ಕೋಲ್ಕತ್ತಾ: ವಿರಾಟ್ ಕೊಹ್ಲಿ(Virat Kohli) ಅವರು ಜೂನಿಯರ್ ಆಟಗಾರರಿಗೆ ಏನಾದರು ಗಿಫ್ಟ್ ನೀಡುತ್ತಿರುತ್ತಾರೆ. ಇದೇ ರೀತಿ ರಿಂಕು ಸಿಂಗ್(Rinku Singh) ಅವರಿಗೆ ಬ್ಯಾಟ್ ಒಂದನ್ನು ನೀಡಿದ್ದರು. ಆದರೆ ಈ ಬ್ಯಾಟನ್ನು ರಿಂಕು ಮುರಿದು ಹಾಕಿದ್ದಾರೆ.(IPL 2024) ಬಳಿಕ ಈ ವಿಚಾರವನ್ನು ಕೊಹ್ಲಿ ಜತೆ ಹೇಳಿದ್ದಾರೆ. ಉಭಯ ಆಟಗಾರರ ಈ ಸಂಭಾಷಣೆಯ ವಿಡಿಯೊವನ್ನು ಕೆಕೆಆರ್ ತನ್ನ ಅಧಿಕೃತ ಟ್ವೀಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಕೆಕೆಆರ್(KKR) ಮತ್ತು ಆರ್‌ಸಿಬಿ(RCB) ತಂಡಗಳು ಇಂದು ಈಡನ್ ಗಾರ್ಡನ್ಸ್ನಲ್ಲಿ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನಾಡಲು ಅಭ್ಯಾಸ ನಡೆಸುವ ವೇಳೆ ರಿಂಕು ಸಿಂಗ್ ಅವರು ಕೊಹ್ಲಿ ಬಳಿ ಬಂದು ಭಾಯ್ ನೀವು ಕೊಟ್ಟ ಬ್ಯಾಟ್ ಮುರಿದು ಹೋಯಿತು ಎಂದರು. ಅರೇ ನನ್ನ ಬ್ಯಾಟ್ ಮುರರಿದು ಹಾಕಿದೆಯಾ ಎಂದು ಕೊಹ್ಲಿ ಸರಿಯಾಗಿ ಬೈದರು. ಇವರಿಬ್ಬರ ಸಂಭಾಷಣೆ ಈ ರೀತಿ ಇತ್ತು.
ರಿಂಕು: ಭಾಯ್ ನೀವು ಕೊಟ್ಟಿರುವ ಬ್ಯಾಟ್ ಮುರಿದು ಹೋಗಿದೆ…
ಕೊಹ್ಲಿ: ನನ್ನ ಬ್ಯಾಟ್, ನಾನು ಕೊಟ್ಟಿದ್ದ ಬ್ಯಾಟ್ ಮುರಿದು ಹಾಕಿದ್ದೀಯಾ?
ರಿಂಕು: ಹ್ಹು ಅಣ್ಣ…
ಕೊಹ್ಲಿ; ಎಲ್ಲಿ, ಹೇಗೆ ಮುರಿದು ಹೋಯಿತು?
ರಿಂಕು: ಸ್ಪಿನ್ ಬೌಲಿಂಗ್ಗೆ ಬ್ಯಾಟಿಂಗ್ ಅಭ್ಯಾಸ ಮಾಡುತಿದ್ದ ವೇಳೆ ಬ್ಯಾಟ್ನ ಕೆಳ ಭಾಗದ ಮುಂದೆ ಸೀಳಿ ಹೋಗಿದೆ
ಕೊಹ್ಲಿ: ನನಗೆ ಅದರ ಮಾಹಿತಿ ಬೇಕಾಗಿಲ್ಲ. ಮೊದಲ ಮ್ಯಾಚ್ನಲ್ಲಿ ಒಂದು ಬ್ಯಾಟ್ ಕೊಟ್ಟಿದ್ದೀನಿ. ಈಗ 2ನೇ ಮ್ಯಾಚ್ನಲ್ಲಿ ಇನ್ನೊಂದು ಬ್ಯಾಟ್ ಕೊಡಬೇಕಾ?
