Site icon Vistara News

IND vs ENG: ಸ್ಟನ್ನಿಂಗ್​ ಕ್ಯಾಚ್​ ಹಿಡಿದು ರೂಟ್​ಗೆ ಪೆವಿಲಿಯನ್​ ರೂಟ್​ ತೋರಿದ ಜೈಸ್ವಾಲ್

Yashasvi Jaiswal's stunning reflex catch sends back Joe Root

ರಾಜ್​ಕೋಟ್​: ಇಂಗ್ಲೆಂಡ್(IND vs ENG)​ ತಂಡದ ಮಾಜಿ ನಾಯಕ ಜೋ ರೂಟ್(Joe Root)​ ಅವರನ್ನು ಟೀಮ್​ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ಸ್ಲಿಪ್​ನಲ್ಲಿ ಅದ್ಭುತ ಕ್ಯಾಚ್​ ಹಿಡಿದು ಔಟ್​ ಮಾಡಿದ ವಿಡಿಯೊ ವೈರಲ್(viral video)​ ಆಗಿದೆ. ಜಸ್​ಪ್ರೀತ್​ ಬುಮ್ರಾ(Jasprit Bumrah) ಓವರ್​ನಲ್ಲಿ ಈ ಘಟನೆ ನಡೆದಿದೆ.

ಮೂರನೇ ದಿನದಾಟದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ಆರಂಭಿಸಿದ ಜೋ ರೂಟ್​ ಅವರು ಬುಮ್ರಾ ಎಸೆತದಲ್ಲಿ ರಿವರ್ಸ್​ ಸ್ವೀಪ್​ ಮೂಲಕ ಬೌಂಡರಿ ಬಾರಿಸುವ ಪ್ರಯತ್ನಪಟ್ಟರು. ಈ ವೇಳೆ ಸ್ಲಿಪ್​ನಲ್ಲಿದ್ದ ಜೈಸ್ವಾಲ್​ ಈ ಕ್ಯಾಚನ್ನು ಅಷ್ಟೇ ಸೊಗಸಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ಜಸ್​ಪ್ರೀತ್​ ಬುಮ್ರಾ ಈ ವಿಕೆಟ್​ ಪಡೆಯುತ್ತಿದ್ದಂತೆ ರೂಟ್ ಅವರನ್ನು ಒಂಬತ್ತನೇ ಬಾರಿಗೆ ಔಟ್​ ಮಾಡಿದ ದಾಖಲೆ ಬರೆದರು.

ಜೈಸ್ವಾಲ್​ ಈ ಕ್ಯಾಚ್​ ಪಡೆಯುತ್ತಿದ್ದಂತೆ ಕಾಮೆಂಟ್ರಿ ಮಾಡುತ್ತಿದ್ದವರು, ವಾಹ್​…ಸೂಪರ್​ ಕ್ಯಾಚ್​…ಯಶಸ್ವಿ ಜೈಸ್ವಾಲ್​ ಅದ್ಭುತ ಫೀಲ್ಡರ್​….ನಿಜಕ್ಕೂ ಇದು ಅದ್ಭುತ ಕ್ಯಾಚ್​. ಮಿಂಚಿನ ಪ್ರತಿಫಲನ ಎಂದು ವರ್ಣಿಸಿದರು.

ಕಪ್ಪು ಪಟ್ಟಿ ಧರಿಸಿದ ಟೀಮ್​ ಇಂಡಿಯಾ ಆಟಗಾರರು


ಇತ್ತೀಗೆಚೆ ನಿಧನರಾದ ಭಾರತ ಕ್ರಿಕೆಟ್​ ತಂಡದ ಅತ್ಯಂತ ಹಿರಿಯ ಟೆಸ್ಟ್​ ಆಟಗಾರ ದತ್ತಾಜಿರಾವ್ ಗಾಯಕ್ವಾಡ್(Dattajirao Gaekwad) ಅವರ ಗೌರವಾರ್ಥವಾಗಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೂರನೇ ದಿನದಿನಾಟದಲ್ಲಿ ಟೀಮ್​ ಇಂಡಿಯಾ ಆಟಗಾರರು ಕೈಗೆ ಕಪ್ಪು ಬ್ಯಾಂಡ್‌ಗಳನ್ನು( India wear black armbands) ಧರಿಸಿ ಕಣಕ್ಕಿಳಿದರು.

