Site icon Vistara News

IPL 2024 : ಲಕ್ನೊ ವಿರುದ್ಧ 19 ರನ್ ವಿಜಯ, ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಮುಗಿಸಿದ ಡೆಲ್ಲಿ

IPL 2024

ನವ ದೆಹಲಿ: ಸಂಘಟಿತ ಹೋರಾಟದ ಬಲದಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 17ನೇ (IPL 2024) ಅವೃತ್ತಿಯ ಐಪಿಎಲ್​ನ 64ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ 19 ರನ್​ಗಳ ಅಧೀಕಾರಯುತ ಗೆಲುವು ಸಾಧಿಸಿತು. ಇದು ಡೆಲ್ಲಿ ತಂಡಕ್ಕೆ ಹಾಲಿ ಆವೃತ್ತಿಯ ಲೀಗ್​ನ ಕೊನೇ ಪಂದ್ಯ. ಅದೇ ರೀತಿ ಐಪಿಎಲ್​​ನ ಕೊನೇ ಅಭಿಯಾನ ಕೂಡ. 14ರಲ್ಲಿ ಏಳು ಗೆಲುವು ಸಾಧಿಸಿರುವ ಡೆಲ್ಲಿ 14 ಅಂಕಗಳನ್ನು ಸಂಪಾದಿಸಿದೆ. ಆದರೆ, ಇನ್ನೂ ಐದನೇ ಸ್ಥಾನದಲ್ಲಿದೆ. ಈ ತಂಡ ನಾಲ್ಕರೊಳಗೆ ಪ್ರವೇಶ ಪಡೆಯುವ ಯಾವುದೇ ಸಾಧ್ಯತೆಗಳು ಇಲ್ಲದ ಕಾರಣ ಅವರ ಅಭಿಯಾನ ಕೊನೆಗೊಂಡಿದೆ. ಇದೇ ವೇಳೆ ಸತತ ಮೂರು ಸೋಲುಗಳಿಗೆ ಒಳಗಾದ ಲಕ್ನೊ ತಂಡ ನಿರಾಶಾದಾಯಕ ಅಭಿಯಾನ ಮುಂದುವರಿಸಿತು.

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Team India : ದ್ರಾವಿಡ್​ ಬಳಿಕ ಇವರೇ ಆಗ್ತಾರೆ ಭಾರತ ತಂಡದ ಕೋಚ್​​

ಡೆಲ್ಲಿಯ ಪಿಚ್​ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್​​ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್​ಗೆ 3 ವಿಕೆಟ್​​) ಡೆಲ್ಲಿಯ ಬೌಲರ್​ಗಳ ಅಬ್ಬರಕ್ಕೆ ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಸಲ್​ ಪೂರನ್​ (27 ಎಸೆತಕ್ಕೆ 61 ರನ್​) ಹಾಗೂ ಅರ್ಶದ್​ ಖಾನ್​ (33 ಎಸೆತಕ್ಕೆ 58 ರನ್​) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್​ (12), ಕೆ. ಎಲ್​ ರಾಹುಲ್​ (05), ಮಾರ್ಕ್ ಸ್ಟೊಯ್ನಿಸ್​ (05), ದೀಪಕ್ ಹೂಡ (0) ಆಯುಷ್​ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.

ಡೆಲ್ಲಿಯ ಭರ್ಜರಿ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಫೇಸರ್ ಮೆಗ್​ ಕುರ್ಕ್ ಅವರ ಶೂನ್ಯ ಸಂಪಾದನೆ ಮೂಲಕ ಆಘಾತಕ್ಕೆ ಒಳಗಾಯಿತು. ಆದರೆ ಅಭಿಷೇಕ್ ಪೊರೆಲ್​ 58 ರನ್ ಬಾರಿಸಿ ತಂಡಕ್ಕೆ ನೆರವಾದರು. ಬಳಿಕ ಶಾಯ್​ ಹೋಪ್​ 38 ರನ್ ಬಾರಿಸಿದರೆ ರಿಷಭ್ ಪಂತ್​ 33 ರನ್ ಕೊಡುಗೆ ಕೊಟ್ಟರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್​ 25 ಎಸೆತಕ್ಕೆ 57 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಲಕ್ನೊ ಪರ ನವಿನ್ ಉಲ್ ಹಕ್ 5 ವಿಕೆಟ್​ ಪಡೆದರೂ 52 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.

Exit mobile version