Site icon Vistara News

IND vs PAK : ​ ವಿರಾಟ್​ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಬಾಬರ್ ಅಜಂ; ಪಾಕಿಸ್ತಾನದ ಮಾಜಿ ಆಟಗಾರನ ಟೀಕೆ

IND vk PAK

ಬೆಂಗಳೂರು : 2024 ರ ಟಿ 20 ವಿಶ್ವಕಪ್ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ 44 ರನ್ ಗಳಿಸಿದ್ದ ಪಾಕ್​ ತಂಡದ ನಾಯಕ ಬಾಬರ್ ಅಜಮ್ (Babar Azam) ಟಿ 20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ. ಪಾಕಿಸ್ತಾನಿಗಳು ಮತ್ತು ಅವರ ಅಭಿಮಾನಿಗಳು ಈ ಮೈಲಿಗಲ್ಲಿನ ಬಗ್ಗೆ ಸಂಭ್ರಮದಲ್ಲಿದ್ದಾರೆ. ಆದರೆ, ಬಾಬರ್ ಸ್ಕೋರ್ ಮಾಡಿರುವುದೆಲ್ಲ ಸಣ್ಣಪುಟ್ಟ ತಂಡಗಳ ಜತೆ ಎಂಬುದು ಹಲವರ ಅಭಿಪ್ರಾಯ. ಬಾಬರ್ ಪಾಕಿಸ್ತಾನದ ಸ್ಟಾರ್ ಬ್ಯಾಟರ್​​ ಆಗಿದ್ದು, ತವರಿನಲ್ಲಿ ಮಾತ್ರ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ (IND vs PAK) ನಡುವಿನ ಪಂದ್ಯದ ವೇಳೆ ಈ ಚರ್ಚೆ ಮುನ್ನೆಲೆಗೆ ಬಂದಿದೆ.

2024ರ ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನವು ಭಾರತವನ್ನು ಎದುರಿಸಲಿದ್ದು, ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಬಾಬರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ನಾಯಕನನ್ನು ಭಾರತದ ಸ್ಟಾರ್ ಬ್ಯಾಟರ್​ಗಳಿಗೆ ಕೊಹ್ಲಿಗೆ ಹೋಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕನೇರಿಯಾ ಅವರು ಭಾರತೀಯ ದಂತಕಥೆಗೆಗೆ ಬಾಬರ್ ಕನಿಷ್ಠ ಹತ್ತರವೂ ಇಲ್ಲ ಎಂದು ವ್ಯಂಗ್ಯವಾಡಿದರು. 30 ವರ್ಷದ ಕನೇರಿಯಾ ಯುಎಸ್ಎ ಬೌಲಿಂಗ್ ಲೈನ್ಅಪ್ ವಿರುದ್ಧ ಬಾಬರ್​ ಹೇಗೆ ಹೆಣಗಾಡಿದ್ದರು ಎಂಬುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: INDvsPAK : ಪಾಕ್​ ಮತ್ತು ಭಾರತ ಪಂದ್ಯದ ಕುರಿತು ನಟ ಕಮಲ್​ ಹಾಸನ್​ ನೀಡಿರುವ ಹೇಳಿಕೆಯ ವಿಡಿಯ ಇಲ್ಲಿದೆ

ಬಾಬರ್ ಅಜಮ್ ಶತಕ ಬಾರಿಸಿದ ಕೂಡಲೇ ನೀವು ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆಗಳನ್ನು ಮಾಡಲಾಗುತ್ತಿದೆ. ಬಾಬಾರ್ ಅಜಂ ವಿರಾಟ್ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಎಂದು ಕನೇರಿಯಾ ಹೇಳಿದ್ದಾರೆ. ದೊಡ್ಡ ಬೌಲರ್​ಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲ. ಉತ್ತಮ ಬೌಲರ್​ಗಳಿಗೆ ರನ್​ ಗಳಿಸಲು ಸಾಧ್ಯವಾಗುವುದಿಲ್ಲ. ಅಮೆರಿಕದ ಬಲಿಷ್ಠ ಬೌಲಿಂಗ್ ವಿರುದ್ಧವೇ 40 ರನ್​ಗೆ ಔಟಾಗಿದ್ದಾರೆ. ಕೊಹ್ಲಿಯ ರೀತಿ ಉತ್ತಮ ಆಟಗಾರನಾಗಿದ್ದರೆ ಕ್ರೀಸ್​ನಲ್ಲಿ ಉಳಿದು ಆಟವನ್ನು ಗೆಲ್ಲಬೇಕಾಗಿತ್ತು. ಪಾಕಿಸ್ತಾನ ಏಕಪಕ್ಷೀಯವಾಗಿ ಪಂದ್ಯವನ್ನು ಗೆಲ್ಲಬೇಕಿತ್ತು, “ಎಂದು ಕನೇರಿಯಾ ಹೇಳಿದ್ದಾರೆ.

ಭಾರತ ತಂಡವು ಪಾಕಿಸ್ತಾನವನ್ನು ಕೆಟ್ಟದಾಗಿ ಸೋಲಿಸುತ್ತದೆ. ಪಾಕಿಸ್ತಾನ ಭಾರತವನ್ನು ಸೋಲಿಸುವ ಸಾಮರ್ಥ್ಯ ಹೊಂದಿಲ್ಲ. ಪಾಕಿಸ್ತಾನ ವಿಶ್ವಕಪ್​ಗೆ ಬಂದಾಗಲೆಲ್ಲಾ ತಮ್ಮ ಬೌಲಿಂಗ್ ಘಟಕವನ್ನು ಶ್ಲಾಘಿಸುತ್ತಲೇ ಇರುತ್ತಾರೆ. ಅದರೆ, ಅವರ ಬೌಲಿಂಗ್ ಅನ್ನು ಸಲೀಸಾಗಿ ಎದುರಿಸಲು ಸಾಧ್ಯ, “ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಜಯ ಅನಿವಾರ್ಯ

ಪಾಕಿಸ್ತಾನದ ಟಿ 20 ವಿಶ್ವಕಪ್ ಅಭಿಯಾನದ ಬಗ್ಗೆ ಮಾತನಾಡುವುದಾದರೆ, ಮೆನ್ ಇನ್ ಗ್ರೀನ್ ತಂಡವು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ. ತಂಡಕ್ಕೆ ಗೆಲುವಿನ ಅವಶ್ಯಕತೆಯಿದೆ. ಯುಎಸ್ಎ ವಿರುದ್ಧದ ಸೋಲನ್ನು ಟಿ 20 ವಿಶ್ವಕಪ್ ಇತಿಹಾಸದ ಅತಿದೊಡ್ಡ ಅವಮಾನ ಎಂದು ಕರೆಯಲಾಗುತ್ತಿದೆ. ನಿರ್ಣಾಯಕ ಪಂದ್ಯಕ್ಕೆ ಮೊದಲು ತಂಡದ ನೈತಿಕ ಸ್ಥೈರ್ಯವು ಕೆಳಮಟ್ಟಕ್ಕೆ ಕುಸಿದಿದೆ. ಹಿಂದಿನ ಆವೃತ್ತಿಯಲ್ಲಿ ಫೈನಲ್ ತಲುಪಿದ ಮಾಜಿ ಚಾಂಪಿಯನ್ಸ್ ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

Exit mobile version