ದತ್ತಾಜಿರಾವ್ ಗಾಯಕ್ವಾಡ್ ಅವರು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು. ವಯೋಸಹಜ ಕಾಯಿಲೆಗಳಿಂದ ಫೆ.13(ಮಂಗಳವಾರ)ರಂದು ನಿಧನ ಹೊಂದಿದ್ದರು. ಅವರಿಗೆ 95ನೇ ವಯಸ್ಸಾಗಿತ್ತು. 1959 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ದತ್ತಾಜಿರಾವ್ ಭಾರತವನ್ನು ಮುನ್ನಡೆಸಿದ್ದರು ಮತ್ತು 11 ಟೆಸ್ಟ್‌ಗಳಲ್ಲಿ ಭಾರತ ಪರ ಆಡಿದ್ದರು.

ಇದನ್ನೂ ಓದಿ IND vs ENG: 4 ವಿಕೆಟ್​ ಕಿತ್ತು ವಿಶೇಷ ದಾಖಲೆ ಬರೆದ ಮೊಹಮ್ಮದ್​ ಸಿರಾಜ್

ಈ ಪಂದ್ಯದಲ್ಲಿ ನಾಲ್ಕು ವಿಕೆಟ್​ ಕಿತ್ತು ಮಿಂಚಿದ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಸಿರಾಜ್(Mohammed Siraj)​ ಅವರು ವಿಶೇಷ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳನ್ನು ಪೂರೈಸಿದ್ದಾರೆ. ರಾಜ್​ಕೋಟ್​ನ ನಿರಂಜನ್​ ಶಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನಾದಟಲ್ಲಿ ಮೊನಚಾದ ಬೌಲಿಂಗ್​ ದಾಳಿ ಸಂಘಟಿಸಿದ ಸಿರಾಜ್​ 21.1 ಓವರ್​ ಬೌಲಿಂಗ್​ ನಡೆಸಿ 84 ರನ್​ ಬಿಟ್ಟುಕೊಟ್ಟು ಪ್ರಮುಖ ನಾಲ್ಕು ವಿಕೆಟ್​ ಉಡಾಯಿಸಿದರು. ಅವರ ಈ ಬೌಲಿಂಗ್​ ದಾಳಿಯಿಂದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 319 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪ್ರಥಮ ಇನಿಂಗ್ಸ್​ನಲ್ಲಿ 126 ರನ್​ಗಳ ಮುನ್ನಡೆ ಪಡೆದುಕೊಂಡಿತು.

ಈ ನಾಲ್ಕು ವಿಕೆಟ್​ಗಳೊಂದಿಗೆ ಮೊಹಮ್ಮದ್ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳನ್ನು ಕಬಳಿಸಿ ಈ ಸಾಧನೆ ಮಾಡಿದ ಭಾರತದ 33ನೇ ಬೌಲರ್​ ಎನಿಸಿಕೊಂಡರು. ಅವರ ಈ ಸಾಧನೆಗೆ ಐಪಿಎಲ್​ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಅಭಿನಂದನೆ ಸಲ್ಲಿಸಿದೆ. ಟ್ವಿಟರ್​ ಎಕ್ಸ್​ನಲ್ಲಿ ಸಿರಾಜ್​ ಫೋಟೊ ಶೇರ್​ ಮಾಡಿ ಪ್ರಶಂಸೆ ಸೂಚಿಸಿದೆ.

Exit mobile version