Site icon Vistara News

IPL 2024: ರಾಜಸ್ಥಾನ್ ರಾಯಲ್ಸ್​​ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

ಬೆಂಗಳೂರು: ಉಡುಪಿ ಜಿಲ್ಲೆಯ ಪಾಂಗಾಳ ಮೂಲದ, ದೇಶೀಯ ಕ್ರಿಕೆಟ್​ನಲ್ಲಿ ಮುಂಬಯಿ(Mumbai’s Ranji Trophy) ತಂಡವನ್ನು ಪ್ರತಿನಿಧಿಸುವ ತನುಷ್‌ ಕೋಟ್ಯಾನ್‌(Tanush Kotian) ಅವರಿಗೆ ಐಪಿಎಲ್(IPL 2024)​ ಆಡುವ ಅದೃಷ್ಟ ಒಲಿದು ಬಂದಿದೆ. ಆಸ್ಟ್ರೇಲಿಯಾದ ಅನುಭವಿ ಸ್ಪಿನ್​ ಬೌಲರ್​ ಆ್ಯಂಡ ಜಂಪಾ(Adam Zampa) ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲಿಗೆ ರಾಜಸ್ಥಾನ್​ ರಾಯಲ್ಸ್(Rajasthan Royals) ಫ್ರಾಂಚೈಸಿ ಮೂಲ ಬೆಲೆ 20 ಲಕ್ಷ ರೂ. ನೀಡಿ​ ತನುಷ್‌ ಕೋಟ್ಯಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.


ಕರಾವಳಿ ಮೂಲದ ಕ್ರಿಕೆಟಿಗ

ಉಡುಪಿ ಜಿಲ್ಲೆಯ ಪಾಂಗಾಳ ಮೂಲದ ತನುಷ್‌ ಕೋಟ್ಯಾನ್‌ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಬ್ಯಾಟಿಂಗ್​ ಮತ್ತು ಬೌಳಿಂಗ್​ನಲ್ಲಿ ಅಮೋಘ ಆಲ್​ರೌಂಡರ್​ ಪ್ರದರ್ಶನ ತೋರಿದ್ದರು. ವಿದರ್ಭ ಎದುರಿನ ಫೈನಲ್​ ಪಂದ್ಯದಲ್ಲಿ ಘಾತಕ ಬೌಲಿಂಗ್​ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತನುಷ್‌ ಕೋಟ್ಯಾನ್‌ ಪಾಂಗಾಳ ವಿಜಯಾ ಬ್ಯಾಂಕ್‌ ಬಳಿಯ ತುಳ್ಳಿಮಾರ್‌ ಹೌಸ್‌ನ ಕರುಣಾಕರ್‌ ಕೋಟ್ಯಾನ್‌ ಮತ್ತು ಹೆಜಮಾಡಿ ಕೋಡಿ ನಡಿಕುದ್ರು ಮಲ್ಲಿಕಾ ಕೋಟ್ಯಾನ್‌ ದಂಪತಿಯ ಪತ್ರನಾಗಿದ್ದಾರೆ. ಕಳೆದ 3 ವರ್ಷಗಳಿಂದ ಮುಂಬೈ ರಣಜಿ ತಂಡದ ಪರ ಆಡುತ್ತಿದ್ದಾರೆ. ಹಲವು ಯುವ ಕ್ರಿಕೆಟ್​ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿರುವ ಐಪಿಎಲ್​ಗೆ(IPL 2024) ಕಾಲಿಟ್ಟಿರುವ ಅವರು ಇಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿ ಮುಂದೊಂದು ದಿನ ಟೀಮ್​ ಇಂಡಿಯಾಕ್ಕೂ ಕಾಲಿಟ್ಟರೂ ಅಚ್ಚರಿ ಪಡೆಬೇಕಿಲ್ಲ.

ಇದನ್ನೂ ಓದಿ IPL 2024 : ಈ ಬಾರಿ ಕೊಹ್ಲಿಗೇ ಆರೆಂಜ್​ ಕ್ಯಾಪ್​​ ಎಂದ ಆರ್​ಸಿಬಿ ಮಾಜಿ ಸ್ಫೋಟಕ ಬ್ಯಾಟರ್​

ಕೋಟ್ಯಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈನ ಉದಯೋನ್ಮುಖ ತಾರೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿ ಋತುವಿನಲ್ಲಿ, ಕೋಟ್ಯಾನ್ 10 ಪಂದ್ಯಗಳಿಂದ 16.96 ಸರಾಸರಿಯಲ್ಲಿ 29 ವಿಕೆಟ್ಗಳನ್ನು ಪಡೆದರು. ಅವರು 10 ಪಂದ್ಯಗಳಲ್ಲಿ 41 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 502 ರನ್ ಗಳಿಸುವ ಮೂಲಕ ಬ್ಯಾಟ್‌ನೊಂದಿಗೆ ಸೂಕ್ತ ಗ್ರಾಹಕ ಎಂದು ತೋರಿಸಿದರು. ಅವರು ಬರೋಡಾ ವಿರುದ್ಧ ಔಟಾಗದೆ 120 ರನ್ ಗಳಿಸಿದ್ದರು ಮತ್ತು ತಮಿಳುನಾಡು ವಿರುದ್ಧದ ಸೆಮಿಫೈನಲ್‌ನಲ್ಲಿ ಪ್ರಮುಖ 89 ರನ್ ಗಳಿಸಿದ್ದರು.


ತಂದೆಗೂ ಅಪಾರ ಕ್ರಿಕೆಟ್ ಕ್ರೇಜ್​


ತನುಷ್‌ ಕೋಟ್ಯಾನ್‌ ಕ್ರಿಕೆಟ್​ ಕ್ಷೇತ್ರಕ್ಕೆ ಕಾಲಿಡಲು ಅವರ ತಂದೆ ಕರುಣಾಕರ್‌ ಕೋಟ್ಯಾನ್‌ ಕೂಡ ಪ್ರಮುಖ ಕಾರಣ. ಕರುಣಾಕರ್‌ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಮುಂಬಯಿ ಟಾಟಾ ನ್ಪೋರ್ಟ್ಸ್​ನಲ್ಲಿ ಆಡುವ ಅವಕಾಶವನ್ನೂ ಕೂಡ ಪಡೆದಿದ್ದರು. ಆದರೆ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗದೇ ಇದ್ದಾಗ ಅವರು ಕೋಚಿಂಗ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ರಣಜಿಯಲ್ಲಿ ಅಂಪೈರ್​ ಆಗಿ ತನ್ನ ಕ್ರಿಕೆಟ್‌ ಆಸಕ್ತಿಯನ್ನು ಮುಂದುವರಿದರು.

Exit mobile version