ರಿಂಕು: ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ. ಬೇಕಾದ್ರೆ ನೀವು ಕೊಟ್ಟ ಬ್ಯಾಟ್ ಮುರಿದು ಹೋಗಿರುವುದನ್ನು ತೋರಿಸಲೇ?.
ಕೊಹ್ಲಿ: ಬೇಡ. ಇನ್ನು ಬ್ಯಾಟ್ ಕೊಡುವುದಿಲ್ಲ.
ರಿಂಕು: ಅಲ್ಲ ನಿಮ್ಮ ಬ್ಯಾಟ್ ಮಾರಟಕ್ಕಿದೆಯೇ?
ಕೊಹ್ಲಿ: ಯಾರಿಗೆ ಮಾರಾಟ ಮಾಡಲಿ?. ಈ ಎಲ್ಲ ಸಂಭಾಷಣೆಯನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಈ ವಿಡಿಯೊ ವೈರಲ್ ಆಗಿದೆ.
“Virat bhai ne ek bat diya thha… jo bat diya thha, woh mere se toot gaya” 😂 pic.twitter.com/qoJWWs2fik
— KolkataKnightRiders (@KKRiders) April 21, 2024
ವಿರಾಟ್ ಕೊಹ್ಲಿ ಅವರು ಈ ಬಾರಿಯ ಐಪಿಎಲ್ನಲ್ಲಿ ಆಡಿದ 7 ಪಂದ್ಯಗಳಿಂದ 361 ರನ್ ಬಾರಿಸಿ ಅತ್ಯಧಿಕ ರನ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಿಂಕು ಸಿಂಗ್ 6 ಪಂದ್ಯಗಳನ್ನಾಡಿ 83 ರನ್ ಬಾರಿಸಿದ್ದಾರೆ. ಈ ಬಾರಿ ಅವರಿಗೆ ಹೆಚ್ಚಿನ ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲ. ಹೀಗಾಗಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ IPL 2024: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ವೇಗದ ಅರ್ಧಶತಕ ಬಾರಿಸಿದ ಮೆಕ್‌ಗುರ್ಕ್
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಆರ್‌ಸಿಬಿ
ಆರ್‌ಸಿಬಿ ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್ ಜೀವಂತರವಿರಿಸಬೇಕಿದ್ದರೆ ಆರ್ಸಿಬಿಗೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ. ಒಂದೊಮ್ಮೆ ಸೋತರೆ ಟೂರ್ನಿಯಿಂದ ಬಹುತೇಖ ಹೊರಬೀಳಲಿದೆ. ಇದನ್ನೂ ತಪ್ಪಿಸಬೇಕಾದರೆ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧದ ಪಂದ್ಯದಿಂದಲೇ ಗೆಲುವಿನ ಅಭಿಯಾನ ಆರಂಭಿಸಬೇಕಿದೆ. ಆದರೆ ಮಾತ್ರ ಪ್ಲೇ ಆಫ್ ಆಸೆ ಜೀವಂತವಿರುತ್ತದೆ.
Ready? 𝐑𝐞𝐚𝐝𝐲! 🔥💪 pic.twitter.com/VmuPSS90Nu
— KolkataKnightRiders (@KKRiders) April 21, 2024
ಕೆಜೆಆರ್ಗೆ ಚಿಂತೆಯಿಲ್ಲ
ಕೆಕೆಆರ್ ತಂಡ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕ ಸಂಪಾದಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಆರ್‌ಸಿಬಿ ವಿರುದ್ಧ ಸೋತರೂ ಕೂಡ ತಂಡಕ್ಕೆ ಯಾವುದೇ ಹಾನಿಯಾಗದು. ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 3 ಅಥವಾ 4 ಪಂದ್ಯ ಗೆದ್ದರೂ ಸುಲಭವಾಗಿ ಪ್ಲೇ ಆಫ್ಗೇರಬಹುದು.