ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 3 ವಿಕೆಟ್ಗೆ 277 ರನ್ ಬಾರಿಸಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್ಸಿಬಿ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ಗೆ 263 ರನ್ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್ 11 ವರ್ಷಗಳ ಬಳಿಕ ಮೀರಿ ನಿಂತಿದೆ.
ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ತಂಡಗಳು
ಸನ್ರೈಸರ್ಸ್ ಹೈದರಾಬಾದ್-3 ವಿಕೆಟ್ಗೆ 277(ಮುಂಬೈ ಇಂಡಿಯನ್ಸ್ ವಿರುದ್ಧ)
ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ಗೆ 263( ಪುಣೆ ವಾರಿಯರ್ಸ್ ವಿರುದ್ಧ)
ಲಕ್ನೋ ಸೂಪರ್ ಜೈಂಟ್ಸ್-5 ವಿಕೆಟ್ಗೆ 257(ಪಂಜಾಬ್ ಕಿಂಗ್ಸ್ ವಿರುದ್ಧ)
ರಾಯಲ್ ಚಾಲೆಂಜರ್ಸ್ ಬೆಂಗಳೂರು- 3 ವಿಕೆಟ್ಗೆ 248( ಗುಜರಾತ್ ಲಯನ್ಸ್ ವಿರುದ್ಧ
ಕೋಲ್ಕತ್ತಾ ನೈಟ್ ರೈಡರ್ಸ್-6 ವಿಕೆಟ್ಗೆ 246(ರಾಜಸ್ಥಾನ್ ರಾಯಲ್ಸ್ ವಿರುದ್ಧ)
ಚೆನ್ನೈ ಸೂಪರ್ ಕಿಂಗ್ಸ್-5 ವಿಕೆಟ್ಗೆ 240(ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ)
ಚೆನ್ನೈ ಸೂಪರ್ ಕಿಂಗ್ಸ್-2 ವಿಕೆಟ್ಗೆ 235(ಕೆಕೆಆರ್ ವಿರುದ್ಧ)
ಇದನ್ನೂ ಓದಿ IPL 2024: ಹೆಡ್, ಅಭಿಷೇಕ್ ತೂಫಾನ್ ಬ್ಯಾಟಿಂಗ್; ದಾಖಲೆಗಳ ಸುರಿಮಳೆ
𝗦𝗶𝗺𝗽𝗹𝘆 𝗯𝗿𝗶𝗹𝗹𝗶𝗮𝗻𝘁!
— IndianPremierLeague (@IPL) March 27, 2024
An all time IPL record now belongs to the @SunRisers 🧡
Scocrecard ▶️ https://t.co/oi6mgyCP5s#TATAIPL | #SRHvMI pic.twitter.com/eRQIYsLP5n
10 ಓವರ್ನಲ್ಲಿ ಗರಿಷ್ಠ ಮೊತ್ತ
ಹೈದರಾಬಾದ್ ತಂಡ 10 ಓವರ್ಗಳಲ್ಲಿ ಕೇವಲ 2 ವಿಕೆಟ್ಗೆ 148 ರನ್ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿಯೇ 10 ಓವರ್ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.
ಅತಿ ಕಡಿಮೆ ಓವರ್ನಲ್ಲಿ 100 ರನ್
7 ಓವರ್ನಲ್ಲಿ 100 ರನ್ ಗಡಿ ದಾಟುವ ಮೂಲಕ ಐಪಿಎಲ್ ಇತಿಹಾಸದ ಅತಿ ಕಡಿಮೆ ಓವರ್ನಲ್ಲಿ 100 ರನ್ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್ ವಿರುದ್ಧ ಮುಂಬೈ ಕೇವಲ 6 ಓವರ್ನಲ್ಲಿ ಈ ಸಾಧನೆ ಮಾಡಿತ್ತು. ಪವರ್ ಪ್ಲೇಯಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.