Site icon Vistara News

IND vs ENG: ಧೋನಿಯ ಶೈಲಿಯಲ್ಲೇ ವಿಕೆಟ್​ ಕೀಪಿಂಗ್​ ನಡೆಸಿದ ಜುರೆಲ್; ವಿಡಿಯೊ ವೈರಲ್​

Dhruv Jurel Stunning Run Out

ರಾಜ್​ಕೋಟ್​: ಮಹೇಂದ್ರ ಸಿಂಗ್​ ಧೋನಿಯ(MS Dhoni) ಅಪ್ಪಟ ಅಭಿಮಾನಿಯಾಗಿರುವ ಟೀಮ್​ ಇಂಡಿಯಾದ ಯುವ ವಿಕೆಟ್​ ಕೀಪರ್​ ಧ್ರುವ್​ ಜುರೆಲ್​(India Wicket-Keeper Dhruv Jurel) ಅವರು ಧೋನಿಯಂತೆ ಕೀಪಿಂಗ್​ನಲ್ಲಿ ಮಿಂಚಿದ್ದಾರೆ. ಇಂಗ್ಲೆಂಡ್(IND vs ENG)​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ರನೌಟ್​ ಮಾಡಿ ಗಮನಸೆಳೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸಿ ಮಿಂಚಿದ್ದ ಬೆನ್​ ಡಕೆಟ್​ ಅವರು ದ್ವಿತೀಯ ಇನಿಂಗ್ಸ್​ನಲ್ಲಿ ರನೌಟ್​ಗೆ ಬಲಿಯಾದರು. ಜಸ್​ಪ್ರೀತ್​ ಬುಮ್ರಾ ಓವರ್​ನಲ್ಲಿ ಡೆಕೆಟ್​ ಕ್ವಿಕ್​ ಸಿಂಗಲ್​ ರನ್​ ಕಸಿಯಲು ಯತ್ನಿಸಿದರು. 30-ಯಾರ್ಡ್ ಸರ್ಕಲ್​ನಲ್ಲಿ​ ಫೀಲ್ಡಿಂಗ್​ ಮಾಡುತ್ತಿದ್ದ ಮೊಹಮ್ಮದ್​ ಸಿರಾಜ್​ ಓಡಿ ಬಂದು ಚೆಂಡನ್ನು ಹಿಡಿದು ವಿಕೆಟ್​ ಕೀಪರ್​ ಕಡೆಗೆ ಎಸೆದರು. ಎಸೆತ ವಿಕೆಟ್​ ನಿಂದ ದೂರ ಇದ್ದರೂ ಕೂಡ ಇದನ್ನು ಜುರೆಲ್​ ಜಾರಿ ಬಿದ್ದು ಹಿಡಿದು ಬೇಲ್ಸ್​ ಹಾರಿಸಿ ರನೌಟ್​ ಮಾಡಿದರು. ಈ ರನೌಟ್​ ಕಂಡ ಅನೇಕ ಮಾಜಿ ಆಟಗಾರರು ಜುರೆಲ್​ ಭವಿಷ್ಯದ ಭಾರತ ತಂಡದ ವಿಕೆಟ್​ ಕೀಪರ್​ ಎಂದು ಭವಿಷ್ಯ ನುಡಿದಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ಜುರುಲ್​ ಐಪಿಎಲ್​ ಆಡುವ ವೇಳೆ ಧೋನಿ ಅವರೊಂದಿಗೆ ಫೋಟೊ ಕೂಡ ತೆಗಿಸಿಕೊಂಡಿದ್ದರು. ಇದೇ ವೇಳೆ ಅವರು ತಾನು ಕೂಡ ಧೋನಿಯಂತೆ ವಿಕೆಟ್​ ಕೀಪರ್​ ಆಗಲು ಶ್ರಮಿಸುತ್ತೇನೆ ಎಂದಿದ್ದರು. ಇದೀಗ ಧೋನಿಯ ಶೈಲಿಯಲ್ಲೇ ವಿಕೆಟ್​ ಕೀಪಿಂಗ್​ ಮಾಡಿದ್ದಾರೆ. ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚಾಗಿ ಆಡುತ್ತಿದ್ದ ಅವರು​ 13 ಪಂದ್ಯಗಳನ್ನು ಆಡಿ 152 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ ICC WTC Points Table: ಆಸ್ಟ್ರೇಲಿಯಾ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಭಾರತ ತಂಡ

ಬಿಸಿಸಿಐ ನಡೆಸಿದ ವಿಶೇಚ ಸಂದರ್ಶನದಲ್ಲಿಯೂ ಧ್ರುವ್ ಜುರೆಲ್ ಅವರು ನನಗೆ ತಂದೆಯೇ ಹೀರೊ ಎಂದು ಹೇಳಿದ್ದರು. ನನ್ನ ಕ್ರಿಕೆಟ್​ ಪದಾರ್ಪಣೆಯನ್ನು ಅವರಿಗೆ ಅರ್ಪಿಸುವುದಾಗಿ ಹೇಳಿದ್ದರು. ಚೊಚ್ಚಲ ಪಂದ್ಯವನ್ನಾಡಿದ ಜುರೆಲ್​ ಮೊದಲ ಇನಿಂಗ್ಸ್​ನಲ್ಲಿ 46 ರನ್​ ಬಾರಿಸಿದ್ದರು. ಸುಧಾರಿತ ಮಟ್ಟದ ಕೀಪಿಂಗ್​ ಕೂಡ ನಡೆಸುತ್ತಿರುವ ಅವರು ಇದೇ ಪ್ರದರ್ಶನವನ್ನು ಮುಂದುವರಿಸಿದರೆ ಭಾರತ ಟೆಸ್ಟ್​ ತಂಡದ ಖಾಯಂ ವಿಕೆಟ್​ ಕೀಪರ್​ ಆಗುವ ಎಲ್ಲ ಸುವರ್ಣಾವಕಾಶ ಜುರೆಲ್​ ಮುಂದಿದೆ.

Exit mobile version