆ, ಧ್ರುವ್‌ ಜುರೆಲ್‌ ಅವರು ಕ್ರಿಕೆಟ್‌ನಲ್ಲಿ ಭವಿಷ್ಯ ಕಂಡುಕೊಂಡಿದ್ದು, ಇವರಿಗೆ ಕ್ರಿಕೆಟ್‌ ಕಿಟ್‌ ಕೊಡಿಸಲು ಧ್ರುವ್‌ ತಾಯಿ ಅವರು ಚಿನ್ನ ಅಡವಿಟ್ಟಿದ್ದರು ಎಂದು ತಿಳಿದುಬಂದಿದೆ.

ಬೃಹತ್‌ ಹಿನ್ನಡೆ ತಪ್ಪಿಸಿದ ಜುರೆಲ್‌

ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಮೂಲ್ಯ 90 ರನ್‌ ಗಳಿಸಿದ ಜುರೆಲ್, ಭಾರತ ತಂಡವು ಹೆಚ್ಚಿನ ರನ್‌ಗಳ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದರು. ಇಂಗ್ಲೆಂಡ್‌ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ಗಳನ್ನು ಬೆನ್ನತ್ತಿದ ಭಾರತ ತಂಡವು ಒಂದು ಹಂತದಲ್ಲಿ 176 ರನ್‌ಗಳ ಹಿನ್ನಡೆಯಲ್ಲಿದ್ದಾಗ 7 ವಿಕೆಟ್‌ ಬಿದ್ದಿದ್ದವು. ಆದ್ರೆ, ಧ್ರುಜ್‌ ಜುರೆಲ್‌ ಅವರು ತಾಳ್ಮೆಯ 90 ರನ್‌ ಗಳಿಸಿದ ಕಾರಣ ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳ ಹಿನ್ನಡೆ ಅನುಭವಿಸಲು ಸಾಧ್ಯವಾಯಿತು.

ಇದನ್ನೂ ಓದಿ: ಕೊಹ್ಲಿಗೆ ಮಗ ಹುಟ್ಟಿದ್ದೇ ತಡ‌, ನಿವೃತ್ತಿಯ ಭವಿಷ್ಯ ನುಡಿದ ಜ್ಯೋತಿಷಿ; ಏನಿದು ವೈರಲ್‌ ಪೋಸ್ಟ್?

ಧ್ರುವ್‌ ಜುರೆಲ್‌ ಅವರು ಮಹೇಂದ್ರ ಸಿಂಗ್‌ ಧೋನಿ ಹಾಗೂ ಸುನೀಲ್‌ ಗವಾಸ್ಕರ್‌ ಅವರ ಅಭಿಮಾನಿಯಾಗಿದ್ದಾರೆ. “ನಾನು ಎರಡು ಬಾರಿ ಧೋನಿ ಅವರನ್ನು ಭೇಟಿಯಾದೆ, ಆದರೆ, ಅವರ ಜತೆ ಮಾತನಾಡಿದ್ದು ಒಮ್ಮೆ ಮಾತ್ರ. ಆಗ, ಕೆಳ ಹಂತದಲ್ಲಿ ಆಡುವುದು ಥ್ಯಾಂಕ್‌ಲೆಸ್‌ ಜಾಬ್‌ ಆಗಿದೆ. ಪ್ರತಿ ಪಂದ್ಯವನ್ನೂ ನಾವೇ ಫಿನಿಶ್‌ ಮಾಡಲು ಆಗುವುದಿಲ್ಲ. ಆದರೆ, ಒಳ್ಳೆ ಮ್ಯಾಚ್‌ ಫಿನಿಶರ್‌ ಆಗುವ ಅವಕಾಶ ಇದೆ. ಯಶಸ್ಸು, ಹಿನ್ನಡೆ ಹೊರತುಪಡಿಸಿ, ಉತ್ತಮ ಆಟವಾಡು” ಎಂಬುದಾಗಿ ಅವರು ಸಲಹೆ ನೀಡಿದರು ಎಂದು ಇದಕ್ಕೂ ಮೊದಲು ಧ್ರುವ್‌ ಜುರೆಲ್‌ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version